SHIVAMOGGA | MALENADUTODAY NEWS | ಮಲೆನಾಡು ಟುಡೆ Dec 7, 2024
ಪಾರ್ಟ್ ಟೈಮ್ ಜಾಬ್ ಆಫರ್ ನಂಬಿ 8 ಲಕ್ಷ ರೂಪಾಯಿಗೂ ಅಧಿಕ ಹಣವನ್ನ ಶಿವಮೊಗ್ಗದ ಮಹಿಳೆಯೊಬ್ಬರು ಕಳೆದುಕೊಂಡಿದ್ದಾರೆ. ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಏಫ್‌ಐಆರ್ ದಾಖಲಾಗಿದೆ.
ಇಲ್ಲಿನ ನಿವಾಸಿಯೊಬ್ಬರು ಜಾಹೀರಾತು ಒಂದರಲ್ಲಿದ್ದ ನಂಬರ್‌ಗೆ ವಾಟ್ಸಪ್ ಮಾಡಿದ್ದರು. ಬಳಿಕ ಅಲ್ಲಿ ನೀಡಿದ ವಿವರಗಳನ್ನ ಫಾಲೋ ಮಾಡಿದರು. ಬಳಿಕ ವಾಟ್ಸಾಪ್‌ನಲ್ಲಿ ತಾವು ಕಳುಹಿಸುವ ವಿಡಿಯೋಗಳಿಗೆ ಲೈಕ್ ಮಾಡಿ, ಸ್ಕ್ರೀನ್ ಶಾಟ್ ಕಳುಹಿಸುವಂತೆ ಇನ್ನೊಂದು ನಂಬರ್‌ನಿಂದ ತಿಳಿಸಿದಂತೆ ಈ ಮಹಿಳೆಯು ಚಾಚುತಪ್ಪದೆ ಮಾಡಿದ್ದರು. ಸುಮಾರು ಎಂಟು ಟಾಸ್ಕ್ ಪೂರೈಸಿದಾಗ ಗೃಹಿಣಿಯ ಖಾತೆಗೆ 150 ರೂಪಾಯಿ ಹಣ ಬಂದಿದೆ.
ಆನಂತರ ಹೊಸ ಟಾಸ್ಕ್‌ಗೆ ಹಣ ಕಟ್ಟಬೇಕು ಎಂದು ಸೂಚಿಸಲಾಗಿದೆ.ಹೇಗಿದ್ದರೂ ಹಣ ಬರುತ್ತದೆ ಎಂದು ಖಾತರಿಯಾದ ಮಹಿಳೆ ಹಂತ ಹಂತವಾಗಿ ಸುಮಾರು 8.20 ಲಕ್ಷ ರೂಪಾಯಿ ಹಣ ಕಟ್ಟಿದ್ದಾರೆ. ಆ ಬಳಿಕ ಹಣದ ಕಮಿಷನ್ ಆಗಲಿ ಅಸಲಾಗಲಿ ಬರದಿರುವುದುನ್ನ ಗಮನಿಸಿ ಮೋಸ ಹೋಗಿರುವುದು ಗೊತ್ತಾಗಿ, ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ
SUMMARY | woman from Shivamogga has lost more than Rs 8 lakh after being offered a part-time job. An FIR has been registered at the cyber crime police station in this regard.
KEY WORDS |woman from Shivamogga has lost more than Rs 8 lakh after being offered a part-time job. cyber crime police station