SHIVAMOGGA | MALENADUTODAY NEWS | ಮಲೆನಾಡು ಟುಡೆ Dec 15, 2024
ಸಮಾಜದಲ್ಲಿ ಗಂಡಿಗೆ ಹೆಣ್ಣು ಸಿಗೋದು ಕಷ್ಟವಾಗುತ್ತಿರುವ ಚರ್ಚೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕುನಲ್ಲಿ ಯುವಕನೊಬ್ಬ ಮದುವೆಯಾಗಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಾಗರ ತಾಲ್ಲೂಕು ಆನಂದಪುರದ ಸಮೀಪದ ಕೈರಾ ಗ್ರಾಮದಲ್ಲಿನ ಯುವಕ ನೇಣಿಗೆ ಶರಣಾಗಿದ್ದಾರೆ. ಸ್ಥಳೀಯ ವರದಿಯ ಪ್ರಕಾರ, 33 ವರ್ಷದ ಸಂದೀಪ ಎಂಬವರು ನೇಣಿಗೆ ಶರಣಾಗಿದ್ದು, ಅವರು ಮದುವೆಯಾಗಿಲ್ಲ ಎಂದು ಬೇಸರಗೊಂಡಿದ್ದರು ಎನ್ನಲಾಗಿದೆ.
ಆಚಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಘಟನೆ ಸಂಬಂಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
SUMMARY | A young man committed suicide near Anandpur, Sagar taluk, Shimoga district, claiming he was not married.
KEY WORDS | young man committed suicide near claiming he was not married, Anandpur, Sagar taluk, Shimoga district,