ಪಾರ್ಕಿಂಗ್‌ ತಡೆಗೆ ಯುವಕನ ವಿನೂತನ ಐಡಿಯಾ | ವಿಡಿಯೋ ವೈರಲ್‌

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 3, 2025

ದೇಶದಲ್ಲಿ ವಾಹನಗಳನ್ನು ಎಲ್ಲೆಂದರಲ್ಲಿ  ಪಾರ್ಕಿಂಗ್‌ ಮಾಡುವುದು ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಕೆಲವು ವಾಹನ ಸವಾರರು ಫುಟ್‌ಪಾತ್‌ ಮೇಲೆ ವಾಹನವನ್ನು ನಿಲ್ಲಿಸಿ ಪಾದಾಚಾರಿಗಳಿಗೆ ತೊಂದರೆ ನೀಡಿದರೆ, ಇನ್ನು ಕೆಲವರು ಇತರರ ಮನೆಗಳ ಮುಂದೆಯೇ ನಿಲ್ಲಿಸಿ ಮನೆಯವರು ಹೊರ ಬರದಂತೆ ಮಾಡುತ್ತಾರೆ. ಇಂತಹ ಅನೇಕ ಸಮಸ್ಯೆಗಳು ದಿನನಿತ್ಯ ಪ್ರಪಂಚದಲ್ಲಿ ನಡೆಯುತ್ತಲೇ ಇರುತ್ತದೆ. ಆದರೆ ಇಲ್ಲೊಬ್ಬ ಆಸ್ಟ್ರೇಲಿಯಾದ ಯುವಕ ಇತರರು ತನ್ನ ಮನೆ ಮುಂದೆ ವಾಹನ ನಿಲ್ಲಿಸುವುದನ್ನು ನೋಡಿ ನೋಡಿ ಬೇಸತ್ತು ಹೊಸದೊಂದು ಐಡಿಯಾ ಮಾಡಿದ್ದಾನೆ. ಈತನ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ಲಾಗಿದ್ದು, ಆತನ ಐಡಿಯಾಗೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

ಮನೆಯ ಮಾಲೀಕ ಮಾಡಿದ ಐಡಿಯಾವಾದರೂ ಏನು?

ಆಸ್ಟ್ರೇಲಿಯಾದ ಈ ಯುವಕನ ಮನೆಮುಂದೆ ಒಬ್ಬರಲ್ಲಾ ಒಬ್ಬರು ಅಪರಿಚಿತ ವಾಹನ ಸವಾರರು ಕಾರ್‌ ಸೇರಿದಂತೆ ಇನ್ನಿತರೆ ವಾಹನಗಳನ್ನು ಪಾರ್ಕ್‌ ಮಾಡುತ್ತಿದ್ದರು. ವಾಹನವನ್ನು ಪಾರ್ಕ್‌ ಮಾಡಬೇಡಿ ಎಂದು ಯುವಕ ಎಷ್ಟು ಬಾರಿ ಹೇಳಿದರು ಸಹ ವಾಹನ ಸವಾರರು ಅದಕ್ಕೆ ಕ್ಯಾರೇ ಎನ್ನುತ್ತಿರಲಿಲ್ಲ. ಇದರಿಂದ ಬೇಸತ್ತ ಯುವಕ ಬೇರೆಯವರು ವಾಹಲ ಪಾರ್ಕಿಂಗ್‌ ಮಾಡದಂತೆ ತಡೆಯಲು  ಮುಂದೆ ಮೋಷನ್-ಆಕ್ಟಿವೇಟೆಡ್ ಸ್ಪ್ರಿಂಕ್ಲರ್‌ಗಳನ್ನು ಅಳವಡಿಸಿದ್ದಾನೆ. ವಿಡಿಯೋದಲ್ಲಿರುವಂತೆ ಅಪರಿಚಿತರು ತಮ್ಮ ವಾಹನವನ್ನು ಪಾರ್ಕ್‌ ಮಾಡಿ ಹೊರಗಿಳಿಯುತ್ತಿದ್ದಂತೆ ಆ ಸ್ಪ್ರಿಂಕ್ಲರ್‌ಯಿಂದ ನೀರು ಹಾರಲು ಶುರುವಾಗಿ ಅವರು ಒದ್ದೆಯಾಗುತ್ತಾರೆ. ಕೂಡಲೇ ವಾಹನ ಸವಾರರು ವಾಹನದಿಂದ ಇಳಿಯುವ ಬದಲು ಡೋರ್ ಹಾಕಿಕೊಳ್ಳುವುದನ್ನು ಹಾಗೆಯೇ ಮೈ ಮೇಲೇ ನೀರು ಹಾರುತ್ತಿದ್ದಂತೆ ಅವರು ಗಾಬರಿಗೊಳ್ಳುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ವೀಡಿಯೋ ನೋಡಿದ ಅನೇಕರು ವ್ಯಕ್ತಿಯ ಈ ಕ್ರಿಯೇಟಿವ್ ಐಡಿಯಾಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.



SUMMARY | The youth has installed motion-activated sprinklers in front to prevent parking.

KEYWORDS | motion activated,  sprinklers,  avoid traffic, viral video,

Share This Article