SHIVAMOGGA | MALENADUTODAY NEWS | ಮಲೆನಾಡು ಟುಡೆ | Nov 25, 2024
ಮಹಾರಾಷ್ಟ್ರದಲ್ಲಿ ಇ ವಿ ಎಂ ಹ್ಯಾಕ್ ಆಗಿರುವ ಸಾಧ್ಯತೆ ಇದೆ ಎಂದು ಗೃಹ ಸಚಿವ ಹಾಗೂ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಮಹಾರಾಷ್ಟ್ರದ ವೀಕ್ಷಕರೂ ಆಗಿರುವ ಸಚಿವ ಡಾ| ಜಿ ಪರಮೇಶ್ವರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಹಾರಾಷ್ಟ್ರದಲ್ಲಿ ಇವಿಎಂ ಹ್ಯಾಕ್ ಆಗಿರುವ ಸಾಧ್ಯತೆ ಇದೆ. ಅನೇಕ ವರ್ಷಗಳಿಂದ ನಾವು ಇವಿಎಂ ಬಳಸದಂತೆ ಒತ್ತಾಯಿಸುತ್ತಿದ್ದೇವೆ. ಇವಿಎಂ ಬದಲು ಬ್ಯಾಲೆಡ್ ಪೇಪರ್ ಅನ್ನು ಬಳಸಬಹುದು. ಈ ವಿಚಾರವಾಗಿ ಎಐಸಿಸಿ ಒಂದು ಸಮಿತಿಯನ್ನು ರಚಿಸಿತ್ತು. ಆದ್ರೆ ಕೇಂದ್ರ ಸರ್ಕಾರದಲ್ಲಿ ಬಿಜೆಪಿ ಇರುವುದರಿಂದ ಅದನ್ನು ವಿರೋಧಿಸುತ್ತಿದೆ.
ಹಾಗೆಯೇ ಈ ಇವಿಎಂ ಯಂತ್ರದ ಬಗ್ಗೆ ಬಿಜೆಪಿ ಯ ಕೆಲ ನಾಯಕರಾಗೂ ಇಷ್ಟವಿಲ್ಲ. ಕರ್ನಾಟಕದಲ್ಲಿ ಎಲ್ಲ ಕಡೆ ಇ ವಿ ಎಂ ಹ್ಯಾಕ್ ಆಗಿದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವೆಡೆ ಆಗಿರಬಹುದು. ನ್ಯಾಯಸಮ್ಮತವಾಗಿ ಚುಣಾವಣೆ ನಡೆಯಬೇಕೆಂದರೆ. ಇ ವಿ ಎಂ ರದ್ದು ಮಾಡಿ ಪೇಪರ್ ಬ್ಯಾಲೆಡ್ ವ್ಯವಸ್ಥೆ ಮಾಡುವುದು ಉತ್ತಮ ಎಂದರು

SUMMRY| Home Minister and All India Congress Committee (AICC) Maharashtra observer Dr. parameshwar has said that there is a possibility of EVMs being hacked in Maharashtra. G Parameshwara said.
KEYWORDS| Dr. parameshwar, of EVMs being hacked, Maharashtra., Bjp, congress,