SHIVAMOGGA| MALENADUTODAY NEWS | ಮಲೆನಾಡು ಟುಡೆ Apr 5, 2025
ಅಪರೂಪ ಎಂಬಂತಹ ಪ್ರಕರಣವೊಂದರಲ್ಲಿ ಮರದ ದಿಮ್ಮಿ ಕದ್ದ ಆರೋಪಿಗಳಿಗೆ ಕೋರ್ಟ್‌ವೊಂದು ಫಾರೆಸ್ಟ್‌ನಲ್ಲಿ ಗಿಡ ನೆಡುವ ಶಿಕ್ಷೆಯೊಂದನ್ನು ನೀಡಿದೆ. ಕುತೂಹಲಕಾರಿಯಾದ ಈ ಪ್ರಕರಣ ಚಿತ್ರದುರ್ಗದಲ್ಲಿ ನಡೆದಿದೆ.
ಇಲ್ಲಿನ ಮೊಳಕಾಲ್ಮೂರು ತಾಲ್ಲೂಕು ಮುತ್ತಿಗಾರಹಳ್ಳಿಯಲ್ಲಿ 2016 ರ ಸಂದರ್ಭದಲ್ಲಿ ನಾಲ್ವರು ಮರದ ದಿಮ್ಮಿ ಕದ್ದು ಸಾಗಿಸುವಾಗ ಯಡವಟ್ಟಾಗಿತ್ತು. ಎತ್ತಿನಗಾಡಿಯಲ್ಲಿ ದಿಮ್ಮಿಗಳನ್ನು ಸಾಗಿಸ್ತಿದ್ದಾಗ ಫಾರೆಸ್ಟ್‌ನವರ ಕೈಗೆ ತಗ್ಲಾಕಿಕೊಂಡಿದ್ದರು. ಈ ವೇಳೆ ಮರದ ದಿಮ್ಮಿಗಳನ್ನು ಅಲ್ಲಿಯೇ ಬಿಟ್ಟು ಆರೋಪಿಗಳೆಲ್ಲಾ ಎಸ್ಕೆಪ್ ಆಗಿದ್ದರು. ಪ್ರಕರಣ ಸಂಬಂಧ ಕೇಸ್ ದಾಖಲಾಗಿ, ಚಾರ್ಜ್‌ಶೀಟ್ ಆಗಿ, ಕೋರ್ಟ್‌ನಲ್ಲಿ ವಿಚಾರಣೆ ಸುದೀರ್ಘ ವಿಚಾರಣೆ ನಡೆದಿದೆ. ಇದೀಗ ಜೆಎಂಎಫ್‌ಸಿ ನ್ಯಾಯಾಲಯ ಈ ಸಂಬಂಧ ತೀರ್ಪು ನೀಡಿದ್ದು, ಆರೋಪಿಗಳಿಗೆ ತಲಾ ₹ 4,500 ದಂಡ ಹಾಗೂ ತಲಾ 15 ಸಸಿಗಳನ್ನು ಅರಣ್ಯದಲ್ಲಿ ನೆಟ್ಟು ಒಂದು ವರ್ಷ ಕಾಲ ಅವುಗಳ ಪೋಷಣೆ ಮಾಡಬೇಕು ಎಂದು ತೀರ್ಪು ನೀಡಿದೆ.
ಅಲ್ಲದೆ ದಂಡ ಕಟ್ಟಲು ತಪ್ಪಿದಲ್ಲಿ 35 ದಿನಗಳ ಕಾಲ ಸಾದಾ ಕಾರಾಗೃಹ ಶಿಕ್ಷೆ , ಗಿಡ ನೆಟ್ಟು ನೋಡಿಕೊಳ್ಳದಿದ್ದಲ್ಲಿ, ಒಂದು ತಿಂಗಳ ಕಾಲ ಸಾದಾ ಕಾರಾಗೃಹ ಶಿಕ್ಷೆ ಅನುಭವಿಸಬೇಕು ಎಂದು ತೀರ್ಪು ನೀಡಿದೆ.
ಮೇಲಾಗಿ ಅಪರಾಧಿಗಳು ಸಸಿ ಪೋಷಣೆ ಮಾಡುವ ಬಗ್ಗೆ ಅರಣ್ಯಾಧಿಕಾರಿಗಳು ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ನ್ಯಾಯಾಧೀಶರಾದ ಟಿ.ಕೆ.ಪ್ರಿಯಾಂಕ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕ ಮಹಮದ್ ಶಂಶೀರ್ ಆಲಿ ಅವರು ಈ ಕೇಸ್‌ನಲ್ಲಿ ವಾದ ಮಂಡಿಸಿದ್ದರು.