SHIVAMOGGA | MALENADUTODAY NEWS | ಮಲೆನಾಡು ಟುಡೆ Nov 26, 2024
ಮೂರು ಕ್ಷೇತ್ರಗಳ ಉಪಚುನಾವಣೆಯ ಗೆಲುವಿನ ಸಂಭ್ರಮೋತ್ಸವ ವೈಯಕ್ತಿಕ ಗಲಾಟೆಗೆ ತಿರುಗಿ ಪರಸ್ಪರ ಹಲ್ಲೆ ಮಾಡಿಕೊಂಡು ದೂರು ಪ್ರತಿದೂರು ದಾಖಲಿಸಿದ ಘಟನೆಯೊಂದು ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಶಿರಾಳಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿನ ಪ್ರಶಾಂತ್ ಹಾಗೂ ಹಿರೇಗೌಡರು ಈ ಸಂಬಂಧ ದೂರು ಪ್ರತಿದೂರು ನೀಡಿದ್ದು ಎಫ್‌ಐಆರ್ ಆಗಿದೆ. ಕಾಂಗ್ರೆಸ್ ವಿಜಯೊತ್ಸವದ ಸಂದರ್ಭದಲ್ಲಿ ಅವರು ಹೊಡೆದರು ಅಂತಾ ಇವರು, ಇವರು ಹೊಡೆದರು ಅಂತಾ ಅವರು ದೂರು ನೀಡಿದ್ದಾರೆ.
ಲಕ್ಷ್ಮಣ್ ಆತ್ಮಹತ್ಯೆ ಕೇಸ್, ಮೂವರ ವಿರುದ್ಧ FIR
ಮಾಜಿ ನಗರಸಭೆ ಸದಸ್ಯ ಲಕ್ಷ್ಮಣ ಆತ್ಮಹತ್ಯೆ ಕೇಸ್‌ನಲ್ಲಿ ಮೀಟರ್ ಬಡ್ಡಿ ದಂದೆ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಎಫ್‌ಐಆರ್ ದಾಖಲಾಗಿದೆ. ಅಲ್ಲದೆ ತುಂಗಾ ನಗರ ಪೊಲೀಸ್ ಠಾನೆಯ ಪೊಲೀಸರು ಆರೋಪಿಗಳಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ.ಪ್ರಕರಣದಲ್ಲಿ ಆರೋಪಿಗಳು ಅಂದಾಜು ಮೂರು ಲಕ್ಷಕ್ಕೆ 24 ಲಕ್ಷ ರೂಪಾಯಿ ವಸೂಲಿ ಮಾಡಲು ಮುಂದಾಗಿದ್ದರು ಎನ್ನಲಾಗುತ್ತಿದೆ. ಈ ಸಂಬಂಧ ಲಕ್ಷ್ಮಣರ ಕುಟುಂಬಸ್ಥರು ನೀಡಿದ ದೂರಿನನ್ವಯ ಕೇಸ್ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


ಪತ್ನಿಗೆ ಹುಬ್ಬೇರಿಸಿದಕ್ಕೆ ಹೊಡೆದಾಟ
ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರು ವ್ಯಾಪ್ತಿಯ ಪ್ರದೇಶದಲ್ಲಿ ಪತ್ನಿಗೆ ಹುಬ್ಬೇರಿಸಿ ಮಾತನಾಡಿದ ವಿಚಾರಕ್ಕೆ ಹೊಯ್ ಕೈ ನಡೆದಿದೆ. ಎರಡು ಗುಂಪುಗಳ ನಡುವೆ ಈ ಹೊಡೆದಾಟ ನಡೆದಿದೆ ಎನ್ನಲಾಗಿದ್ದು,ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸ್ತಿದ್ದಾರೆ. ಪ್ರಕರಣದಲ್ಲಿ ಕೆಲವರಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
SUMMARY | shivamogga fast news
KEY WORDS | shivamogga fast news