SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 31, 2024
ತೀರ್ಥಹಳ್ಳಿ |ತಾಲೂಕಿನ ಕೂಡಿಗೆ ಗ್ರಾಮದಲ್ಲಿ ನಿನ್ನೆ ಎಳ್ಳಾಮಾಸ್ಯೆ ಪ್ರಯುಕ್ತ ನಡೆದ ಗುಮ್ಮನಮಕ್ಕಿ ಜಾತ್ರಾಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಐದೂರಿನ ದೇವತೆಗಳ ಪಲ್ಲಕ್ಕಿ ಉತ್ಸವ ಈ ಜಾತ್ರೆಯ ಪ್ರಮುಖ ಕೇಂದ್ರಬಿಂದುವಾಗಿತ್ತು. ಎಂದಿನಂತೆ ಈ ಬಾರಿಯೂ ಸಹ ಈ ಜಾತ್ರೆ ಸುತ್ತ ಮುತ್ತ ಊರಿನ 5 ದೇವತೆಗಳ ಸಮಾಗಮಕ್ಕೆ ಸಾಕ್ಷಿಯಾಯಿತು. ಜಾತ್ರೆಯಲ್ಲಿ ದೇವತೆಗಳ ಪಲ್ಲಕ್ಕಿ ಉತ್ಸವವನ್ನು ನೋಡಲೆಂದೇ ಸಾವಿರಾರು ಜನ ಭಕ್ತರು ನಾನಾ ಕಡೆಗಳಿಂದ ಆಗಮಿಸಿದ್ದರು.
ಮೊದಲು ಜಾತ್ರಾಸ್ಥಳದಲ್ಲಿ ಸುತ್ತ ಮುತ್ತಲಿನ ಐದು ಊರಿನ ದೇವತೆಗಳಾದ ಮಾಳೂರು ಸೀಮೆ ಗುತ್ಯಮ್ಮ ಎಡೆಹಳ್ಳಿ, ಸೋಮವಾರ ಸಂತೆ ಗುತ್ಯಮ್ಮ ಹೊಸಳ್ಳಿ, ಶ್ರೀ ಗಾಳಿಮಾರಿ ಅಮ್ಮನವರು ಮಾಳೂರು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರು ಸಮಕಾನಿ ಹಾಗೂ ರಂಜದ ಕಟ್ಟೆ ಅಮ್ಮನವರು ಸೇರಿದರು. ನಂತರ ಶಕ್ತಿ ದೇವತೆಗಳಿಗೆ ಪೂಜಾ ಕಾರ್ಯನೆರವೇರಿತು. ಸಾವಿರಾರು ಭಕ್ತರು ದೇವತೆಗಳಿಗೆ ಹಣ್ಣು ಕಾಯಿ ಸಮರ್ಪಿಸಿ ದೇವರ ಕೃಪೆಗೆ ಪಾತ್ರರಾದರು. ನಂತರ ದೇವತೆಗಳ ಪಲ್ಲಕ್ಕಿ ಉತ್ಸವ ಪ್ರಾರಂಭವಾಯಿತು. ಆ ಸಂದರ್ಭದಲ್ಲಿ ದೇವತೆಗಳ ಪಲ್ಲಕ್ಕಿ ಉತ್ಸವವನ್ನು ನೋಡಲು ನೂಕು ನುಗ್ಗುಲು ಉಂಟಾಯಿತು. ವಾಲಗ ತಮಟೆ ಸದ್ದಿಗೆ ದೇವರನ್ನ ಹೊತ್ತ ಪಲ್ಲಕ್ಕಿ ಕುಣಿಯುವ ವೈಭವವನ್ನು ನೋಡಲು ಕಣ್ಣುಗಳೆರಡು ಸಾಲದು. ಆ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದ ಭಕ್ತರಿಗೆ ರೋಮಾಂಚನವಾಗಿದ್ದಂತು ಸತ್ಯ.

ಗುಮ್ಮನಮಕ್ಕಿ ಜಾತ್ರಾ ಮಹೋತ್ಸವ pic.twitter.com/iltxF7PAdx
— Prathap Prathap shetty (@Prathap68840568) December 31, 2024
ವಿಜೃಂಭಣೆಯಿಂದ ನಡೆದ ಹೆದ್ದೂರು ತೆಪ್ಪೋತ್ಸವ
ತೀರ್ಥಹಳ್ಳಿ ತೆಪ್ಪೋತ್ಸವದಂತೆ ಇಲ್ಲಿಯೂ ಸಹ ಹೆದ್ದೂರು ತೆಪ್ಪೋತ್ಸವ ಬಹಳಾ ವಿಜೃಂಭಣೆಯಿಂದ ನಡೆಯಿತು. ಸುಮಾರು ರಾತ್ರಿ 8 ಗಂಟೆಗೆ ಆರಂಭವಾದ ಈ ತೆಪ್ಪೋತ್ಸವದಲ್ಲಿ ಸೋಮವಾರ ಸಂತೆ ಹೊಸಳ್ಳಿ ಗುತ್ಯಮ್ಮರನ್ನು ವಿದ್ಯುತ್ ದೀಪಾಲಂಕಾರ ಹಾಗೂ ಹೂವುಗಳಿಂದ ಸಿಂಗರಿಸಲಾದ ತೆಪ್ಪದಲ್ಲಿ ಕೂರಿಸಿ ತುಂಗ ನದಿಯನ್ನು ದಾಟಿಸಲಾಯಿತು. ಈ ವೇಳೆ ಹೆದ್ದೂರು ಸೇತುವೆಯನ್ನು ಸಹ ಬಹಳಾ ಚಂದದ ರೀತಿಯಲ್ಲಿ ಸಿಂಗರಿಸಲಾಗಿತ್ತು. ಆ ವೇಳೆ ಬಾನೆತ್ತರಕ್ಕೆ ಪಟಾಕಿಗಳನ್ನು ಸಿಡಿಸಲಾಯಿತು. ಆ ಸೇತುವೆಯ ಅಲಂಕಾರ ಇತ್ತ ಪಟಾಕಿ ಸಿಡಿಯುವ ದೃಶ್ಯ ನೋಡುಗರಿಗೆ ರೋಮಾಂಚನವನ್ನೂಂಟು ಮಾಡಿತು. ರಾತ್ರಿ 10 ಗಂಟೆಯವರೆಗೆ ನಡೆದಿದ್ದ ಈ ತೆಪ್ಪೋತ್ಸವ ನೋಡಲು ಸರಿಸುಮಾರು 10 ಸಾವಿರ ಜನ ಸೇರಿದ್ದರು.
ಗುಮ್ಮನಮಕ್ಕಿ ಜಾತ್ರೆ ತೆಪ್ಪೋತ್ಸವ pic.twitter.com/UxkEdEoJav
— Prathap Prathap shetty (@Prathap68840568) December 31, 2024
SUMMARY | Gummanamakki Jatra Mahotsava, which was held at Kudige village in Theerthahalli taluk yesterday on the occasion of Ellamasya, was held with great pomp and show.
KEYWORDS | Gummanamakki Jatra Mahotsava, Theerthahalli, Ellamasya,