SHIVAMOGGA | MALENADUTODAY NEWS | ಮಲೆನಾಡು ಟುಡೆ Dec 12, 2024
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ಪೇಟೆಯಲ್ಲಿ ಬಸ್ ಹೆಡ್ಲೈಟ್ ಆಫ್ ಮಾಡುವ ವಿಚಾರಕ್ಕೆ ಬಸ್ ಡ್ರೈವರ್ ಹಾಗೂ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ ಪ್ರಕರಣವೊಂದರ ಸಂಬಂಧ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಏನಿದು ಘಟನೆ
ಕಳೆದ 10 ನೇ ತಾರೀಖು ರಾತ್ರಿ 12 ಗಂಟೆ ಸುಮಾರಿಗೆ ಸಾಗರದ ಹಳೆ ಬಸ್ ನಿಲ್ದಾಣ ( ಜೋಗ ಬಸ್ ನಿಲ್ದಾಣ) ದಲ್ಲಿ ಗೋವಾ ಟು ಮೈಸೂರು ಹೋಗುವ ಬಸ್ಸನ್ನು ನಿಲಿಸಿ ಪ್ರಯಾಣಿಕರ ಲಗೇಜ್ ಇಳಿಸುತ್ತಿರುವಾಗ, ಅಲ್ಲಿಗೆ ಬಂದ ಮೂವರು ಡ್ರೈವರ್ಗೆ ಬಸ್ಸಿನ ಲೈಟ್ ಆಫ್ ಮಾಡಲು ಹೇಳಿ ಬಾಯಿಗೆ ಬಂದಂತೆ ಬೈದು ಹೊಡೆಯಲು ಹೋಗಿದ್ದಾರೆ ಎಂದು ದೂರಲಾಗಿದೆ. ಇದನ್ನ ಪೃಶ್ನೆ ಮಾಡಿದ್ದಕ್ಕೆ ಕಂಡಕ್ಟರ್ರವರ ಮೇಲೆ ಹಲ್ಲೆ ಮಾಡಿದ್ದು ಕಂಡಕ್ಟರ್ ಕಿವಿಗೆ ಕಲ್ಲಿನಿಂದ ಗುದ್ದಿ ಗಾಯಗೊಳಿಸಲಾಗಿದೆ. ಈ ಸಂಬಂಧ ಗಾಯಾಳು ನೀಡಿದ ಹೇಳಿಕೆ ಆಧರಿಸಿ ಎಫ್ಐಆರ್ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

SUMMARY | An FIR has been registered at Sagar Town police station in connection with the assault on a bus driver and conductor at Sagar town in Sagara taluk of Shivamogga district over the issue of switching off the headlights of the bus.
KEY WORDS | Sagar Town police station ,Sagar town , Sagara taluk , Shivamogga district , headlights of the bus.