SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 5, 2025
ತೀರ್ಥಹಳ್ಳಿ | ತಾಲ್ಲೂಕಿನ ಗಬಡಿಯ ಪುರಾತನ ದೇವಸ್ಥಾನವಾದ ಸೋಮೇಶ್ವರ ದೇವಸ್ಥಾನದ ಸೋಮೇಶ್ವರ, ಶ್ರೀ ಗಣಪತಿ, ಶ್ರೀ ದುರ್ಗಾ, ಶ್ರೀ ನಂದಿಕೇಶ್ವರ ಹಾಗೂ ಶ್ರೀ ನಾಗದೇವತೆಗಳ ಪುನಃ ಪ್ರತಿಷ್ಠಾಪನೆ ಕಾರ್ಯಕ್ರಮವು ಫೆ 8, 9, 10 ರಂದು ನಡೆಯಲಿದೆ.
ಈ ಸೋಮೇಶ್ವರ ದೇವಸ್ಥಾನಕ್ಕೆ ಪುರಾತನ ಇತಿಹಾಸವಿದ್ದು, ಇಲ್ಲಿರುವ ಶಿವಲಿಂಗ ಉದ್ಭವ ಮೂರ್ತಿಯಾಗಿದೆ. ಬಹಳ ಪುರಾತನವಾದ ದೇವಸ್ಥಾನ ಶಿಥಿಲಗೊಂಡಿತ್ತು. ಆದ್ದರಿಂದ ಈ ದೇವಾಲಯನ್ನು ದುರಸ್ಥಿಗೊಳಿಸಿ ದೇವಾಲಯದ ಪುನರ್ ನಿರ್ಮಾಣದ ಕೆಲಸವನ್ನು 8 ವರ್ಷದ ಹಿಂದೆ ಸೋಮೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಪ್ರಾರಂಭಮಾಡಿತ್ತು. ಆದರೆ ಹಣ ಹೊಂದಾಣಿಕೆ ಸೇರಿದಂತೆ ಅನೇಕ ಕಾರಣಗಳಿಂದ ದೇವಾಲಯದ ಕೆಲಸ ವಿಳಂಬವಾಗಿತ್ತು. ಆದರೆ ಇದೀಗ ದೇವಾಲಯ ಕೆಲಸಗಳು ಪೂರ್ಣಗೊಂಡಿದ್ದು, ಪುನರ್ ಪ್ರತಿಷ್ಠಾಪನೆಗೆ ಸಿದ್ಧವಾಗಿದೆ.
3 ದಿನಗಳ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ದೇವರಿಗೆ ವಿವಿಧ ಪೂಜಾ ಕಾರ್ಯಕ್ರಮಗಳು ವಿಧಿ ಬದ್ದವಾಗಿ ನಡೆಯಲಿದ್ದು, ಪೂಜೆಗಳ ವಿವರ ಈ ಕೆಳಕಂಡಂತಿದೆ.
ಮೊದಲ ದಿನ ಅಂದರೆ ಫೆ 8 ರಂದು ಶನಿವಾರ ಬೆಳಿಗ್ಗೆ 10: 30 ರಿಂದ ಶ್ರೀ ಗುರುಗಣೇಶ ಪೂಜೆ, ಪುಣ್ಯಾಹ, ದೇವನಾಂದಿ. ಶ್ರೀ ಋಗ್ವರಣೆ. ಏಕನಾರಿಕೇಳ, ಗಣಯಾಗ ಪೂಜೆ ನಡೆಯಲಿದೆ. ಹಾಗೆಯೇ ಸಂಜೆ 5-00 ಗಂಟೆಯಿಂದ ಆಶ್ಲೇಷ ಬಲಿ. ಶ್ರೀ ನಾಗದೇವರ ಅಧಿವಾಸ ಹೋಮ. ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ಇರಲಿದೆ.
ಫೆ 9 ರಂದು ಬೆಳಿಗ್ಗೆ 8:15 ರಿಂದ ಗುರುಗಣೇಶ ಪೂಜೆ, ಶ್ರೀ ನಾಗದೇವರ ಪ್ರತಿಷ್ಠಾಪನೆ, ಪ್ರತಿಷ್ಠಾಪನಾ ಹೋಮ.ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ, ಪ್ರಸಾದ ದಿನಿಯೋಗ ಇರಲಿದೆ. ಸಂಜೆ 5-00 ಗಂಟೆಯಿಂದ ವಾಸ್ತು ರಾಕ್ಕೋಘ್ನ ಹೋಮ, ವಾಸ್ತುಬಲಿ, ದಿಗ್ಗಲಿ, ಮಂಟಪ ಸಂಸ್ಕಾರ ತೋರಣ ಸಂಸಾ ಶ್ರೀ ದೇವರುಗಳ ಅಧಿವಾಸ ಹೋಮ, ಹಾಗೂ ಸ್ವಾಮಿಗೆ ಮಹಾಮಂಗಳಾರತಿ ನಡೆಯಲಿದೆ.
ಕೊನೆಯ ದಿನವಾದ ಫೆ 10 ರಂದು ಬೆಳಿಗ್ಗೆ 8 ಗಂಟೆಯಿಂದ ಶ್ರೀ ಗುರುಗಣೇಶ ಪೂಜೆ, ಬೆಳಿಗ್ಗೆ 9-00 ಗಂಟೆಯಿಂದ ಕಳಸ ಶಿಖರ ಪ್ರತಿಷ್ಠಾಪನೆ, ಅಷ್ಟಬಂಧ ಸಹಿತ ಶ್ರೀ ದೇವರ ಪ್ರತಿಷ್ಠಾಪನೆ. ಪ್ರತಿಷ್ಟಾಂಗ ಹೋಮ, ವಿಶೇಷ ಪೂಜೆ, ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಂತರ ಮಧ್ಯಾಹ್ನ 1-30 ಕ್ಕೆ ಅನ್ನಸಂತರ್ಪಣೆ ಇರುತ್ತದೆ.
ಈ ಎಲ್ಲ ಕಾರ್ಯಕ್ರಮಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಸೋಮೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಭಕ್ತರಲ್ಲಿ ಕೋರಿದೆ.
SUMMARY | The re-installation ceremony of Someshwara, Sri Ganapathi, Sri Durga, Sri Nandikeswara and Sri Nagadevata of Someshwara Temple, an ancient temple at Gabadi in the taluk, will be held on Feb. 8, 9 and 10.
KEYWORDS | Someshwara temple, gabadi, reinstallation ceremony,