SHIVAMOGGA | MALENADUTODAY NEWS | ಮಲೆನಾಡು ಟುಡೆ Nov 15, 2024
ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯ ನಡುವೆ ಶಿವಮೊಗ್ಗದಲ್ಲಿ ಹಲವರ ವರ್ಗಾವಣೆ ನಡೆಯುತ್ತಿದೆ. ಈ ಪ್ರಕ್ರಿಯೆ ತೀವ್ರ ಕುತೂಹಲ ಮೂಡಿಸುತ್ತಿದೆ. ಈ ನಡುವೆ ಶಿವಮೊಗ್ಗ ತಹಶೀಲ್ದಾರ್ ಗಿರೀಶ್‌ರವರನ್ನ ನಿನ್ನೆ ದಿಢೀರ್ ವರ್ಗಾವಣೆ ಮಾಡಲಾಗಿದೆ. ಅವರನ್ನ ಮೈಸೂರಿನ ಮೂಡಾ ತಹಶೀಲ್ದಾರ್ ಆಗಿ ವರ್ಗಾವಣೆ ಮಾಡಲಾಗಿದ್ದು ಅವರ ಸ್ಥಳಕ್ಕೆ ರಾಜೀವ್ ಎಂಬವರನ್ನ ನಿಯೋಜಿಸಲಾಗಿದೆ.
ತಹಶೀಲ್ದಾರ್ ಗಿರೀಶ್ ಸಹ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಈ ನಿಟ್ಟಿನಲ್ಲಿ ಗಿರೀಶ್‌ರವರ ವರ್ಗಾವಣೆಗೆ ರಾಜಕಾರಣ ಇದೆ ಎಂದು ಹೇಳಲಾಗುತ್ತಿದೆ.ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಶಿವಮೊಗ್ಗದ ಪವರ್ ಪಾಲಿಟಿಕ್ಸ್‌ನ ಪ್ರತಿಷ್ಟೆ ಕೆಲಸ ಮಾಡುತ್ತಿರುವುದು ಕಣ್ಣಿಗೆ ಕಾಣದೇ ಏನಿಲ್ಲ. ಅದರ ಮುಂದುವರಿದ ಭಾಗವೇ ಇದು ಎಂದು ನೌಕರರು ಮಾತನಾಡಿಕೊಳ್ಳುತ್ತಿದ್ದಾರೆ.
SUMMARY |Shivamogga Tahsildar Girish transferred
KEYWORDS | Shivamogga Tahsildar Girish transferred
