SHIVAMOGGA | MALENADUTODAY NEWS | ಮಲೆನಾಡು ಟುಡೆ Nov 17, 2024
ಮಲೆನಾಡಲ್ಲಿ ಮತ್ತೊಮ್ಮೆ ಹನಿಟ್ರ್ಯಾಪ್ ಪ್ರಕರಣ ಸದ್ದು ಮಾಡುತ್ತಿದೆ. ವಿಶೇಷ ಅಂದರೆ ಕೆಲವು ವಿಷಯಗಳು ಒಳಗೊಂಡಿದ್ದ ಈ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕುನಲ್ಲಿ ಪ್ರಕರಣ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ಪ್ರಕರಣದಲ್ಲಿ ಮಹಿಳೆಯೊಬ್ಬರ ವಿರುದ್ಧ ಹನಿಟ್ರ್ಯಾಪ್ ಮಾಡಿದ ಆರೋಪದ ಅಡಿಯಲ್ಲಿ ಕೇಸ್ ಸಹ ದಾಖಲಾಗಿತ್ತು. ಆದರೆ ಹನಿಟ್ರ್ಯಾಪ್ ಕೇಸ್ ಇದಲ್ಲ, ಆಕೆ ನಿಜವಾದ ಸಂತ್ರಸ್ತೆಯಾಗಿದ್ದಾರೆ. ಆಕೆ ವಿರುದ್ಧವೇ ಷಡ್ಯಂತ್ರ ಮಾಡಲಾಗಿದೆ ಎಂಬ ಅಂಶ ಇದೀಗ ಹೊರಬರುತ್ತಿದ್ದು, ಈ ಸಂಬಂಧವೂ FIR ತಡವಾಗಿ ದಾಖಲಾಗಿದೆ.

ತೀರ್ಥಹಳ್ಳಿ ತಾಲ್ಲೂಕುನಲ್ಲಿನ ಗ್ರಾಮವೊಂದರಲ್ಲಿ ನಡೆದ ಘಟನೆಯಲ್ಲಿ ಮಹಿಳೆಯೊಬ್ಬರನ್ನ ಅಮಾನುಷವಾಗಿ ಪ್ರಕರಣವೊಂದರಲ್ಲಿ ಸಿಕ್ಕಿಹಾಕಿಸುವ ಪ್ರಯತ್ನವೊಂದು ನಡೆದಿದೆ ಎಂದು ಹೇಳಲಾಗುತ್ತಿದೆ. ಕಾಣದ ಪ್ರಭಾವಿ ಕೈಗಳು ಇಂತಹ ಕೃತ್ಯವೆಸಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಇದೀಗ ಪೊಲೀಸ್ ಇಲಾಖೆಗೆ ಸತ್ಯಾಸತ್ಯತೆ ತಿಳಿದಿದ್ದು, ಅಸಲಿ ಆರೋಪದ ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ. (ಪ್ರಕರಣದ ಗೌಪ್ಯ ಅಂಶಗಳನ್ನು ವಿವರಿಸಿಲಾಗುವುದಿಲ್ಲ)
ಇಷ್ಟಕ್ಕೂ ಏನಿದು ಪ್ರಕರಣ
ಇತ್ತೀಚೆಗೆ ಶಿವಮೊಗ್ಗ ಜಿಲ್ಲೆಯ ಸ್ಟೇಷನ್ ಒಂದರಲ್ಲಿ ಹನಿಟ್ರ್ಯಾಪ್ ಕೇಸ್ ದಾಖಲಾಗಿತ್ತು.(ಪ್ರಕರಣದ ವೈಯಕ್ತಿಕ ವಿವರ ಪ್ರಕಟಿಸುವುದಿಲ್ಲ) ಆದರೆ ಈ ಪ್ರಕರಣವನ್ನು ಸಂಬಾಳಿಸುವಲ್ಲಿ ಪೊಲೀಸ್ ಇಲಾಖೆ ಎಡವಿತೋ ಏನೋ? ಗೊತ್ತಿಲ್ಲ. ಕೇಸ್‌ನಲ್ಲಿ ಹನಿಟ್ರ್ಯಾಪ್ ಮಾಡಿದ ಆರೋಪವನ್ನ ಮಹಿಳೆಯೊಬ್ಬರ ಮೇಲೆ ಹೊರಿಸಲಾಗಿತ್ತು. ಇದಕ್ಕೂ ಮುಂಚೆ ಇದೇ ಪ್ರಕರಣದಲ್ಲಿ ಮಾತುಕತೆಗಳು ನಡೆದು ಆದ ಪಂಚಾಯ್ತಿಗಳೆಲ್ಲಾ ಫೇಲ್ ಆಗಿದ್ದವು. ಆನಂತರ ಮಹಿಳೆಯನ್ನ ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನದ ಫಲವಾಗಿ ಹನಿಟ್ರ್ಯಾಪ್ ಕೇಸ್ ದಾಖಲಾಯ್ತು ಎನ್ನುತ್ತದೆ ಸ್ಥಳೀಯವಾದಂತ ಗಟ್ಟಿ ಮೂಲ.
ಆದರೆ ಯಾವಾಗ ಪ್ರಕರಣದ ವಿಚಾರಣೆ ಆರಂಭವಾಯಿತೋ, ಕೇಸ್ ಬೇರೆಯದ್ದೇ ರೂಪ ಪಡೆದುಕೊಂಡಿದೆ. ನಡೆದಿದ್ದರಲ್ಲಿ ಮಹಿಳೆಗೆ ಅನ್ಯಾಯವಾಗಿದೆ ಎಂಬುವ ಸತ್ಯ ಪೊಲೀಸರ ಅರಿವಿಗೆ ಬಂದಿದೆ. ಆ ತಕ್ಷಣವೇ ಕ್ರಮ ಕೈಗೊಂಡ ಅಧಿಕಾರಿಗಳು ಸಂತ್ರಸ್ತೆಯ ಪರವಾಗಿ ಕಂಪ್ಲೆಂಟ್ ಪಡೆದುಕೊಂಡು ಕೇಸ್ ದಾಖಲಿಸಿದ್ದಾರೆ. ಇದರ ಪರಿಣಾಮವಾಗಿ ಲೈಂಗಿಕ ಕಿರುಕುಳ ನೀಡಿದ್ದಷ್ಟೆ ಅಲ್ಲದೆ ಸಂತ್ರಸ್ತೆಯನ್ನೆ ಆರೋಪಿ ಸ್ಥಾನದಲ್ಲಿ ನಿಲ್ಲಿಸುವಂತಹ ಪ್ರಯತ್ನಕ್ಕೆ ಸೋಲಾಗಿದೆ. ಅಷ್ಟೆಅಲ್ಲದೆ ಹಾಗೆ ಯತ್ನಿಸಿದವರಿಗೆ ನಿಜವಾದ ಸಂಕಷ್ಟ ಎದುರಾಗಿದೆ.
SUMMARY | shivamogga police, honey trap case
KEY WORDS | shivamogga police, honey trap case