SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 11, 2025
ಶಿವಮೊಗ್ಗ | ರೋಟರಿ ಕ್ಲಬ್ ಶಿವಮೊಗ್ಗ ಇವರ ಪ್ರಾಯೋಜಕತ್ವದ ಹಾಗೂ ಅಂಗವಿಕಲರ ಕಲ್ಯಾಣ ಇಲಾಖೆ ಶಿವಮೊಗ್ಗ ಇವರ ಅನುದಾನದ ಸಹಯೋಗದೊಂದಿಗೆ ಮಾರ್ಚ್ 21 ಹಾಗೂ 22 ರಂದು ಬುದ್ಧಿಮಾಂದ್ಯ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರವನ್ನು ಆಶಾಕಿರಣ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆ ಶಿವಮೊಗ್ಗದಲ್ಲಿ ಹಮ್ಮಿಕೊಂಡಿದ್ದೇವೆ ಎಂದು ಶಾಲೆಯ ಕಾರ್ಯದರ್ಶಿಯಾದ ಮಂಜುನಾಥ್ ನಾಯ್ಕ್ ತಿಳಿಸಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಅವರು. ಈ ಉಚಿತ ಬೇಸಿಗೆ ಶಿಬಿರಕ್ಕೆ 6 ರಿಂದ 18 ವರ್ಷದ ಒಳಗಿನ ಬುದ್ಧಿಮಾಂದ್ಯ ಮಕ್ಕಳು ಭಾಗವಹಿಸಬಹುದು ಶಿಬಿರದಲ್ಲಿ ಮಕ್ಕಳಿಗೆ ಕ್ರೀಡೆ, ಕರಕುಶಲ ಸಂಗೀತ, ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಇರಲಿದ್ದು, ಮಕ್ಕಳಿಗೆ ಉಚಿತವಾಗಿ ಊಟ ಉಪಹಾರ, ವಸತಿ ವ್ಯವಸ್ಥೆ ಇರುತ್ತದೆ. ಈ ಶಿಬಿರದಲ್ಲಿ ಭಾಗವಹಿಸಲು ಇಚ್ಚಿಸುವವರು ಮಾರ್ಚ್ 19 ರ ಒಳಗೆ ಒಳಗೆ ಈ ಕೆಳಕಂಡ ನಂಬರ್ ಗೆ ಫೋನ್ ಮಾಡಿ ಹೆಸರನ್ನು ನೊಂದಾಯಿಸಿ ಕೊಳ್ಳಬೇಕು ಎಂದರು.
ಡಾ:ರಜಿನಿ ಪೈ 94482 88487, ಎ.ಮಂಜುನಾಥ್ 98440 55287,
SUMMARY | On March 21 and 22, a free summer camp for mentally retarded children will be held at Asha Kirana Residential School for Mentally Retarded Children, Shivamogga
KEYWORDS | mentally retarded children , summer camp, Asha Kirana, Residential School,