ಪುಷ್ಪಾ 2 ಸಿನಿಮಾ ನೋಡುವಾಗ ಪ್ರೇಕ್ಷಕರಿಗೆ ಕೆಮ್ಮು, ವಾಂತಿ | ನಿಗೂಢ ಸ್ಪ್ರೇ ಬಗ್ಗೆ ತನಿಖೆ ಆರಂಭಿಸಿದ ಮುಂಬೈ ಪೊಲೀಸ್

13

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 6, 2024 ‌ 

ಪುಷ್ಪಾ ಪಾರ್ಟ್‌ 2 ಸಿನಿಮಾದ ರೀಲಿಸ್‌ ಸಾಕಷ್ಟು ವಿವಾದಗಳನ್ನ ಮೈಮೇಲೆ ಎಳೆದುಕೊಳ್ಳುತ್ತಿದೆ. ಇನ್ನೊಂದೆಡೆ ಆಂಧ್ರಪ್ರದೇಶದಲ್ಲಿ ಸಿನಿಮಾ ಶೋ ವೇಳೆ ಕಾಲ್ತುಳಿತಕ್ಕೆ ಓರ್ವ ಮಹಿಳೆ ಸಾವನ್ನಪ್ಪಿದ ಘಟನೆ ಬೆನ್ನಲ್ಲೆ ಮುಂಬೈನಲ್ಲಿ ವಿಚಿತ್ರ ಘಟನೆಯೊಂದು ವರದಿಯಾಗಿದೆ

ಮುಂಬೈನ ಬಾಂಧ್ರಾದಲ್ಲಿರುವ ಗೆಲಾಕ್ಸಿ ಥಿಯೇಟರ್‌ನಲ್ಲಿ ಪುಷ್ಪಾ ಸಿನಿಮಾ ಇಂಟರ್‌ವೆಲ್‌ ಬಳಿಕ ಸಿನಿಪ್ರೇಕ್ಷರಿಗೆ ಕೆಮ್ಮು ಮತ್ತು ವಾಂತಿ ಶುರುವಾಗಿದೆ. ಅಲ್ಲದೆ ಎಲ್ಲರೂ ಕೆಮ್ಮುವುದನ್ನ ಗಮನಿಸಿದ ಥಿಯೇಟರ್‌ ನಿರ್ವಾಹಕರು ಸಿನಿಮಾ ಪ್ರದರ್ಶನವನ್ನು 10 ನಿಮಿಷ ನಿಲ್ಲಿಸಿದ್ದಾರೆ. ಇದ್ದಕ್ಕಿದ್ದ ಹಾಗೆ ಜನರ ಆರೋಗ್ಯ ಹದಗೆಡೋಕೆ ಕಾರಣ ಏನು ಎಂಬುದನ್ನ ಇದೀಗ ಮುಂಬೈ ನ ಪೊಲೀಸರು ತಲಾಶ್‌ ನಡೆಸ್ತಿದ್ದಾರೆ. 

ನಿನ್ನೆ ದಿನ ಪುಷ್ಪಾ ಸಿನಿಮಾ ಮದ್ಯಂತರದ ಬಳಿಕ ಥಿಯೇಟರ್‌ನಲ್ಲಿ ಯಾರೋ ಒಬ್ಬ ವ್ಯಕ್ತಿ ಸ್ಪ್ರೇ ಒಂದನ್ನ ಹೊಡೆದಿದ್ದಾನೆ. ಇದಾದ ಬಳಿಕ ಅಲ್ಲಿದ್ದ ಪ್ರೇಕ್ಷರಿಗೆ ಕೆಮ್ಮು ಹಾಗೂ ವಾಂತಿ ಶುರುವಾಗಿದೆ. ಹಲವರು ವಾಶ್‌ ರೂಮ್‌ಗೆ ತೆರಳಿ ವಾಂತಿ ಮಾಡಿದ್ದಾರೆ. ಇದನ್ನ ಗಮನಿಸಿದ ಥಿಯೇಟರ್‌ ನಿರ್ವಾಹಕರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಇದೀಗ ಘಟನೆ ಸಂಬಂಧ ಪೊಲೀಸರ ತನಿಖೆ ನಡೆಸ್ತಿದ್ದಾರೆ. 



SUMMARY | Mumbai Police are conducting an investigation , Galaxy theatre in Bandra following reports  Pushpa 2 The Rule

KEY WORDS | Mumbai Police are conducting an investigation , Galaxy theatre in Bandra following reports  Pushpa 2 The Rule

Share This Article