SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 28, 2025
ಶಿವಮೊಗ್ಗ | ಮಾರ್ಚ್ 3 ರಿಂದ 7 ರ ವರೆಗೆ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವು ಭಾರತದ ವೈವಿಧ್ಯಮಯ ಪರ್ವತಗಳ ಕಥನ ‘ಮೌಂಟನ್ಸ್ ಆಫ್ ಲೈನ್” ಎನ್ನುವ ತನ್ನ ವಾರ್ಷಿಕ ಹವಾಮಾನ ಉತ್ಸವವನ್ನು ಕುವೆಂಪು ವಿಶ್ವವಿದ್ಯಾಲಯದಲ್ಲಿ ನಡೆಸಲಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೋ ಶರತ್ ಅನಂತ್ ಮೂರ್ತಿ ತಿಳಿಸಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಈ ಕಾರ್ಯಕ್ರಮವು ಪರ್ವತಗಳಿಗೆ ಸಂಬಂಧಿಸಿದ ಸಂಭ್ರಮವಾಗಿದೆ. ಇದರ ಅಂಗವಾಗಿ ವಿದ್ಯಾರ್ಥಿಗಳು ಸೆರೆಹಿಡಿದಿರುವ ಪರ್ವತಗಳ ಛಾಯಾಚಿತ್ರಗಳು, ಸಂಗೀತ, ಚಲನಚಿತ್ರಗಳು, ಕಲಾಕೃತಿಗಳು, ಸಂವಾದಾತ್ಮಕ ಕಾರ್ಯಾಗಾರಗಳು ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದ್ದು ಉತ್ಸವಕ್ಕೆ ಮೆರುಗು ತುಂಬಲಿದೆ. ಶಿವಮೊಗ್ಗದ ಕುವೆಂದು ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ನಡೆಯುವ ಈ ಕಾರ್ಯಕ್ರಮವು ಮಾರ್ಚ್ 7 ರ ತನಕ ಸಾರ್ವಜನಿಕರಿಗೆ ತೆರೆದಿದ್ದು, ಎಲ್ಲರಿಗೂ ಇಲ್ಲಿ ಮುಕ್ತ ಪ್ರವೇಶವಿದೆ ಎಂದರು.
ಸಾವಿರಾರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಉತ್ಸವದಲ್ಲಿ ಭಾಗವಹಿಸಲು ಕುವೆಂಪು ವಿಶ್ವವಿದ್ಯಾಲಯದ ಕ್ಯಾಂಪಸ್‌ಗೆ ಭೇಟಿ ನೀಡುವ ನಿರೀಕ್ಷೆಯಿದೆ. ಈ ಉತ್ಸವವು ವಿದ್ಯಾರ್ಥಿಗಳು, ಕಲಾವಿದರು. ಸರ್ಕಾರೇತರ ಸಂಸ್ಥೆಗಳು, ಶಿಕ್ಷಕರು, ಯುವ ವೃತ್ತಿಪರರು ಮತ್ತು ಸಮುದಾಯದ ಸದಸ್ಯರನ್ನು ಒಂದೇ ಸೂರಿನಡಿ ತರಲಿದ್ದು, ಸ್ಥಳೀಯ ಸಮುದಾಯಗಳು ಪರ್ವತದಲ್ಲಿ ಬದುಕುವುದು ಮತ್ತು ದುಡಿಯುವುದರ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಇದು ವೇದಿಕೆಯನ್ನು ಒದಗಿಸಲಿದೆ. ಈ ಉತ್ಸವಕ್ಕಾಗಿಯೇ ರೂಪಿಸಲಾದ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಇಂಟರ್ನ್ ಶಿಪ್ ಕಾರ್ಯಕ್ರಮದ ಭಾಗವಾಗಿ ಆಯ್ಕೆಗೊಂಡ ವಿದ್ಯಾರ್ಥಿಗಳ ತಂಡವು ದೇಶದ ಬೇರೆ ಬೇರೆ ಕಡೆಗಳಿಗೆ ಭೇಟಿ ನೀಡಿ ವಿವಿಧ ಕಥನಗಳನ್ನು ದಾಖಲಿಸಿದೆ. ಸಾವನದುರ್ಗ ಮತ್ತು ಚಾಮುಂಡಿ ಬೆಟ್ಟಗಳಲ್ಲಿ ಮಾನವ ಮತ್ತು ಪ್ರಕೃತಿಯ ನಡುವಿನ ಸಹಜೀವನದ ಕಥನದಿಂದ ಹಿಡಿದು ಸಂಪ್ರದಾಯ ಮತ್ತು ಆಧುನಿಕತೆಯ ನಡುವೆ ಸಮತೋಲನವನ್ನು ಕಾಪಾಡಲು ಹೆಣಗಾಡುತ್ತಿರುವ ಅರುಣಾಚಲ ಪ್ರದೇಶದ ಸ್ಥಿತಿ ಸಮುದಾಯದ ಪಯಣದವರೆಗಿನ ಕಥನಗಳನ್ನು ಇಲ್ಲಿ ಕಾಣಬಹುದಾಗಿದೆ ಎಂದು ಅಭಿಪ್ರಾಯ ಪಟ್ಟರು.
SUMMARY | Kuvempu University Vice-Chancellor Prof. Sharath Ananthamurthy said that kuvempu university will hold its annual climate festival called ‘Mountains of Online’.
KEYWORDS | Kuvempu University, Vice Chancellor, climate festival, Mountains,