SHIVAMOGGA | MALENADUTODAY NEWS | ಮಲೆನಾಡು ಟುಡೆ Dec 26, 2024
ಈ ಹಿಂದೆ ವಿಳಂಬವಾಗಿದ್ದ ನಂದಿನಿ ಬ್ರ್ಯಾಂಡ್‌ನ ದೋಸೆ ಹಾಗೂ ಇಡ್ಲಿ ಹಿಟ್ಟು ನಿನ್ನೆ ದಿನ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಕರ್ನಾಟಕ ಹಾಲು ಮಹಾಮಂಡಳಿ ಕೆಎಂಎಫ್ ಬಿಡುಗಡೆ ಮಾಡಿರುವ ಈ ದೋಸೆ ಹಾಗೂ ಇಡ್ಲಿ ಹಿಟ್ಟು ಪ್ರೋಟಿನ್ ಯುಕ್ತವಾಗಿರುತ್ತದೆ ಎಂಬುದು ವಿಶೇಷ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ರೆಡಿ ಟು ಕುಕ್’ ನಂದಿನಿ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ವಿಶೇಷ ಅಂದರೆ ಇದರಲ್ಲಿ ಶೇ 5ರಷ್ಟು ಪ್ರೊಟೀನ್ ಅಂಶವನ್ನು ಮಿಶ್ರಣ ಮಾಡಲಾಗಿದೆ ಎನ್ನಲಾಗಿದೆ. ಸದ್ಯ ಬೆಂಗಳೂರು ನಗರದಲ್ಲಿ ಮಾತ್ರ ಪ್ರಾಯೋಗಿಕವಾಗಿ ಇಡ್ಲಿ ಹಾಗೂ ದೋಸೆ ಹಿಟ್ಟನ್ನು ರಿಲೀಸ್ ಮಾಡಲಾಗಿದೆ. ಇದರ ಬೆಲೆ 450 ಗ್ರಾಮ್ ತೂಕದ ಪ್ಯಾಕೆಟ್‌ಗೆ 40 ರೂಪಾಯಿ ಇದ್ದು 900 ಗ್ರಾಮ್ ತೂಕದ ಪ್ಯಾಕೆಟ್‌ಗೆ 80 MRP ಇದೆ.
SUMMARY | Nandini brand dosa and idli flour was launched, Karnataka Milk Federation ,KMF launched this dosa and idli flour, protein, Siddaramaiah, KMF
KEY WORDS | Nandini brand dosa and idli flour was launched, Karnataka Milk Federation ,KMF launched this dosa and idli flour, protein, Siddaramaiah, KMF