ಎಣ್ಣೆ ಹೊಡೆದು ರೈಲ್ವೇ ಹಳಿ ಮೇಲೆ ಮಲಗಿದ ಕುಡುಕ | ಪವಾಡದ ರೀತಿಯಲ್ಲಿ ಎಸ್ಕೇಪ್, ವಿಡಿಯೋ ವೈರಲ್‌

ಹಂಚಿಕೊಳ್ಳಿ
WhatsApp Facebook X Telegram
ಎಣ್ಣೆ ಹೊಡೆದು ರೈಲ್ವೇ ಹಳಿ ಮೇಲೆ ಮಲಗಿದ ಕುಡುಕ | ಪವಾಡದ ರೀತಿಯಲ್ಲಿ ಎಸ್ಕೇಪ್, ವಿಡಿಯೋ ವೈರಲ್‌

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 11, 2025

ಕುಡಿದ ಅಮಲಿನಲ್ಲಿ ಕೆಲವರಿಗೆ ತಾವು ಏನು ಮಾಡುತ್ತಿದ್ದೇವೆ ಎಂಬ ಅರಿವು ಇರುವುದಿಲ್ಲ. ಕೆಲವೊಮ್ಮೆ ಕುಡಿದ ಅಮಲಿನಲ್ಲಿ ರಸ್ತೆ ಹಳ್ಳ ಸೇರಿದಂತೆ ಇನ್ನಿತರೆ ಪ್ರದೇಶದಲ್ಲಿ ಬಿದ್ದು ಏಳುತ್ತಾರೆ. ಅದರಿಂದಾಗಿ ಅನೇಕ ಅನಾಹುತಗಳು ಸಂಭವಿಸುತ್ತವೆ. ಈ ಹಿನ್ನಲೆ ಕೆಲವರು ತಮ್ಮ ಜೀವವನ್ನೇ ಕಳೆದುಕೊಂಡಿದ್ದರೆ ಇನ್ನೂ ಕೆಲವರು ಪವಾಡದ ರೀತಿಯಲ್ಲಿ ಬದುಕುಳಿಯುತ್ತಾರೆ. ಇಲ್ಲಿಯೂ ಸಹ ಅಂಥಹುದ್ದೇ ಒಂದು ಘಟನೆ ನಡೆದಿದೆ. ಅದೇನೆಂದರೆ ರೈಲ್ವೇ ಟ್ರ್ಯಾಕ್ ಮೇಲೆ ಕುಡುಕನೊಬ್ಬ ಕಂಠಪೂರ್ತಿ ಕುಡಿದು ಮಲಗಿದ್ದು ಪವಾಡದ ರೀತಿಯಲ್ಲಿ ಬದುಕುಳಿದಿದ್ದಾನೆ. ಆ ವಿಡಿಯೋ ಸಿಸಿ ಟಿವಿಯಲ್ಲಿ ಸೆರೆ ಆಗಿದ್ದು, ಈಗ ಎಲ್ಲೆಡೆ ವೈರಲ್ ಆಗಿದೆ.

ವಿಡಿಯೋದಲ್ಲಿ ಏನಿದೆ

ವಿಡಿಯೋದಲ್ಲಿರುವಂತೆ ಪೆರುವಿನ ರಾಜ್ಯ ಲಿಮಾ ಎಂಬಲ್ಲಿ 28 ವರ್ಷದ ಯುವಕನೊಬ್ಬ ಕಂಠಪೂರ್ತಿ ಕುಡಿದು ರೈಲ್ವೆ ಟ್ರ್ಯಾಕ್ ಮೇಲೆ ತಲೆ ಇಟ್ಟು ಮಲಗಿದ್ದಾನೆ. ಆ ವೇಳೆ ಟ್ರೈನ್ ಆ ಹಳಿಯಲ್ಲಿ ಬಂದಿದ್ದು, ಅದು ಆತನ ಅರಿವಿಗೆ ಬರಲಿಲ್ಲ. ರೈಲು ಹತ್ತಿರ ಬಂದು ಇನ್ನೇನು ಆತನ ತಲೆಯ ಮೇಲೆ ಹತ್ತಬೇಕು ಎನ್ನುವ ವೇಳೆಯಲ್ಲಿ ಪವಾಡ ರೀತಿಯಲ್ಲಿ ಕುಡುಕ ತಪ್ಪಿಸಿಕೊಂಡಿದ್ದಾನೆ. ಆದರೂ ಸಹ ಆತನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ನಂತರ ಆತ ಅಲ್ಲಿ ಏನೂ ನಡೆದೇ ಇಲ್ಲ ಎಂಬಂತೆ ಸಾಗಿದ್ದಾನೆ.

https://x.com/Anewz_tv/status/1898705335893852569?t=ZhyD0ZkEvs1gUfMha_WX-A&s=08

SUMMARY | A drunkard was found lying drunk on the railway track and miraculously survived.

KEYWORDS |  railway track, drunkard, survived, viral video,

ಹಂಚಿಕೊಳ್ಳಿ
WhatsApp Facebook X Telegram
131
ಲೇಖಕರ ಬಗ್ಗೆ

131

Malenadu Today Contributor