SHIVAMOGGA | MALENADUTODAY NEWS | ಮಲೆನಾಡು ಟುಡೆ | Nov 25, 2024
ಪರ್ತ್ ನಲ್ಲಿ ನಡೆದ ಬಾರ್ಡ್ರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಭಾರತ ಆಸ್ಟ್ರೇಲಿಯಾದ ವಿರುದ್ದ 297 ರನ್ ಗಳ ಭರ್ಜರಿ ಜಯ ದಾಖಲಿಸಿದೆ. ಮೊದಲನೆ ಪಂದ್ಯದಲ್ಲಿ ಗೆಲ್ಲುವ ಮೂಲಕ ಭಾರತವು 5 ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.
ಈ ಹಿಂದೆ ಟೀಂ ಇಂಡಿಯಾ 1977 ರಲ್ಲಿ ಮೆಲ್ಟೋರ್ನ್ ಟೆಸ್ಟ್ ನಲ್ಲಿ 222 ರನ್ ಗಳ ಜಯ ದಾಖಲಿಸಿತ್ತು. ಅದಾಗಿ ಇಂದು 47 ವರ್ಷಗಳ ನಂತರ ಭಾರತ ಆಸ್ಟ್ರೇಲಿಯಾ ವಿರುದ್ದ ಭರ್ಜರಿ ಜಯ ದಾಖಲಿಸಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಬೂಮ್ರಾ ಪಡೆ ಮೊದಲು ಬ್ಯಾಟಿಂಗ್ ಅಯ್ದುಕೊಂಡಿತು. ಅದರಂತೆ ಮೊದನೇ ಇನ್ನಿಂಗ್ಸ್ ಅಲ್ಲಿ 150 ರನ್ ಗಳನ್ನು ಗಳಿಸಿ ಆಲ್ ಔಟ್ ಆಯಿತು. ನಂತರ ಬ್ಯಾಟಿಂಗ್ ಆರಂಬಿಸಿದ ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 104 ರನ್ ಗಳನ್ನಷ್ಟೇ ಗಳಿಸಿ ಆಲೌಟ್ ಆಗಿ ಭಾರತೀಯ ವೇಗಿಗಳ ಆಟಕ್ಕೆ ತತ್ತರಿಸಿತು.
ನಂತರ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ವಿರಾಟ್ ಕೊಹ್ಲಿ ಹಾಗೂ ಜೈಸ್ವಾಲ್ ಶತಕದ ನೆರವಿನಿಂದ 6 ವಿಕೆಟ್ ನಷ್ಟಕ್ಕೆ 487 ಪೇರಿಸಿ ಡಿಕ್ಲೇರ್ ಘೋಷಿಸಿತು.
ಇದರಿಂದಾಗಿ ಮೊದಲ ಇನ್ನಿಂಗ್ಸ್ ನಲ್ಲಿ 46 ರನ್ ಗಳಲ್ಲಿ ಹಿಂದಿದ್ದ ಆಸ್ಟ್ರೇಲಿಯಾ ಈ 487 ರನ್ಸ ಸೇರಿ 534 ರನ್ಗಳ ಗುರಿ ಪಡೆಯಿತು.
ಈ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಂಡಕ್ಕೆ ಭಾರತದ ಬೌಲರ್ ಗಳು ಆರಂಭಿಕ ಆಘಾತ ನೀಡಿದ್ದರು. ಪರಿಣಾಮ 3ನೇ ದಿನದಾಟದ ಅಂತ್ಯದ ವೇಳೆಗೆ ಆಸ್ಟ್ರೇಲಿಯಾ ತಂಡವು 12 ರನ್ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತು.
ಈ ಹಂತದಲ್ಲಿ ಟ್ರಾವಿಸ್ ಹೆಡ್ ಉತ್ತಮವಾಗಿ ಪಂದ್ಯವನ್ನು ಆಡಿದರೂ 89 ರನ್ ಗಳಿಸುವಷ್ಟರಲ್ಲಿ ಬುಮ್ರಾಗೆ ವಿಕೆಟ್ ಒಪ್ಪಿಸಿದರು. ನಿತೀಶ್ ರೆಡ್ಡಿ, ಮಿಚೆಲ್ ಮಾರ್ಷ್ ರನ್ನು 47 ರನ್ ಗೆ ಔಟ್ ಮಾಡಿದರು. ಈ ಎರಡು ಬ್ಯಾಟರ್ ಗಳನ್ನು ಔಟ್ ಆದ ನಂತರ ಯಾವ ಬ್ಯಾಟ್ಸ್ ಮ್ಯಾನ್ ಕೂಡಾ ಉತ್ತಮವಾಗಿ ಬ್ಯಾಟಿಂಗ್ ಮಾಡಲಿಲ್ಲ. ಆದ್ದರಿಂದ ಆಸ್ಟ್ರೇಲಿಯಾ 238 ರನ್ಗಳಿಗೆ ಆಲೌಟ್ ಆಯಿತು.. ಈ ಮೂಲಕ ಟೀಮ್ ಇಂಡಿಯಾ 295 ರನ್ಗಳ ಭರ್ಜರಿ ಜಯ ದಾಖಲಿಸಿತು.
SUMMARY| India defeated Australia by 297 runs in the Border Gavaskar Test series in Perth.
KEYWORDS| Border Gavaskar Test, India defeated Australia, test, cricket news,