ಬಾಳಬರೆ ಚಂಡಿಕಾ ದೇವಾಸ್ಥಾನದ ಬಳಿಯಲ್ಲಿ ಕ್ಯಾಂಟರ್‌ ಪಲ್ಟಿ, ಬೊಲೆರೊ ಜಖಂ

13

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 14, 2024 

ಶಿವಮೊಗ್ಗ | ಹೊಸನಗರ ತಾಲ್ಲೂಕು ಬಾಳೆಬರೆಯಲ್ಲಿರುವ ಚಂಡಿಕಾಂಬಾ ದೇವಾಲಯದ ಬಳಿ ಕ್ಯಾಂಟರ್‌ವೊಂದು ಪಲ್ಟಿಯಾಗಿರುವ ಬಗ್ಗೆ ವರದಿಯಾಗಿದೆ. 

- Advertisement -

ಕ್ಯಾಂಟರ್‌ ಪಲ್ಟಿಯಾದ ಪರಿಣಾಮ ದೇವಾಲಯದ ಧರ್ಮದರ್ಶಿಗಳಿಗೆ ಸೇರಿದ ವಾಹನ ಜಖಂಗೊಂಡಿದೆ. ಹಾಗೂ ದೇವಾಲಯದ ಕಾಪೌಂಡ್‌ ಕುಸಿದಿದೆ. ಇನ್ನೂ ಕ್ಯಾಂಟರ್‌ ಒಂದು ಬದಿಗೆ ಪಲ್ಟಿಯಾಗಿದ್ದು, ಅದರಲ್ಲಿರುವ ಸಾಮಗ್ರಿಯು ರಸ್ತೆಗೆಬಿದ್ದಿದೆ. ಘಟನೆಯಲ್ಲಿ ಯಾರಿಗೂ ಅಪಾಯ ಉಂಟಾಗಿಲ್ಲ. 

ನಿನ್ನೆ ರಾತ್ರಿ 8 ಗಂಟೆ ಹೊತ್ತಿಗೆ ನಡೆದ ಘಟನೆ ಇದು. ಶಿವಮೊಗ್ಗದಿಂದ ಬರುತ್ತಿದ್ದ ಕ್ಯಾಂಟರ್‌ ದೇವಾಲಯದ ತಿರುವಿನ ಬಳಿಯಲ್ಲಿ ಚಾಲಕನ ನಿಯಂತ್ರಣಕ್ಕೆ ಸಿಗದೆ ಪಲ್ಟಿಯಾಗಿದೆ. ಇದಕ್ಕೂ ಮೊದಲು ದೇವಾಲಯದ ಕಾಂಪೌಡ್‌ ಹಾಗೂ ಇನ್ನೊಂದು ವಾಹನಕ್ಕೆ ಡಿಕ್ಕಿಯಾಗಿದೆ. 

ಕ್ಯಾಂಟರ್‌ ಚಾಲಕನಿಗೆ ಪೆಟ್ಟಾಗಿದ್ದು, ಈ ಸಂಬಂಧ ನಗರ ಪೊಲೀಸ್‌ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. 

SUMMARY | canter overturned near Chandika Devasthanam near Balebare at Hulikal Ghat in Hosanagara taluk of Shivamogga district. 

KEYWORDS |  canter overturned , Chandikamba Devasthana, near Balebare at Hulikal Ghat,  Hosanagara taluk of Shivamogga district. 

Share This Article