ರಾಗಿಗುಡ್ಡದಲ್ಲಿ ಕ್ರಿಕೆಟ್ ಕಿರಿಕ್ : 5 ಮಂದಿ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌

ಹಂಚಿಕೊಳ್ಳಿ
WhatsApp Facebook X Telegram
Arecanut Worth 2.50 Lakh Stolen From Godown in Holaluru Shivamogga Rural Police station

ಸುದ್ದಿಯ ಸ್ಥಳ: Shivamogga district, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಗರದ ರಾಗಿಗುಡ್ಡ ಮೈದಾನದಲ್ಲಿ ಕ್ರಿಕೆಟ್ ಆಟದ ವೇಳೆ ಬೌಲಿಂಗ್ ಮಾಡುವ ವಿಚಾರಕ್ಕೆ ಆರಂಭವಾದ ಗಲಾಟೆ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದೆ. ಘಟನೆ ಸಂಬಂಧ 5 ಮಂದಿ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ನವೆಂಬರ್ 20ರಂದು ನಡೆದ ಘಟನೆ ಇದಾಗಿದೆ. ಘಟನೆಯಲ್ಲಿ ದೂರುದಾರರು ತಮ್ಮ ಸ್ನೇಹಿತರೊಂದಿಗೆ ರಾಗಿಗುಡ್ಡ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ಮೈದಾನಕ್ಕೆ ಬಂದ ವ್ಯಕ್ತಿಯೊಬ್ಬ ಕ್ರಿಕೆಟ್ ಆಡಲು ತಂಡಕ್ಕೆ ಸೇರಿಸಿಕೊಳ್ಳುವಂತೆ ಕೇಳಿದ್ದು, ಆತನನ್ನು ಆಟಕ್ಕೆ ಸೇರಿಸಿಕೊಳ್ಳಲಾಗಿತ್ತು.

ಪಂದ್ಯದ ಕೊನೆಯ ಒಂದು ಓವರ್ ಬಾಕಿ ಉಳಿದಿದ್ದು, ತಂಡದ ಗೆಲುವಿಗೆ 12 ರನ್‌ಗಳ ಅಗತ್ಯವಿತ್ತು. ಈ ಸಂದರ್ಭದಲ್ಲಿ ಕೊನೆಯ ಓವರ್ ಬೌಲಿಂಗ್ ಮಾಡಲು ವ್ಯಕ್ತಿಯೊಬ್ಬ ಅವಕಾಶ ಕೇಳಿದ್ದಾನೆ. ಈಗಾಗಲೇ 2 ಪಂದ್ಯಗಳಲ್ಲಿ ಸೋತಿದ್ದು, ಬೌಲಿಂಗ್ ಮಾಡುವುದು ಬೇಡ ಎಂದು ದೂರುದಾರರು ಹೇಳಿದ್ದಾರೆ ಎನ್ನಲಾಗಿದೆ. ಇದೇ ವಿಚಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವ್ಯಕ್ತಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಬಳಿಕ ಕ್ರಿಕೆಟ್ ವಿಕೆಟ್‌ನಿಂದ ಹಲ್ಲೆ ನಡೆಸಿದ್ದು, ದೂರುದಾರರ ಬಲಗೈ ಹಾಗೂ ಬಲಗೆನ್ನೆಗೆ ಹೊಡೆತ ಬಿದ್ದಿದೆ ಎನ್ನಲಾಗಿದೆ.

ಈ ವೇಳೆ ಮೈದಾನದಲ್ಲಿದ್ದವರು ಮಧ್ಯಪ್ರವೇಶಿಸಿ ಗಲಾಟೆಯನ್ನು ತಡೆದಿದ್ದಾರೆ. ಬಳಿಕ ಪೊಲೀಸ್ ಠಾಣೆಗೆ ದೂರು ನೀಡುವಂತೆ ಅಲ್ಲಿದ್ದವರು ಸೂಚಿಸಿ, ಸ್ನೇಹಿತರೊಬ್ಬರ ಬೈಕ್‌ನಲ್ಲಿ ದೂರುದಾರರನ್ನು ಕಳುಹಿಸಿದ್ದಾರೆ. ಈ ವೇಳೆ ಮತ್ತೊಂದು ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದ ಆರೋಪಿ ನಾಗರತ್ನಮ್ಮ ಲೇಔಟ್ ಸಮೀಪ ಬೈಕ್ ಅಡ್ಡಗಟ್ಟಿ, ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಬಳಿಕ ದೂರುದಾರರು ಅಲ್ಲಿಂದ ತಪ್ಪಿಸಿಕೊಂಡು ಮನೆಗೆ ತೆರಳಿದ್ದಾರೆ. ದೂರುದಾರರ ಮನೆಯ ಬಳಿಗೆ ಬಂದ ಆರೋಪಿಗಳು ಅಲ್ಲಿಯು ಗಲಾಟೆ ನಡೆಸಿದ್ದಾರೆ ಎನ್ನಲಾಗಿದೆ. ಈ ನಡುವೆ ದೂರುದಾರರ ಮೇಲೆ ಐರನ್​ನಿಂದ ಹೊಡೆದುಹಲ್ಲೆ ಮಾಡಿ ನೆಲಕ್ಕೆ ಬೀಳಿಸಿ ತುಳಿಯಲಾಗಿದೆ ಎಂದು ಆರೋಪಿಸಲಾಗಿದೆ. ಅಲ್ಲಿಂದ ತಪ್ಪಿಸಿಕೊಂಡು ರಾಗಿಗುಡ್ಡ ವೃತ್ತಕ್ಕೆ ಬಂದ ದೂರುದಾರರನ್ನು ಸ್ನೇಹಿತರೊಬ್ಬರು ಬೈಕ್‌ನಲ್ಲಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ತು ಅಡ್ಮಿಟ್ ಮಾಡಿದ್ದರು.

ಅಲ್ಲಿ ದೂರುದಾರರು ನೀಡಿದ ಹೇಳಿಕೆ ಅನ್ವಯ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌)ಕಲಂ 126(2): ವ್ಯಕ್ತಿಯ ಸಂಚಾರಕ್ಕೆ ಕಾನೂನುಬಾಹಿರವಾಗಿ ಅಡ್ಡಿಪಡಿಸುವುದು. ಕಲಂ 115(2): ಉದ್ದೇಶಪೂರ್ವಕವಾಗಿ ವ್ಯಕ್ತಿಗೆ ದೈಹಿಕ ಗಾಯ ಉಂಟುಮಾಡುವುದು. ಕಲಂ 118(1): ಅಪಾಯಕಾರಿ ಆಯುಧ ಅಥವಾ ಸಾಧನಗಳನ್ನು ಬಳಸಿ ಉದ್ದೇಶಪೂರ್ವಕವಾಗಿ ಗಾಯ ಉಂಟುಮಾಡುವುದು.ಕಲಂ 352: ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗುವಂತೆ ಪ್ರಚೋದಿಸುವ ಉದ್ದೇಶದಿಂದ ವ್ಯಕ್ತಿಯನ್ನು ಅವಮಾನಿಸುವುದು. ಕಲಂ 351(2): ವ್ಯಕ್ತಿಗೆ ಅಪರಾಧಿಕ ಬೆದರಿಕೆ ಹಾಕುವುದು ಸೇರಿದಂತೆ ವಿವಿದ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor