SHIVAMOGGA | MALENADUTODAY NEWS | ಮಲೆನಾಡು ಟುಡೆ Jan 31, 2025
ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ ಅಪರಾಧ ಹಾಗೂ ಇನ್ನಿತರ ವಿಚಾರಗಳ ಕುರಿತದಾ ದಿನದ ಒಟ್ಟಾರೆ ವರದಿಯ ಸಂಕ್ಷಿಪ್ತ ರಿಪೋರ್ಟ್ ಟುಡೆ ಟಾಪ್ ಫೈವ್ ವರದಿ. ಇವತ್ತಿನ ರಿಪೋರ್ಟ್ ಇಲ್ಲಿದೆ
ಸುದ್ದಿ 1 | ತನ್ನ ಗಂಡನನ್ನು ಬಿಟ್ಟು ಬಂದು ಶಿವಮೊಗ್ಗದಲ್ಲಿ ನೆಲಸಿದ್ದ ಮೈಸೂರು ಮೂಲದ ಮಹಿಳೆಯೊಬ್ಬರು, ಇನ್ನೊಬ್ಬಾತನಿಂದ ಮೋಸ ಹೋದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಲ್ಲಿನ ಬಡಾವಣೆಯೊಂದರ ನಿವಾಸಿ ತನ್ನ ಗಂಡನಿಂದ ದೂರವಾಗಿದ್ದರು. ಅಲ್ಲದೆ ಶಿವಮೊಗ್ಗಕ್ಕೆ ಬಂದು ದುಡಿದು ಜೀವನ ಸಾಗಿಸ್ತಿದ್ದರು.ಈ ನಡುವೆ ವ್ಯಕ್ತಿಯೊಬ್ಬ ಮಹಿಳೆಗೆ ಪರಿಚಯವಾಗಿ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದನಂತೆ. ಇದರಿಂದ ಬೇಸತ್ತು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸುದ್ದಿ 2 | ಶಿವಮೊಗ್ಗ ಕೋರ್ಟ್‌ನಲ್ಲಿ ಪ್ರಕರಣವೊಂದಕ್ಕೆ ಜಾಮೀನು ಕೊಟ್ಟ ಆರೋಪಿಯೇ ನಕಲಿ ಎಂಬ ಅಂಶ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಕೇಸ್‌ವೊಂದರ ವಿಚಾರಣೆ ವೇಳೆ ಆರೋಪಿ ಹಾಜರಾಗದ ಹಿನ್ನೆಲೆ ಜಾಮೀನುದಾರನಿಗೆ ನೋಟಿಸ್ ಜಾರಿ ಮಾಡಿ ಕರೆಸಿದ ಸಂದರ್ಭದಲ್ಲಿ ಈ ವಿಚಾರ ಹೊರಬಂದಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿದೆ. ಹೊಳಲ್ಕೆರೆ ವ್ಯಕ್ತಿಯೊಬ್ಬನನ್ನು ಕೋರ್ಟ್‌ಗೆ ಕರೆಸಲಾಗಿತ್ತು. ಅವರು ಶಿವಮೊಗ್ಗ ಕೋರ್ಟ್‌ಗೆ ಹಾಜರಾಗಿ, ತಾವು ಯಾರಿಗೂ ಜಾಮೀನು ನೀಡಿಲ್ಲ, ಅದರಲ್ಲಿರುವ ಫೋಟೋ ತಮ್ಮದಲ್ಲ ಎಂದಿದ್ದಾರೆ. ಹೀಗಾಗಿ ಈ ಸಂ ಬಂಧ ಜಯನಗರ ಪೊಲೀಸ್ ಠಾಣೆ ಪೊಲೀಸರು ಕೇಸ್ ದಾಖಲಿಸಿದ್ದಾರೆ.
ಸುದ್ದಿ 3 | ಶಿವಮೊಗ್ಗದಲ್ಲಿ ಕಾರಿನ ಗ್ಲಾಸ್ ಒಡೆದು ಅದರಲ್ಲಿರುವ ಹಣ ಕದಿಯುವ ಮತ್ತೊಂದು ಕೃತ್ಯ ಬೆಳಕಿಗೆ ಬಂದಿದೆ. ಶಿವಮೊಗ್ಗ ಬಿಹಚ್ ರಸ್ತೆಯಲ್ಲಿಯೇ ಈ ಘಟನೆ ನಡೆದಿದೆ. ಕೋಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕೇಸ್‌ನ್ನ ಗಮನಿಸುವುದಾದರೆ, ಶಿವಮೊಗ್ಗ ಬಿಹೆಚ್ ರೋಡ್‌ನಲ್ಲಿ ಕರ್ನಾಟಕ ಸಂಘದ ಬಳಿ ಕಾರು ನಿಲ್ಲಿಸಿ ವ್ಯಕ್ತಿಯೊಬ್ಬರು ಗಾಂಧಿ ಬಜಾರ್‌ನಲ್ಲಿ ತರಕಾರಿ ತರಲು ಹೋಗಿದ್ದರು. ಈ ವೇಳೆ ಕಾರಿನ ಹಿಂಬದಿ ಗ್ಲಾಸ್‌ನ್ನು ಒಡೆದ ಖದೀಮರು ಅದರಲ್ಲಿದ್ದ ಬ್ಯಾಗ್ ಕದ್ದು ಪರಾರಿಯಾಗಿದ್ದಾರೆ.
ಸುದ್ದಿ 4 | ಶಿವಮೊಗ್ಗ ಸೀನಪ್ಪಶೆಟ್ಟಿ ಸರ್ಕಲ್ ಬಳಿ ಇರುವ ಎಂಜಿ ಪ್ಯಾಲೇಸ್ ಮಾಲೀಕ ಹಿರಿಯ ಉದ್ಯಮಿ ಗಣೇಶ್ ವಾಸುದೇವ್ ಶೇಠ್ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ನಿನ್ನೆ ಸಂಜೆ ಅವರು ವಯೋಸಹಜ ಅನಾರೋಗ್ಯ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ. ರವೀಂದ್ರನಗರ 6ನೇ ಅಡ್ಡರಸ್ತೆಯಲ್ಲಿ ವಾಸವಿದ್ದ ಉದ್ಯಮಿ ಗಣೇಶ್ ವಾಸುದೇವ್ ಶೇಠ್ ಸಾವಿಗೆ ಹಲವರು ಕಂಬನಿ ಮಿಡಿದಿದ್ದಾರೆ.
ಸುದ್ದಿ 5 | ಫಲಕ್ ಪ್ಯಾಲೇಸ್‌ನಲ್ಲಿ ಸಂಬಂಧಿ ಮದುವೆಗೆ ಹೋಗಿದ್ದ ಮಹಿಳೆಯೊಬ್ಬರ ಸೂಟ್‌ಕೇಸ್‌ನಲ್ಲಿದ್ದ 4.70 ಲಕ್ಷ ರೂಪಾಯಿ ಮೌಲ್ಯದ ಬಂಗಾರ ಕಳ್ಳತನವಾಗಿದೆ. ಎನ್‌ಟಿ ರೋಡ್‌ನಲ್ಲಿರುವ ಫಲಕ್ ಪ್ಯಾಲೆಸ್‌ನಲ್ಲಿ ಮದುವೆ ನಿಶ್ಚಯವಾಗಿತ್ತು. ಅಲ್ಲಿಗೆ ತೆರಳಿದ್ದ ಉದ್ಯಮಿ ನವಾಜ್ ಎಂಬವರ ಕುಟುಂಬ ಡ್ರೆಸಿಂಗ್ ರೂಂನಲ್ಲಿ ತಮ್ಮ ಸೂಟ್‌ಕೇಸ್ ಇಟ್ಟು ಮದುವೆಯಲ್ಲಿ ಪಾಲ್ಗೊಂಡಿತ್ತು. ಈ ನಡುವೆ ವಾಪಸ್ ಬಂದು ಸೂಟ್‌ಕೇಸ್ ಗಮನಿಸಿದಾಗ ಅದರ ಲಾಕ್ ಓಪನ್ ಆಗಿರುವುದು ಗೊತ್ತಾಗಿದೆ. ಪರಿಶೀಲಿಸಿದಾಗ ಅದರಲ್ಲಿದ್ದ ಬಂಗಾರ ಕಳ್ಳತನವಾಗಿರುವುದು ಗೊತ್ತಾಗಿದೆ.
SUMMARY | shivamogga news today
KEY WORDS | shivamogga news today