SHIVAMOGGA | MALENADUTODAY NEWS | ಮಲೆನಾಡು ಟುಡೆ Dec 13, 2024
ಪುಷ್ಪಾ 2 ಸಿನಿಮಾ ಸಾವಿರ ಕೋಟಿ ಕ್ಲಬ್ ಸೇರಿದ ಬೆನ್ನಲ್ಲೆ ನಟ ಅಲ್ಲು ಅರ್ಜುನ್‌ಗೆ ಸಂಕಷ್ಟವೂ ಎದುರಾಗಿದೆ. ಹೈದರಾಬಾದ್‌ನ ಥಿಯೇಟರ್‌ನ ಮುಂದೆ ನಡೆದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ದಾಖಲಾದ ಪ್ರಕರಣದಲ್ಲಿ ಅಲ್ಲು ಅರ್ಜನ್‌ರನ್ನ ವಶಕ್ಕೆ ಪಡೆಯಲಾಗಿದೆ.
ಹೈದರಾಬಾದ್ ಪೊಲೀಸರು ಇವತ್ತು ಅವರನ್ನ ಬಂಧಿಸಿದ್ದಾರೆ ಎಂದು ಹೈದರಾಬಾದ್ ಮೀಡಿಯಾಗಳು ವರದಿ ಮಾಡಿವೆ. ಇನ್ನೊಂದೆಡೆ ಅವರನ್ನ ವಿಚಾರಣೆಗಾಗಿ ಕರೆದೊಯ್ಯಲಾಗಿದೆ ಎಂದು ಸಹ ಹೇಳಲಾಗುತ್ತಿದೆ.
#AlluArjun పై కేసు బుక్ చేసింది ఈ కింది సెక్షన్స్ తోనే
105,
118(1),
రెడ్ విత్ 3/5 BNS105 సెక్షన్ నాన్బెయిలబుట్ కేసు.. 5 నుంచి 10 ఏళ్లు జైలు శిక్ష పడే అవకాశం pic.twitter.com/9eLoauCO8i
— CHITRAMBHALARE (@chitrambhalareI) December 13, 2024
ಕಳೆದ ಡಿಸೆಂಬರ್ 4 ರಂದು ಚಿತ್ರ ಪ್ರದರ್ಶನದ ಸಮಯದಲ್ಲಿ ಸಂಧ್ಯಾ ಚಿತ್ರಮಂದಿರದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 35 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ಈ ಸಂಬಂಧ ಸೆಕ್ಷನ್ 105, 118(1)r/w3(5) BNS ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪೊಲೀಸರು ಅಲ್ಲು ಅರ್ಜುನ್, ಸಿನಿಮಾ ತಂಡ ಹಾಗೂ ಥಿಯೇಟರ್ ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.
ಇನ್ನೂ ಇದೇ ವಿಚಾರದಲ್ಲಿ ಅಲ್ಲು ಅರ್ಜುನ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿ ಪ್ರಕರಣ ರದ್ದುಗೊಳಿಸುವಂತೆ ಮನವಿ ಮಾಡಿದ್ದರು. ಇದರ ನಡುವೆ ಇವತ್ತು ಪೊಲೀಸರು ಅಲ್ಲು ಅರ್ಜುರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
అల్లు అర్జున్ అరెస్ట్ EXCLUSIVE VIDEO@alluarjun #AlluArjun #PushpaTheWildFire #Pushpa2ThaRule #Pushpa2 # pic.twitter.com/TCa6wMxH03
— SIMHADRI NAIDU (@SIMHADRI_NAIDU_) December 13, 2024
SUMMARY | Hyderabad police have arrested Pushpa 2 actor Allu Arjun.
KEY WORDS |Hyderabad police have arrested Pushpa 2 actor Allu Arjun , Hyderabad police have arrested Allu Arjun