ಭದ್ರ ಅಚ್ಚುಕಟ್ಟು ರೈತರಿಗೆ ಬಹುಮುಖ್ಯವಾದ ಸುದ್ದಿ | ಹೊರಬಿತ್ತು ನೀರು ನಿಲ್ಲಿಸುವ ಪ್ರಕಟಣೆ

13

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 21, 2024

ಶಿವಮೊಗ್ಗ | ಭದ್ರಾ ಅಚ್ಚುಕಟ್ಟು ರೈತರಿಗೆ ಸಂಬಂಧಿಸಿದಂತೆ ಬಹುಮುಖ್ಯ ಮಾಹಿತಿ ಲಭ್ಯವಾಗಿದೆ. ಇದೇ ನವೆಂಬರ್‌ 26 ರಿಂದ ಕಾಲುವೆಗಳಿಗೆ ನೀರಿನ ಹರಿವು ಸ್ಥಗಿತಗೊಳ್ಳಲಿದೆ. ಈ ಸಂಬಂದ ಕಾಡಾ (ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಕಾಡಾ) ಪ್ರಕಟಣೆಯನ್ನು ಸಹ ನೀಡಲಾಗಿದೆ. 

ಪ್ರಕಟಣೆಯ ವಿವರ ಹೀಗಿದೆ. ನವೆಂಬರ್‌ 26ರಿಂದ  ಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ನೀರು ಹರಿಸುವುದನ್ನು ನಿಲ್ಲಿಸಲಾಗುತ್ತಿದೆ. ಭದ್ರಾ ಜಲಾಶಯದ ನೀರಾವರಿ ಸಲಹಾ ಸಮಿತಿ ತೀರ್ಮಾನದಂತೆ ಮುಂಗಾರು ಹಂಗಾಮಿಗೆ ಗರಿಷ್ಠ 120 ದಿನಗಳಿಗೆ ಅನ್ವಯವಾಗುವಂತೆ ಕಳೆದ ಜುಲೈ 29 ರಿಂದ ಕಾಲುವೆಗಳಿಗೆ ನೀರು ಹರಿಸಲಾಗಿತ್ತು. ನಿಗದಿತ ಅವಧಿ ಮುಕ್ತಾಯಗೊಳ್ಳುವ ಕಾರಣ ಇದೆ ನವೆಂಬರ್‌ 26ರಿಂದ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗುವುದು ಭದ್ರಾ ಕಾಡಾ ಪ್ರಕಟಣೆ ತಿಳಿಸಿದೆ.

ನ.26 ರಿಂದ ಭದ್ರ ನಾಲೆಗಳಿಗೆ ಮುಂಗಾರು ಹಂಗಾಮಿನ ನೀರು ಸ್ಥಗಿತ

ಪ್ರಕಟಣೆಯ ಯಥಾವತ್ತು ವಿವರ

ಶಿವಮೊಗ್ಗ ನವೆಂಬರ್ 21: ಭದ್ರಾ ಯೋಜನೆಯ ಅಚ್ಚುಕಟ್ಟು ಪ್ರದೇಶದ 2024-25ನೇ ಸಾಲಿನ ಮುಂಗಾರು ಹಂಗಾಮಿಗೆ ನೀರಾವರಿ ಸಲಹಾ ಸಮಿತಿ ಸಭೆಯ ತೀರ್ಮಾನದಂತೆ, ಕಛೇರಿ ಅಧಿಸೂಚನೆಯ ದಿನಾಂಕ:29.07.2024 ರಿಂದ ಭದ್ರಾ ಜಲಾಶಯದಿಂದ ನೀರನ್ನು ಹರಿಬಿಡಲಾಗಿದ್ದು, ನೀರನ್ನು ಹರಿಸುವ ಗರಿಷ್ಠ ಅವಧಿ 120 ದಿನಗಳು ದಿ:26.11.2024ಕ್ಕೆ ಪೂರ್ಣಗೊಳ್ಳಲಿದೆ. 
ಆದ್ದರಿಂದ ದಿ:26.11.2024ರ ರಾತ್ರಿಯಿಂದ ಬಲದಂಡೆ ಮತ್ತು ಎಡದಂಡೆ ನಾಲೆಗಳಲ್ಲಿ ನೀರು ಹರಿಸುವುದನ್ನು ನಿಲ್ಲಿಸಲಾಗುವುದು. ಭದ್ರಾ ಜಲಾಶಯದ ಅಚ್ಚುಕಟ್ಟುದಾರರು ನಿಗಮದೊಂದಿಗೆ ಸಹಕರಿಸುವಂತೆ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 
——————

SUMMARY |  Bhadra Catchment Area Development Authority (CADA) has announced that the flow of water to the canals will be stopped from November 26

KEY WORDS | Bhadra Catchment Area,  Catchment Area Development Authority ,CADA, flow of water to the canals will stopped 

Share This Article