ಮತ್ತೆ ಕೇಸರಿ ಬಂಡಾಯಕ್ಕೆ ವೇದಿಕೆ ಒದಗಿಸಿದ ಕುಮಾರ್‌ ಬಂಗಾರಪ್ಪ | ಭಿನ್ನ ಅಶ್ವಮೇದ

13

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 16, 2024 

ಉಪಚುನಾವಣೆ ಮುಗಿದ ಬೆನ್ನಲ್ಲೆ ರಾಜ್ಯ ಬಿಜೆಪಿಯಲ್ಲಿ ಮತ್ತೆ ಬಂಡಾಯದ ಕುದಿ ಆರಂಭವಾಗಿದೆ. ವಿಶೇಷವೆಂದರೆ ಕೇಸರಿ ಬಂಡಾಯಕ್ಕೆ ಮತ್ತೊಮ್ಮೆ ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕು ಮಾಜಿ ಶಾಸಕ ಕುಮಾರ್‌ ಬಂಗಾರಪ್ಪ ವೇದಿಕೆ ಒದಗಿಸಿದ್ದಾರೆ. ಈ ಹಿಂದೆಯು ಬಿಜೆಪಿ ಬಂಡಾಯಕ್ಕೆ ಸಂಬಂಧಿಸಿದಂತೆ ತಮ್ಮ ನಿವಾಸದಲ್ಲಿಯೇ ಸಭೆ ನಡೆಸಿದ್ದ ಅವರ ಮನೆಯಲ್ಲಿ ಇದೀಗ ಮತ್ತೊಮ್ಮೆ ಸಭೆ ನಡೆಸಿದೆ. 

ಕುಮಾರ್ ಬಂಗಾರಪ್ಪರವರಿಗೆ ಸೇರಿದ ಬೆಂಗಳೂರಿನಲ್ಲಿರುವ ಮನೆಯಲ್ಲಿ ಬಿಜೆಪಿ ಭಿನ್ನಮತೀಯರ ಸಭೆ ನಡೆದಿದೆ. ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಾಯಕತ್ವದ ವಿರುದ್ಧ ಆಸಮಾಧಾನಗೊಂಡಿರುವ ಹಿರಿಯ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ನೇತೃತ್ವದಲ್ಲಿ ಪ್ರತ್ಯೇಕ ಸಭೆ ನಡೆದಿದೆ. 

ಈ ಸಭೆಯಲ್ಲಿ  ವಕ್ ಆಸ್ತಿ ಕುರಿತಂತೆ ಜನಾಂದೋಲನ ನಡೆಸಲು ತೀರ್ಮಾನಿಸಿದ್ದಾರೆ. ವಕ್ಸ್‌ ಬೋರ್ಡ್ ಮೂಲಕ ರೈತರ ಜಮೀನಿಗೆ ನೋಟಿಸ್ ನೀಡುತ್ತಿರುವ ಸರ್ಕಾರದ ವಿರುದ್ಧ ಇದೇ ತಿಂಗಳ 25 ರಿಂದ ಡಿಸೆಂಬಂತ್‌ 25 ರವರೆಗೆ ಬೀದರ್ ನಿಂದ ಜನಜಾಗೃತಿ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ

ಈ ಅಭಿಯಾನಕ್ಕೆ ಯತ್ನಾಳ್‌ ನೇತೃತ್ವ ವಹಿಸಲಿದ್ದಾರೆ ಎಂದು ತಿಳಿದುಬಂದಿದ್ದು, ಸಭೆಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ ಸೇರಿದಂತೆ ಮತ್ತಿತರರ ಮುಖಂಡರು ಪಾಲ್ಗೊಂಡಿದ್ದರು

SUMMARY | Basanagouda Patil Yatnal, Aravind Limbavali, Ramesh Jarkiholi hold meeting at former minister Kumar Bangarappa’s residence 

KEYWORDS | Basanagouda Patil Yatnal, Aravind Limbavali, Ramesh Jarkiholi , meeting at former minister Kumar Bangarappa’s residence

Share This Article