SHIVAMOGGA | MALENADUTODAY NEWS | ಮಲೆನಾಡು ಟುಡೆ Nov 18, 2024
ಈಜುಕೊಳದಲ್ಲಿ ಸಂಭವಿಸಿದ ದುರಂತದಲ್ಲಿ ಮೂವರು ಯುವತಿಯರು ಸಾವನ್ನಪ್ಪಿದ್ದಾರೆ. ಮೈಸೂರಿನಿಂದ ಬಂದಿದ್ದ ಮೂವರು ಎಂಜಿನಿಯರಿಂಗ್ ಪದವಿ ವಿದ್ಯಾರ್ಥಿನಿಯರು ಮಂಗಳುರು ಹೊರವಲಯದ ಸೋಮೇಶ್ವರದ ಪೆರಿಬೈಲ್‌ನ ಬೆಟ್ಟಪ್ಪಾಡಿ ಕ್ರಾಸ್‌ನ ವಾಸ್ಕೊ ರೆಸಾರ್ಟ್‌ನ ಈಜುಕೊಳದಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ.
ನಿನ್ನೆ ಬೆಳಗ್ಗೆ ಈಜುಕೊಳಕ್ಕೆ ಇಳಿದಿದ್ದ ಮೂವರು ವಿದ್ಯಾರ್ಥಿನಿಯರು, ಈಜಾಡುವ ವಿಡಿಯೋ ಮಾಡಿಕೊಳ್ಳುವ ಇರಾದೆಯಲ್ಲಿದ್ದರು. ಆದರೆ ಈಜುಕೊಳದ ಆಳ ಅರಿಯದೇ ಓರ್ವ ವಿದ್ಯಾರ್ಥಿನಿಯು ಕೊಳದ ಮಧ್ಯಕ್ಕೆ ಹೋಗಿದ್ದಾರೆ. ಪರಿಣಾಮ ಅವರು ಮುಳುಗಲು ಆರಂಭಿಸಿದ್ದಾರೆ. ಆಕೆಯನ್ನು ಉಳಿಸಲು ಇನ್ನಿಬ್ಬರು ವಿದ್ಯಾರ್ಥಿನಿ ತೆರಳಿದ್ದು ಅವರು ಸಹ ನೀರಲ್ಲಿ ಮುಳುಗಿದ್ದಾರೆ. ಇವರೆಲ್ಲರಿಗೂ ಈಜು ಬರುತ್ತಿರಲಿಲ್ಲ ಎಂದು ಹೇಳಲಾಗುತ್ತಿದೆ. ಹಾಗಾಗಿಯೇ ಮೂವರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ.
ಮೃತರನ್ನು ಜಿಎಸ್‌ಎಸ್‌ಎಸ್ ಮಹಿಳಾ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ವಿಭಾಗದ 5ನೇ ಸೆಮಿಸ್ಟರ್ ವಿದ್ಯಾರ್ಥಿನಿಯರಾದ, ಕೀರ್ತನಾ ಎನ್. (21), ನಿಶಿತಾ ಎಂ.ಡಿ (21) ಪಾರ್ವತಿ ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ರೆಸಾರ್ಟ್ ಮಾಲೀಕರನ್ನ ಅರೆಸ್ಟ್ ಮಾಡಲಾಗಿದೆ.
Mangaluru, Karnataka: Three women from Mysuru, Nishitha M.D. (21), Parvathi S. (20), and Keerthana N. (21), tragically drowned in a swimming pool at a resort in Ullal. The resort staff discovered their bodies and immediately notified the police. CCTV footage of the incident has… pic.twitter.com/lcFKoPsjNB
— IANS (@ians_india) November 17, 2024
SUMMARY |Mangaluru: Three girls drowning in swimming pool incident; owner detained, resort sealed
KEY WORDS | Mangaluru, Three girls drowning, swimming pool incident, owner detained, resort sealed