ನಾಳೆ ಶಿವಮೊಗ್ಗಕ್ಕೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ | ಟೂರ್‌ ಪ್ಲಾನ್‌ ಹೀಗಿದೆ

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 10, 2025 ‌‌ 

ಶಿವಮೊಗ್ಗ | ನಾಳೆ ಅಂದರೆ ಫೆಬ್ರವರಿ 11 ನೇ ತಾರೀಖು ಮಂಗಳವಾರ ಶಿವಮೊಗ್ಗ ಜಿಲ್ಲೆಗೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪರವರು ಪ್ರವಾಸ ಕೈಗೊಳ್ಳಲಿದ್ದಾರೆ.  ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ಆದ ಅವರ ಪ್ರವಾಸದ ವಿವರವನ್ನು ಬಿಡುಗಡೆ ಮಾಡಲಾಗಿದೆ. 

ಉಸ್ತುವಾರಿ ಸಚಿವ ಮಧು ಬಂಗಾರಪ್ಪ 

ನಾಳೆ ಬೆಳಗ್ಗೆ ಏಳು ಗಂಟೆ ಬೆಂಗಳೂರಿನಿಂದ ಹೊರಡುವ ಸಚಿವ ಮಧು ಬಂಗಾರಪ್ಪ ಮಧ್ಯಾಹ್ನ 1.30 ರ ಸುಮಾರಿಗೆ ಬೈ ರೋಡ್‌ ಶಿವಮೊಗ್ಗ  ಜಿಲ್ಲೆ ಸೊರಬ ತಾಲ್ಲೂಕು ಹುಲ್ತಿಕೊಪ್ಪಕ್ಕೆ ಬರಲಿದ್ದಾರೆ. ಅಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಅವರು ಆನಂತರ ಸಂಚೆ ಆರು ಗಂಟೆ ಹೊತ್ತಿಗೆ ಜಡೆ ಸಂಸ್ಥಾನ ಮಠದ ಆವರಣೆಲ್ಲಿ ನಡೆಯಲಿರುವ ಶ್ರೀ ಸಿದ್ಧವೃಷಬೇಂದ್ರ ಮಹಾ ಶಿವಯೋಗಿಗಳವರ ಜಾತ್ರಾ ಮಹೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. 

SUMMARY  | shivamogga incharge minister madhu bangarappa tour plan

KEY WORDS | shivamogga incharge minister, madhu bangarappa tour plan

Share This Article