ದೇವಸ್ಥಾನಕ್ಕೆ ಹೋಗಿ ಪೂಜೆ ಮುಗಿಸಿ ಬರುವಷ್ಟರಲ್ಲಿ ಸ್ಕೂಟಿ ಕಳ್ಳತನ! 11 ತಿಂಗಳ ಬಳಿಕ ದಾಖಲಾಯ್ತು ಕಂಪ್ಲೆಂಟ್

ಹಂಚಿಕೊಳ್ಳಿ
WhatsApp Facebook X Telegram
ಅಪರಾಧ ಸುದ್ದಿಗಳಿಗೆ ಸಂಬಂಧಿಸಿದ ಸಾಂದರ್ಭಿಕ ಚಿತ್ರ
crime news image malenadutoday

ಸುದ್ದಿಯ ಸ್ಥಳ: Shivamogga district, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ದೇವಸ್ಥಾನಕ್ಕೆ ಹೋದಾಗ ಹೊರಗೆ ಬಿಟ್ಟು ಹೋಗಿದ್ದ ಚಪ್ಪಲಿಗಳು ಕಳುವಾದ ಪ್ರಸಂಗಗಳನ್ನು ಕೇಳಿರುತ್ತೇವೆ. ಆದರೆ ಶಿವಮೊಗ್ಗ ತಾಲೂಕಿನ ಪಿಳ್ಳಂಗೆರೆ ಗ್ರಾಮದ ದೇವಸ್ಥಾನದ ಮುಂದೆ ನಿಲ್ಲಿಸಿದ್ದ ಸ್ಕೂಟಿಯೇ ಕಳ್ಳತನವಾಗಿದೆ. ಘಟನೆ ನಡೆದು ಸುಮಾರು 11 ತಿಂಗಳ ಬಳಿಕ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ವಿವರ

2025ರ ಡಿಸೆಂಬರ್ 30ರಂದು ವ್ಯಕ್ತಿಯೊಬ್ಬರು ತಮ್ಮ ಹೋಂಡಾ ಆಕ್ಟಿವಾ ಸ್ಕೂಟಿಯಲ್ಲಿ ಪಿಳ್ಳಂಗೆರೆ ಗ್ರಾಮದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ತೆರಳಿದ್ದರು. ಬೆಳಗ್ಗೆ 10.45ರ ಸುಮಾರಿಗೆ ದೇವಸ್ಥಾನದ ಆವರಣದಲ್ಲಿ ಸ್ಕೂಟಿ ನಿಲ್ಲಿಸಿ ಪೂಜೆಗೆಂದು ಒಳಗೆ ಹೋಗಿದ್ದರು.ಪೂಜೆ ಮುಗಿಸಿಕೊಂಡು ಬೆಳಗ್ಗೆ 11.30ರ ಸುಮಾರಿಗೆ ವಾಪಸ್ ಬಂದು ನೋಡಿದಾಗ ನಿಲ್ಲಿಸಿದ್ದ ಸ್ಥಳದಲ್ಲಿ ಸ್ಕೂಟಿ ಇರಲಿಲ್ಲ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಿದ್ರು ಸ್ಕೂಟಿ ಸಿಕ್ಕಿರಲಿಲ್ಲ. ಕಳುವಾಗಿರುವ ಬಿಳಿ ಬಣ್ಣದ ಹೋಂಡಾ ಆಕ್ಟಿವಾ ಸ್ಕೂಟಿ 2013ರ ಮಾಡೆಲ್‌ನದ್ದಾಗಿದ್ದು, 2018ರಲ್ಲಿ ಸೆಕೆಂಡ್ ಹ್ಯಾಂಡ್‌ನಲ್ಲಿ ಖರೀದಿಸಲಾಗಿತ್ತು. ಹೆಚ್ಚೆಂದರೆ 15 ಸಾವಿರ ವ್ಯಾಲ್ಯು ಸ್ಕೂಟಿಯಾದ್ದರಿಂದ ವಿಷಯ ಅಲ್ಲಿಯೇ ನಿಂತಿತ್ತು

11 ತಿಂಗಳ ಬಳಿಕ ದೂರು ನೀಡಿದ್ದೇಕೆ?

ಸ್ಕೂಟಿಗೆ ವಿಮೆ ಇರಲಿಲ್ಲ. ಮೇಲಾಗಿ ವೆಹಿಕಲ್ ಸಹ ಪತ್ತೆಯಾಗಿಲ್ಲ. ಅದರು ದುರ್ಬಳಕೆಯಾಗುವ ಸಾದ್ಯತೆಯು ಇತ್ತು. ಹಾಗಾಗಿ ಇಲ್ಲಿವರೆಗೂ ವಾಹನ ಪತ್ತೆಯಾಗದ ಹಿನ್ನೆಲೆಯಲ್ಲಿ 2026ರ ನವೆಂಬರ್ 24ರಂದು ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾರೆ.. ವಾಹನವನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ. ದೂರಿನ ಮೇರೆಗೆ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) 2023ರ ಕಳ್ಳತನಕ್ಕೆ ಸಂಬಂಧಿಸಿದ ಕಲಂ 303(2)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor