SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 9, 2024
ಶಿವಮೊಗ್ಗ|10 ವರ್ಷದ ಬಾಲಕನೊಬ್ಬನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ ಭಾನುವಾರ ಸಂಜೆ ತೀರ್ಥಹಳ್ಳಿ ತಾಲೂಕಿನ ಗ್ರಾಮವೊಂದರಲ್ಲಿ ಸಂಭವಿಸಿದೆ.
ಇಲ್ಲಿನ ಗ್ರಾಮವೊಂದರಲ್ಲಿರುವ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಹತ್ತು ವರ್ಷದ ಬಾಲಕನಿಗೆ ಮನೆಯವರು ಯಾವುದೋ ಕಾರಣಕ್ಕಾಗಿ ಬೈದಿದ್ದರು ಎಂದು ಹೇಳಲಾಗುತ್ತಿದೆ . ಇದೇ ಕಾರಣಕ್ಕೆ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಆದಾಗ್ಯು ಈ ಬಗ್ಗೆ ಇನ್ನಷ್ಟೆ ಸ್ಪಷ್ಟ ಮಾಹಿತಿ ಲಭ್ಯವಾಗಬೇಕಿದೆ. ಘಟನೆ ಸಂಬಂಧ ಮಾಳೂರು ಠಾಣಾ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
SUMMARY | A 10-year-old boy committed suicide at in Theerthahalli taluk on Sunday evening.
KEYWORDS | committed suicide, Bejjavalli, 10 year old boy,