ಬೈಕ್‌ ಸಾಲದ ಕಂತಿಗಾಗಿ ಫೈನಾನ್ಸ್‌ ರಿಕವರಿ ಏಜೆಂಟ್‌ನ ಕಿರುಕುಳ | ನೇಣಿಗೆ ಶರಣಾದ ತಂದೆ, ನ್ಯಾಯಕ್ಕಾಗಿ ಪೊಲೀಸರಿಗೆ ಪುತ್ರಿ ಮೊರೆ

13

SHIVAMOGGA| MALENADUTODAY NEWS | ಮಲೆನಾಡು ಟುಡೆ  Feb 18, 2025 ‌‌ 

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಜನ್ನಾಪುರದಲ್ಲಿ ಫೈನಾನ್ಸ್‌ ಕಿರುಕುಳಕ್ಕೆ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮೃತರ ಪುತ್ರಿ ನೀಡಿದ ದೂರಿನನ್ವಯ ಭದ್ರಾವತಿ ನ್ಯೌಟೌನ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಮೃತರ ಪುತ್ರಿ ನೀಡಿರುವ ದೂರಿನನ್ವಯ, ಮೃತರು ಫೈನಾನ್ಸ್‌ ಕಂಪನಿಯಲ್ಲಿ ಸಾಲ ಮಾಡಿ ಬೈಕ್‌ವೊಂದನ್ನ ಖರೀದಿಸಿದ್ದರಂತೆ. ಆದರೆ ಪಡೆದ ಸಾಲವನ್ನು ಪೂರ್ತಿಯಾಗಿ ಮರುಪಾವತಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. ಕೆಲವು ಕಂತುಗಳನ್ನ ಬಾಕಿ ಉಳಿಸಿಕೊಂಡಿದ್ದ ಅವರಿಗೆ ಫೈನಾನ್ಸ್‌ ರಿಕವರಿ ಏಜೆಂಟ್‌ ಪದೇಪದೇ ಫೋನ್‌ ಮಾಡಿ ಬೆದರಿಕೆ ಹಾಕುತ್ತಿದ್ದರಂತೆ. ಈಚೆಗೆ ಎರಡು ತಿಂಗಳನಿಂದ ಈ ಕಿರುಕುಳ ವಿಪರೀತವಾಗಿದೆ ಎಂದು ಮೃತರ ಪುತ್ರಿ ದೂರಿನಲ್ಲಿ ಆರೋಪಿಸಿದ್ದಾರೆ. 

ಇನ್ನು ದಿನಾಂಕ 15-02.2025 ರಂದು ಸಂತ್ರಸ್ತರ ಮನೆಗೆ ಬಂದ ರಿಕವರಿ ಏಜೆಂಟ್‌,  ಹೀನಾಮಾನವಾಗಿ ಅವರನ್ನು ನಿಂದಿಸಿ, ವಾರ್ನಿಂಗ್‌ ಕೊಟ್ಟು ತೆರಳಿದ್ದರು. ಈ ವಿಷಯವನ್ನು ಕಾಲೇಜಿನಿಂದ ಮನೆಗೆ ಬಂದ ತಮ್ಮ ಪುತ್ರಿಗೆ ತಂದೆ ತಿಳಿಸಿದ್ದಾರೆ. ಬಳಿಕ ಕೆಲವೇ ಹೊತ್ತಿನಲ್ಲಿ ಅವರು ತಮ್ಮ ಕೋಣೆಗೆ ತೆರಳಿ ನೇಣಿಗೆ ಶರಣಾಗಿದ್ದಾರೆ. ಇದರಿಂದ ನೊಂದ ಪುತ್ರಿ ತಮ್ಮ ತಂದೆ ಸಾವಿಗೆ ಕಾರಣವಾದರವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನ್ಯೂಟೌನ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 

SUMMARY |  bhadravati finance torture case , new town police station case

KEY WORDS |   bhadravati finance torture case , new town police station case

Share This Article