SHIVAMOGGA | MALENADUTODAY NEWS | ಮಲೆನಾಡು ಟುಡೆ Jan 17, 2025
ಶಿವಮೊಗ್ಗದ ಪಿಇಎಸ್ ಟ್ರಸ್ಟ್ನ ಅನ್ವೇಷಣಾ ಇನೊವೇಷನ್ ಆ್ಯಂಡ್ ಎಂಟರ್ಪ್ರಿನ್ಯೂರಲ್ ಫೋರಮ್ನಿಂದ ಮಲೆನಾಡು ಸ್ಟಾರ್ಟ್ಅಪ್ ಸಮ್ಮೇಳನ–2025 ಕಾರ್ಯಕ್ರಮವನ್ನು ಜನವರಿ 18ರಂದು ಆಯೋಜಿಸಲಾಗಿದೆ ಅಂತಾ ಈ ಟ್ರಸ್ಟ್ನ ಮುಖ್ಯ ಆಡಳಿತ ಸಂಯೋಜನಾಧಿಕಾರಿ ಆರ್. ನಾಗರಾಜ ತಿಳಿಸಿದ್ದಾರೆ. ನಾಳೆ ಬೆಳಿಗ್ಗೆ 9.30ಕ್ಕೆ ಪಿಇಎಸ್ ಕ್ಯಾಂಪಸ್ ಆವರಣದ ಪ್ರೇರಣಾ ಸಭಾಂಗಣದಲ್ಲಿ ನಡೆಯುವ ಸಮ್ಮೇಳನವನ್ನು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಉದ್ಘಾಟಿಸಲಿದ್ದಾರೆ. ಅಲ್ಲದೆ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸಮಾರಂಭದದಲ್ಲಿ ಭಾಗವಹಿಸಲಿದ್ದಾರೆ. ಸಂಸದ ಬಿ.ವೈ. ರಾಘವೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಕಾರ್ಯಕ್ರಮದ ಮಾಹಿತಿಯನ್ನು ವಿವರಿಸಿದ್ದಾರೆ.
ಸಮ್ಮೇಳನದಲ್ಲಿ 1,500ಕ್ಕೂ ಅಧಿಕ ಆಸಕ್ತರು ಭಾಗವಹಿಸುವರು. 250ಕ್ಕೂ ಹೆಚ್ಚು ಸ್ಟಾರ್ಟ್ಅಪ್ ಆಕಾಂಕ್ಷಿಗಳು ಹಾಗೂ ರೈತ ಉತ್ಪಾದಕ ಸಂಸ್ಥೆಗಳ 400ಕ್ಕೂ ಅಧಿಕ ಸದಸ್ಯರು ಮತ್ತು ರೈತರು ಪಾಲ್ಗೊಳ್ಳುವರು. 25ಕ್ಕೂ ಹೆಚ್ಚು ಆಯ್ದ ಸ್ಟಾರ್ಟ್ಅಪ್ಗಳು ತಮ್ಮ ವಿಶೇಷ ತಂತ್ರಜ್ಞಾನ ಪ್ರದರ್ಶಿಸಲಿವೆ. 30ಕ್ಕೂ ಅಧಿಕ ನುರಿತ ತಜ್ಞರು ಭಾಗವಹಿಸಲಿದ್ದಾರೆ ಈ ಸಮ್ಮೇಳನದಲ್ಲಿ ಅನ್ವೇಷಣಾ ಇನ್ಕ್ಯುಬೇಷನ್ ಪ್ರೋಗ್ರಾಂನ ಮೊದಲ ಹಂತದಲ್ಲಿ ಅಭಿವೃದ್ಧಿಗೊಂಡ 10 ನವೋದ್ಯಮಗಳು ಹೊರ ಹೊಮ್ಮಲಿವೆ. 2ನೇ ಹಂತದಲ್ಲಿ 20 ನವೋದ್ಯಮಗಳು ಅನ್ವೇಷಣಾದಿಂದ ಮಾರ್ಗದರ್ಶನ ಪಡೆಯಲು ಸಜ್ಜಾಗಿವೆ ಸಮ್ಮೇಳನದಲ್ಲಿ ಹಲವು ವಿಷಯಗಳು ವಿನಿಮಯವಾಗಲಿವೆ ಎಂದು ತಿಳಿಸಿದರು.
SUMMARY | The Malenadu Startup Conference-2025 program has been organized by the Exploration Innovation and Entrepreneurial Forum of PES Trust, Shimoga on January 18.

KEY WORDS | Malenadu Startup Conference-2025, Exploration Innovation and Entrepreneurial Forum of PES Trust, shivamogga ,