ಮುಸ್ಲಿಮರ ಮೀಸಲಾತಿಯನ್ನು ಶೇ 8 ರಷ್ಟು ಹೆಚ್ಚಿಸಿ | ಸರ್ಕಾರದ ವಿರುದ್ಧ SDPI ಜಾಥಾ

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 11, 2024

ಶಿವಮೊಗ್ಗ | ಮುಸ್ಲಿಮರ ಮೀಸಲಾತಿಯನ್ನು ಶೇಕಡಾ 8 ರಷ್ಟು ಹೆಚ್ಚಿಸುವುದು ಸೇರಿದಂತೆ 3 ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸಬೇಕೆಂದು ಸೋಶಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ ಬೆಳಗಾವಿ ಚಲೋ ಅಂಬೇಡ್ಕರ್‌ ಜಾಥಾ 2 ಅನ್ನು ಹಮ್ಮಿಕೊಂಡಿದೆ. ಈ ಕುರಿತು ಸೋಶಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ ಜಿಲ್ಲಾ ಸಮಿತಿ ಅಧ್ಯಕ್ಷ ಇಮ್ರಾನ್‌ ಅಹಮದ್‌ ಹೇಳಿದರು.

ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ನಾವು ಈ ಹಿಂದೆ ಮುಸ್ಲಿಮರ ಮೀಸಲಾತಿ ಹೆಚ್ಚಳ, ಒಳಮೀಸಲಾತಿ ಜಾರಿಗೆ ತರುವುದು ಹಾಗೆಯೇ ಕಾಂತರಾಜ್‌ ಆಯೋಗದ ವರದಿಯನ್ನು ಜಾರಿಗೆ ತರಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಿದ್ದೆವು. ಆದರೆ ಸರ್ಕಾರ ನಮ್ಮ ಮನವಿಯನ್ನು ತಿರಸ್ಕರಿಸಿತ್ತು. ಹಾಗಾಗಿ ಈ ಬಾರಿ ಈ ಹಿಂದಿನ ಮೂರು ಬೇಡಿಕೆಗಳಿಗೆ ವಕ್ಫ್‌ ಆಸ್ತಿ ವಿಚಾರವನ್ನು ಸೇರಿಸಿ ಜಾಥಾವನ್ನು ಹಮ್ಮಿಕೊಂಡಿದ್ದೇವೆ ಎಂದರು. ಈ ಜಾಥಾ ಈಗಾಗಲೇ ಉಡುಪಿಯಿಂದ ಆರಂಭಗೊಂಡಿದೆ. ಮಂಗಳೂರು ಚಿಕ್ಕಮಗಳೂರು ಮೂಲಕ ತೆರಳಿ ಡಿಸೆಂಬರ್‌16 ರಂದು ಬೆಳಗಾವಿ ತಲುಪಲಿದೆ. ಹಾಗೆಯೇ ಡಿಸೆಂಬರ್‌ 12ರಂದು ರಾತ್ರಿ 9 ಗಂಟೆಗೆ ಜಾಥಾ ಶಿವಮೊಗ್ಗ ತಲುಪಲಿದ್ದು, ಬೈಪಾಸ್ ನಲ್ಲಿರುವ ದಿಲ್ಲಿ ದರ್ಬಾರ್ ಹೋಟೆಲ್‌ನ ಎದುರಿನ ಜಾಗದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಈ ಜಾಥಾದಲ್ಲಿ ರಿಯಾಜ್ ಕಡಂಬು, ಭಾಸ್ಕರ್ ಪ್ರಸಾದ್ ಸೇರಿ 22 ನಾಯಕರು ಭಾಗಿಯಾಗಲಿದ್ದಾರೆ ಎಂದರು. 

ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾದ ಬೇಡಿಕೆಗಳೇನು

ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಯನ್ನು ಸರ್ಕಾರ ಕೂಡಲೇ ಜಾರಿಗೊಳಿಸಬೇಕು ಹಾಗೆಯೇ ಮುಸ್ಲಿಮರಿಗೆ ಪ್ರಸ್ತುತ ನಿಡುತ್ತಿರುವ ಶೇಕಡಾ 4 ರಷ್ಟು ಮೀಸಲಾತಿಯನ್ನು ಪುನರ್ಸ್ಥಾಪಿಸಿ ಶೇಕಡಾ 8ಕ್ಕೆ ಏರಿಸಬೇಕು. ಕಾಂತರಾಜ್ ಆಯೋಗದ ವರದಿಯನ್ನು ಸಾರ್ವಜನಿಕಗೊಳಿಸಿ ಮತ್ತು ಜಾರಿಗೊಳಿಸಬೇಕು. ಬಿಜೆಪಿ ಸರ್ಕಾರ ಸಂವಿಧಾನ ವಿರೋಧಿಯಾಗಿ ಜಾರಿಗೆ ತರಲು ಹೊರಟಿರುವ ವಕ್ಫ್ ತಿದ್ದುಪಡಿ ಮಸೂದೆಯನ್ನು ಜಾರಿಗೊಳಿಸಬಾರದೆನ್ನುವ ನಿರ್ಣಯವನ್ನು ಸದನದಲ್ಲಿ ಕೈಗೊಳ್ಳಬೇಕು ಎಂಬುದು ಎಸ್‌.ಡಿ.ಪಿ.ಐ ನ ಬೇಡಿಕೆಗಳಾಗಿದೆ.

SUMMARY | The Social Democratic Party of India (SDPI) has organised the Belagavi Chalo Ambedkar Jatha 2 demanding that the state government fulfil three demands, including an 8 per cent increase in the 2B reservation for Muslims

 

KEYWORDS | The Social Democratic Party of India,  Belagavi Chalo, Ambedkar Jatha ,2   2B reservation Muslims,

Share This Article