ತೋಟದ ಕೆಲಸ ಮುಗಿಸಿ ವಾಪಸ್‌ ಬಂದ ದಂಪತಿಗೆ ಆಘಾತ | ಬಾವಿಗೆ ಬಿದ್ದು ಇಬ್ಬರು ಮಕ್ಕಳ ದುರಂತ ಅಂತ್ಯ

ಹಂಚಿಕೊಳ್ಳಿ
WhatsApp Facebook X Telegram

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 11, 2024 ‌ 

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕುನಲ್ಲಿ ನಡೆಯಬಾರದಂತಹ ಘಟನೆಯೊಂದು ನಡೆದಿದೆ. ಆಟವಾಡ್ತಿದ್ದ ಮಕ್ಕಳಿಬ್ಬರು ಆಕಸ್ಮಾತ್‌ ಆಗಿ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾರೆ. ಕೊಪ್ಪದ ತಾಲ್ಲೂಕು ಅಮಡಿ ಎಸ್ಟೇಟ್‌ನಲ್ಲಿ ಘಟನೆ ಸಂಭವಿಸಿದೆ. ಮೃತರನ್ನು ಮಧ್ಯಪ್ರದೇಶ ಮೂಲದ ಸುನೀತಾ ಎಂಬುವರ ಮಕ್ಕಳಾದ ಸೀಮಾ (6), ರಾಧಿಕಾ (2) ಮೃತರು.

ಕೂಲಿಗಾಗಿ ಮಧ್ಯಪ್ರದೇಶದಿಂದ ಬಂದಿದ್ದ ಈ ಕುಟುಂಬ ತೋಟದ ಮನೆಯಲ್ಲಿ ಉಳಿದುಕೊಂಡಿತ್ತು. ಬೆಳಗ್ಗೆ ಕೆಲಸಕ್ಕೆ ಹೋದ ದಂಪತಿ ಮನೆಗೆ ವಾಪಸ್‌ ಆದಾಗ ಮನೆಯಲ್ಲಿ ಮಕ್ಕಳು ಇರದೇ ಇರುವುದನ್ನ ಗಮನಿಸಿದ್ದಾರೆ. ಬಳಿಕ ಎಲ್ಲರೂ ಸಂಶಯಗೊಂಡು ಹುಡುಕಾಡಿದಾಗ ಮಕ್ಕಳ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ. ಘಟನೆ ಸಂಬಂಧ ಕೊಪ್ಪ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ. 

SUMMARY |  Two children of a couple from Madhya Pradesh died after falling into a well in Koppa taluk of Chikkamagaluru district

KEY WORDS |Two children died after falling into a well , Koppa taluk,Chikkamagaluru district, Madhya Pradesh 

ಹಂಚಿಕೊಳ್ಳಿ
WhatsApp Facebook X Telegram
13
ಲೇಖಕರ ಬಗ್ಗೆ

13

Malenadu Today Contributor