SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 21, 2025
ಮಲಯಾಳಂನ ಬ್ಲಾಕ್ಬಸ್ಟರ್ ಚಿತ್ರವಾದ ಮಾರ್ಕೋ ಚಿತ್ರದ ಕನ್ನಡ ಅವತರಣಿಕೆ ಜನವರಿ 31 ರಂದು ಬಿಡುಗಡೆಯಾಗಲಿದೆ.
ಈ ಕುರಿತು ಟ್ವಿಟರ್ ನಲ್ಲಿ ಪೋಸ್ಟ್ ಶೇರ್ ಮಾಡಿರುವ ಚಿತ್ರದ ನಾಯಕ ಉನ್ನಿ ಮುಖಂದನ್ “ನಮಸ್ಕಾರ ಕರ್ನಾಟಕದ ಪ್ರಿಯ ಪ್ರೇಕ್ಷಕರೇ ನಿಮ್ಮ ನಿರೀಕ್ಷೆಗಳಿಗೆ ತಕ್ಕಂತೆ ಎಲ್ಲೆಡೆ ಪ್ರಶಂಶೆಗೊಳಗಾದ ಮಾರ್ಕೋ ಸಿನಿಮಾ ಈಗ ಕನ್ನಡದಲ್ಲಿ ಬಿಡುಗಡೆಯಾಗಲಿದೆ” ಎಂದು ಕನ್ನಡದಲ್ಲಿ ಬರೆದುಕೊಂಡಿದ್ದಾರೆ.
ನಮಸ್ಕಾರ ಕರ್ನಾಟಕದ ಪ್ರಿಯ ಪ್ರೇಕ್ಷಕರೇ! ನಿಮ್ಮ ನಿರೀಕ್ಷೆಗಳಿಗೆ ತಕ್ಕಂತೆ ಎಲ್ಲೆಡೆ ಪ್ರಶಂಶೆಗೊಳಗಾದ #ಮಾರ್ಕೋ ಸಿನಿಮಾ ಈಗ ಕನ್ನಡದಲ್ಲಿ ಬಿಡುಗಡೆಯಾಗಲಿದೆ.
After receiving a PHENOMENAL response worldwide, the BIGGEST action thriller #Marco is now arriving in Kannada!
Brace yourselves for an… pic.twitter.com/f0N4E7Ocua
— Unni Mukundan (@Iamunnimukundan) January 20, 2025
ಡಿಸೆಂಬರ್ 20 ರಂದು ರಿಲೀಸ್ ಆಗಿದ್ದ ಮರ್ಕೋ ಚಿತ್ರ ಈಗಾಲೇ ಹಿಂದಿ. ತೆಲುಗು. ತಮಿಳು ಭಾಷೆಗಳಲ್ಲಿ ರಿಲೀಸ್ ಆಗಿ ಎಲ್ಲ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಅಷ್ಟೇ ಅಲ್ಲದೆ ಎ ಸರ್ಟಿಫಿಕೇಟ್ ಹೊಂದಿದ್ದ ಈ ಚಿತ್ರ 100 ಕೋಟಿಗೂ ಅಧಿಕ ಕಲೆಕ್ಷನ್ ಅನ್ನು ಮಾಡಿತ್ತು.
ಚಿತ್ರದಲ್ಲಿ ಉನ್ನಿ ಮುಕುಂದನ್ ಸ್ವಾಗ್ ಹಾಗು ಆಕ್ಟಿಂಗ್‌ಗೆ ಎಲ್ಲರೂ ಫಿದಾ ಆಗಿದ್ದರು. ಅಷ್ಟೇ ಅಲ್ಲದೆ ಸಿನಿರಸಿಕರು ಈ ಚಿತ್ರವನ್ನು ಕನ್ನಡದ ಕೆಜಿಎಫ್ ಚಿತ್ರಕ್ಕೆ ಹೋಲಿಸಿ ಕೊಂಡಾಡಿದ್ದರು. ಅದರಲ್ಲೂ ರವಿ ಬಸ್ರೂರು ರವರ ಹಿನ್ನಲೆ ಸಂಗೀತ ಈ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿತ್ತು. ಈ ಚಿತ್ರವನ್ನು ಕನ್ನಡದಲ್ಲಿ ನೋಡಬೇಕೆಂದುಕೊಂಡಿದ್ದ ಕನ್ನಡಿಗರಿಗೆ ಇದೀಗ ಸಿಹಿ ಸುದ್ದಿ ಸಿಕ್ಕಿದ್ದು, ಕರ್ನಾಟಕದಲ್ಲಿ ಈ ಚಿತ್ರ ಜನವರಿ 31ರಂದು ಬಿಡುಗಡೆಯಗಲಿದೆ.
SUMMARY | The Kannada version of Malayalam blockbuster film Marco is slated to release on January 31.
KEYWORDS | Marco, Kannada,release, January 31,