SHIVAMOGGA | MALENADUTODAY NEWS | ಮಲೆನಾಡು ಟುಡೆ Nov 15, 2024
ಅಪರಿಚಿತ ಶವವನ್ನು ತನ್ನ ಪತಿಯ ಶವ ಎಂದು ತಪ್ಪಾಗಿ ಭಾವಿಸಿದ ಘಟನೆಯೊಂದು ಚನ್ನರಾಯಪಟ್ಟಣದಲ್ಲಿ ನಡೆದಿದೆ. ಗಂಡನ ಶವವೆಂದು ಹಾರ ಹಾಕಿ ಕಣ್ಣೀರು ಹಾಕುತ್ತಿದ್ದ ವೇಳೆ ಸಂಬಂಧಿಕರಿಂದಲೇ ತನ್ನ ಪತಿ ಬದುಕಿದ್ದಾನೆ ಎಂಬ ವಿಚಾರ ಗೊತ್ತಾಗಿದೆ. ಆ ಬಳಿಕ ಶವವನ್ನ ಅಲ್ಲಿಯೇ ಬಿಟ್ಟು ಕುಟುಂಬಸ್ಥರು ತೆತಳಿದ್ದಾರೆ.
ಇಲ್ಲಿನ ಪಟ್ಟಣದ ಸಂತೆಮಳದಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿತ್ತು. ಆ ಬಗ್ಗೆ ಪೊಲೀಸರು ಗುರುತು ಪತ್ತೆಗಾಗಿ ಪ್ರಕಟಣೆ ನೀಡಿದ್ದರು. ಮಹಿಳೆಯೊಬ್ಬರು ಸುಳಿವು ಆಧರಿಸಿ ಇದು ತಮ್ಮ ಪತಿಯ ಶವ ಎಂದು ತಿಳಿದರು. ಬಳಿಕ ಶವವನ್ನ ನೋಡಲು ಹೊರಟು ಸಂಬಂಧಿಕರಿಗೆ ವಿಷಯ ತಿಳಿಸಿದ್ದಾರೆ. ಆ ಬಳಿಕ ಸಂಬಂಧಿಕರು ಎಲ್ಲರನ್ನೂ ಒಟ್ಟುಗೂಡಿಸಲು ಕರೆ ಮಾಡುತ್ತಿದ್ದಾಗ, ಮಹಿಳೆಯ ಪತಿಯ ನಂಬರ್‌ಗೂ ಅಪ್ಪಿತಪ್ಪಿ ಕರೆ ಹೋಗಿದೆ. ಆ ಕಡೆಯಿಂದ ಮಹಿಳೆಯ ಪತಿ ರಿಸೀವ್ ಮಾಡಿದ್ದಾರೆ. ಇದನ್ನ ಗಮನಿಸಿದ ಸಂಬಂಧಿಕರಿಗೆ ಶಾಕ್ ಆಗಿದೆ. ಮಹಿಳೆಯ ಪತಿ ಬದುಕಿರುವುದನ್ನ ಖಚಿತ ಪಡಿಸಿಕೊಂಡು ಸಂಬಂಧಿಕರು ಮಹಿಳೆಗೆ ವಿಚಾರ ತಿಳಿಸಿದ್ದಾರೆ. ಅಷ್ಟರಲ್ಲಿ ಅಪರಿಚಿತ ಶವಕ್ಕೆ ಹಾರ ಹಾಕಿ ಅಳುತ್ತಿದ್ದ ಮಹಿಳೆ ವಿಚಾರ ತಿಳಿದು ಅಲ್ಲಿಂದ ವಾಪಸ್ಸಾಗಿದ್ದಾರೆ
SUMMARY |Hassan: In a shocking incident, an unidentified body was wrongly identified as that of her husband in Channarayapattana
KEYWORDS | Hassan, Channarayapattana