SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 18, 2024
ಶಿವಮೊಗ್ಗ | ನಗರದ ಡಿ ಎ ಆರ್ ಪೊಲೀಸ್ ಕವಾಯತು ಮೈದಾನದಲ್ಲಿ ಎಸ್ ಪಿ ಮಿಥುನ್ ಕುಮಾರ್ ರವರು ಪೊಲೀಸ್ ಇಲಾಖೆಯ ಎಲ್ಲಾ ವಾಹನಗಳ ಪರಿವೀಕ್ಷಣೆಯನ್ನು ನಿನ್ನೆ ನಡೆಸಿದರು.
ಈ ಸಂದರ್ಭದಲ್ಲಿ ಮೊದಲು ಪೊಲೀಸ್ ಇಲಾಖೆಯ ಎಲ್ಲಾ ದ್ವಿಚಕ್ರ ವಾಹನ, ನಾಲ್ಕು ಚಕ್ರದ ವಾಹನ, ಟ್ರಕ್, ಟಿ.ಟಿ ವಾಹನ ಟ್ಯಾಂಕರ್, ಹೆದ್ದಾರಿ ಗಸ್ತು ವಾಹನ ಮತ್ತು ಇ.ಆರ್.ಎಸ್ಎಸ್.-112 ವಾಹನಗಳು ಉತ್ತಮ ಕಂಡಿಷನ್ ನಲ್ಲಿ ಇದೇಯೇ ಎಂದು ಪರಿಶೀಲಿಸಿದರು, ನಂತರ ವಾಹನದಲ್ಲಿ ತುರ್ತು ಸಂದರ್ಭದಲ್ಲಿ ಉಪಯೋಗಿಸಬೇಕಿರುವ ಟೂಲ್ ಕಿಟ್, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಹಗ್ಗ, ಟಾರ್ಚ್, ಕಾಷನರಿ ಸೈನ್ ಬೋರ್ಡ್, ರಿಫ್ಲೆಕ್ಟಿವ್ ಜಾಕೇಟ್ ಗಳು, ಕೇನ್ ಶಿಲ್ಡ್, ಬಾಡಿ ಪ್ರೊಟೆಕ್ಟರ್ ಗಳು ವಾಹನದಲ್ಲಿ ಇರುವ ಬಗ್ಗೆ ಹಾಗೂ ವಾಹನಕ್ಕೆ ಅಳವಡಿಸಿರುವ ಪಬ್ಲಿಕ್ ಅಡ್ರೆಸ್ ಸಿಸ್ಟಂ, ಸೈರನ್ ಹಾಗೂ ನಿಸ್ತಂತು ಉಪಕರಣಗಳು ಉತ್ತಮ ಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆಯೇ ಪರಿಶೀಲಿಸಿದರು.
ನಂತರ ವಾಹನದ ಎಮಿಷನ್ ಪರೀಕ್ಷಾ ವರದಿ ಹಾಗೂ ವಾಹನಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಪರಿಶೀಲಿಸಿದ ಅವರು ಇಲಾಖಾ ವಾಹನಗಳನ್ನು ಹಂಚಿಕೆ ಮಾಡಿರುವ ಚಾಲಕರುಗಳಿಗೆ ಹಾಗೂ ಪೊಲೀಸ್ ಅಧಿಕಾರಿಗಳಿಗೆ ವಾಹನಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುವಂತೆ ಸೂಚಿಸಿದರು. ಹಾಗೆಯೇ ಇಲಾಖಾ ವಾಹನವನ್ನು ಉತ್ತಮವಾಗಿ ನಿರ್ವಹಣೆ ಮಾಡಿದ ಚಾಲಕರಿಗೆ ಪ್ರಶಂಸಿಸಿದರು.
SUMMARY | SP Mithun Kumar inspected all the vehicles of the police department at the DAR Police Parade Ground in the city yesterday.
KEYWORDS | SP Mithun Kumar, DAR Police Parade Ground, vehicles ,