SHIVAMOGGA | MALENADUTODAY NEWS | ಮಲೆನಾಡು ಟುಡೆ Nov 16, 2024
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಆನಂದಪುರ ಸಮೀಪದ ಯಡೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೇರುಬಿಸು ಗ್ರಾಮದಲ್ಲಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮದ ರಾಮಚಂದ್ರ (48) ಆತ್ಮಹತ್ಯೆ ಮಾಡಿಕೊಂಡವರು. ಜೀವನ ಹಾಗೂ ಕೃಷಿ ನಿವರ್ಹಣೆಗಾಗಿ ಸಾಲ ಮಾಡಿಕೊಂಡಿದ್ದ ಇವರು ಅದನ್ನು ತೀರಿಸಲಾಗದೆ ಮನೆ ಹಿಂಬಾಗದಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.
ಅಪ್ರಾಪ್ತೆಗೆ ಜನಿಸಿದ ಮಗುವನ್ನ ಅವರ ತಂದೆ ತಾಯಿ ಕೊಲೆ ಮಾಡಿದ ಆರೋಪವೊಂದು ಕೊಡಗು ಜಿಲ್ಲೆಯಲ್ಲಿ ಕೇಳಿಬಂದಿದೆ. ಅಲ್ಲಿನ ತಾಲ್ಲೂಕು ಒಂದರಲ್ಲಿ ಈ ಘಟನೆ ನಡೆದಿದೆ. ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಕೇಸ್‌ವೊಂದರಲ್ಲಿ ಅಪ್ರಾಪ್ತನ ವಿರುದ್ಧ ಕೇಸ್ ಆಗಿತ್ತು. ಈ ವೇಳೆ ಅಪ್ರಾಪ್ತೆ ಗರ್ಭೀಣಿಯಾಗಿದ್ದರು.ಈ ಬಗ್ಗೆ ವೈದ್ಯರು ಹೇಳಿಕೆ ನೀಡಿದ್ದರೂ ಸಹ ಅಪ್ರಾಪ್ತೆಯ ಪೋಷಕರು ಇದನ್ನ ಅಲ್ಲಗಳೆದಿದ್ದರು. ಆನಂತರ ಆರೋಗ್ಯ ಇಲಾಖೆಯಿಂದ ಈ ಸಂಬಂಧ ದೂರು ದಾಖಲಾಗಿತ್ತು. ಪೊಲೀಸರ ತನಿಖೆ ವೇಳೆ ಪೋಷಕರು ಅಪ್ರಾಪ್ತೆಗೆ ಹೆರಿಗೆ ಆದ ಬಳಿಕ ಮಗುವನ್ನು ಕೊಂದು ಹಾಕಿರುವುದು ಗೊತ್ತಾಗಿದೆ. ಇದೀಗ ಕೇಸ್ ದಾಖಲಿಸಿ ಪೋಷಕರನ್ನ ಬಂಧಿಸಿದ್ದಾರೆ.
ತಂದೆಯಿಂದ ಮಗುವನ್ನ ರಕ್ಷಿಸಿದ ಹೆಬ್ಬಾಳ್ಕರ್
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಪ್ರಾಪ್ತೆಯೊಬ್ಬರನ್ನು ಆಕೆಯ ತಂದೆಯಿಂದ ರಕ್ಷಣೆ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅಪ್ರಾಪ್ತೆಯೊಬ್ಬರು ಸಚಿವೆಯ ಬಳಿ ತನ್ನ ಸಂಕಷ್ಟ ಹೇಳಿಕೊಂಡಿದ್ದರು. ಈ ಬಗ್ಗೆ ಆಕೆಯ ಅಜ್ಜಿಯನ್ನ ವಿಚಾರಿಸಿದ ಸಚಿವೆಗೆ ಪರಿಸ್ಥಿತಿಯ ಅರಿವಾಗಿತ್ತು. ಮದ್ಯವ್ಯಸನಿಯಾಗಿದ್ದ ತಂದೆ ಹಿಂಸೆ ನೀಡುತ್ತಿರುವ ಬಗ್ಗೆ ಅಪ್ರಾಪ್ತೆ ಸಚಿವೆ ಬಳಿ ನೋವು ಹೇಳಿಕೊಂಡಿದ್ದು ಹಾಸ್ಟೆಲ್‌ವೊಂದರಲ್ಲಿ ಆಶ್ರಯ ನೀಡುವಂತೆ ಕೇಳಿಕೊಂಡಿದ್ದಳು. ಈ ಬಗ್ಗೆ ಮಾಹಿತಿ ಪಡೆದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹಿಳಾ ಮತ್ತು ಮಕ್ಕಳ ಇಲಾಖೆ, ಮಕ್ಕಳ ರಕ್ಷಣಾಲಯದ ಮೂಲಕ ಅಪ್ರಾಪ್ತೆಯನ್ನ ರಕ್ಷಣೆ ಮಾಡಿದ್ದಾರೆ. ಅಲ್ಲದೆ ಆಕೆಯ ಶಿಕ್ಷಣಕ್ಕೆ ನೆರವು ನೀಡಿದ್ದಾರಷ್ಟೆ ಅಲ್ಲದೆ ಆಕೆಗೆ ಯಾವೊಂದು ಸಮಸ್ಯೆ ಬಾರದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
SUMMARY| Kodagu District, Shivamogga District, Sagar Taluk, Anandapura, Belagavi, Minister Lakshmi Hebbalkar


KEY WORDS | Kodagu District, Shivamogga District, Sagar Taluk, Anandapura, Belagavi, Minister Lakshmi Hebbalkar