ದುಬೈ ಗೋಲ್ಡ್‌‌ ಹೀರೋಯಿನ್ ರನ್ಯಾರಾವ್‌ ಯಾರು? ಚಿಕ್ಕಮಗಳೂರು ಕಾಫಿ ಎಸ್ಟೇಟ್‌, ಬೆಂಗಳೂರು ಪ್ಲ್ಯಾಟ್‌, ಡಿಜಿಪಿ & ಚಿನ್ನ ಬಿಸ್ಕತ್‌ ಕಥೆ

13

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 5, 2025 ‌‌ ‌

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ನಟಿ ರನ್ಯಾರಾವ್‌ ಯಾರು? ಆಕೆಯ ಹಿನ್ನೆಲೆ ಏನು? ಆಕೆಯ ಮನೆಯಲ್ಲಿ ಸಿಕ್ಕ ಚಿನ್ನವೆಷ್ಟು ಗೊತ್ತಾ? ಅದರ ಬಗೆಗಿನ ಒಂದಷ್ಟು ಮಾಹಿತಿಯನ್ನು ಗಮನಿಸುವುದಾದರೆ, 

ನಟಿ ರನ್ಯಾರಾವ್‌ ನಟ ಸುದೀಪ್‌ ಹಾಗೂ ಗಣೇಶ್‌ ಜೊತೆಗೆ ನಟಿಸಿದ ನಟಿ. ಈಕೆಯ ತಾಯಿ ಚಿಕ್ಕಮಗಳೂರನವರು, ತಂದೆ ಕರ್ನಾಟಕ ಕೆಡರ್‌ನ ಆಫಿಸರ್‌ ಡಿಜಿಪಿ ಕೆ ರಾಮಚಂದ್ರ ರಾವ್‌. 

ಮೂರು ತಿಂಗಳ ಹಿಂದಷ್ಟೇ ಇವರ ವಿವಾಹವಾಗಿತ್ತು. ರಾಜಕಾರಣದ ಕುಟುಂಬದ ವ್ಯಕ್ತಿಯೊಬ್ಬರನ್ನು ರನ್ಯಾ ಮದುವೆಯಾಗಿದ್ದರು.ಆ ಬಳಿಕ ಸದ್ಯ ಅಧಿಕಾರಿಗಳು ರೇಡ್‌ ಮಾಡಿರುವ ಪ್ಲಾಟ್‌ನಲ್ಲಿ ವಾಸವಿದ್ದರು. 

ನಡೆದಿದ್ದೇನು?

ರನ್ಯಾರವಾವ್‌ರನ್ನು ದುಬೈನಿಂದ ಚಿನ್ನ ಕಳ್ಳ ಸಾಗಣೆ ಮಾಡುತ್ತಿದ್ದ ಆರೋಪದಡಿ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಬಂಧಿಸಿದ್ದಾರೆ ಅಲ್ಲದೆ ನಟಿಗೆ ಸೇರಿರುವ ಲ್ಯಾವೆಲ್ಲೆ ರಸ್ತೆಯ ನಂದವಾಣಿ ಮ್ಯಾನ್ಶನ್​ ಫ್ಲ್ಯಾಟ್‌ ಮೇಲೆ ದಾಳಿ ನಡೆಸಿ ಚಿನ್ನವನ್ನು ಜಪ್ತಿ ಮಾಡಿದ್ದಾರೆ.

ರನ್ಯಾ ರಾವ್ ರವರ ಸಮ್ಮುಖದಲ್ಲಿಯೇ, ಅವರ ಪ್ಲಾಟ್‌ ಮೇಲೆ ರೇಡ್‌ ಮಾಡಿದ್ದ ಅಧಿಕಾರಿಗಳು  ತಪಾಸಣೆ ನಡೆಸಿದರು. 

ಪರಿಶೀಲನೆ ವೇಳೆ ₹2.06 ಕೋಟಿ ಮೌಲ್ಯದ ಚಿನ್ನದ ಬಿಸ್ಕತ್‌ಗಳು ಹಾಗೂ ₹2.67 ಕೋಟಿ ನಗದು ಪತ್ತೆಯಾಗಿವೆ. 

ಇದಕ್ಕೂ ಮೊದಲು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 14 ಚಿನ್ನದ ಬಿಸ್ಕತ್‌ ನಟಿಯ ಬಳಿಯಲ್ಲಿ ಪತ್ತೆಯಾಗಿತ್ತು. ಒಟ್ಟಾರೆ ₹17.29 ಕೋಟಿ ಮೌಲ್ಯದ ಚಿನ್ನ ಮತ್ತು ಕ್ಯಾಶ್‌ ಸೀಜ್‌ ಆಗಿದೆ. 

ಆರೋಪಿಯ ವಿರುದ್ಧ 1962ರ ಕಸ್ಟಮ್ಸ್‌ ಕಾಯ್ದೆ ಅಡಿಯಲ್ಲಿ ಕೇಸ್‌ ದಾಖಲಾಗಿದ್ದು, ಮತ್ತೊಮ್ಮೆ ಬಾಡಿ ವಾರಂಟ್‌ ಮೂಲಕ ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆ ಇದೆ. 

ಚಿನ್ನದ ಮೂಲ

ರನ್ಯಾರಾವ್‌ ಕಮಿಷನ್‌ ಆಸೆಗೆ ದುಬೈನಿಂದ ಚಿನ್ನ ಸಾಗಿಸಿ ಬೆಂಗಳೂರಿನಲ್ಲಿ ವರ್ಗಾವಣೆ ಮಾಡುತ್ತಿದ್ದರು ಎಂಬ ಅನುಮಾನ ಅಧಿಕಾರಿಗಳದ್ದಾಗಿದೆ.

ಈಕೆ ದುಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಬಳಿಕ, ಈಕೆ ಪ್ರಯಾಣಿಸುತ್ತಿದ್ದ ವಿಮಾನದ ಟಾಯ್ಲೆಟ್‌ನಲ್ಲಿ ಚಿನ್ನವನ್ನು ಇಡಲಾಗುತ್ತಿತ್ತು. ಪ್ಲೈಟ್‌ ಏರಿದ ಬಳಿಕ ರನ್ಯಾರಾವ್‌ ಟಾಯ್ಲೆಟ್‌ಗೆ ತೆರಳಿ ಅಲ್ಲಿರುವ ಚಿನ್ನವನ್ನು ತಮ್ಮ ಜೊತೆಗೆ ಸಾಗಿಸುತ್ತಿದ್ದರು.

ಬೆಲ್ಟ್‌ನಂತೆ ಟೇಪ್‌ನಲ್ಲಿ ಚಿನ್ನವನ್ನು ಸುತ್ತಿಕೊಂಡು ಬೆಂಗಳೂರಿಗೆ ತರುತ್ತಿದ್ದರು ನಟಿ ರನ್ಯಾರಾವ್

ಬೆಂಗಳೂರು ಏರ್‌ಫೋರ್ಟ್‌ಗೆ ಬಂದ ತಕ್ಷಣ, ಈಕೆಯ ಭದ್ರತಾ ಸಿಬ್ಬಂದಿಗಳು ರನ್ಯಾರಾವ್‌ ಡಿಜಿಪಿ ಮಗಳು ಎಂದು ಹೇಳಿ ತಪಾಸಣೆಯಿಲ್ಲದೆ ಏರ್‌ಫೋರ್ಟ್‌ನಿಂದ ಹೊರಕ್ಕೆ ಕರೆದೊಯ್ಯುತ್ತಿದ್ದರು

ಈ ನಡುವೆ ರನ್ಯಾರಾವ್‌ನ ವಿದೇಶಿ ಪ್ರಯಾಣದ ಬಗ್ಗೆ ಅನುಮಾನಗೊಂಡ ಅಧಿಕಾರಿಗಳು ಏರ್‌ಪೋರ್ಟ್‌ನಲ್ಲಿಯೇ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಚಿನ್ನದ ಬಿಸ್ಕತ್‌ಗಳನ್ನು ಜಪ್ತಿ ಮಾಡಿದ್ದಾರೆ.

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಇತಿಹಾಸದಲ್ಲಿ ಒಂದೇ ಪ್ರಕರಣದಲ್ಲಿ ಇಷ್ಟೊಂದು ಪ್ರಮಾಣದ ಚಿನ್ನವನ್ನು ಮೊದಲ ಬಾರಿಗೆ ಜಪ್ತಿ ಮಾಡಿಕೊಳ್ಳಲಾಗಿದೆ  

ಈ ನಡುವೆ ರನ್ಯಾರಾವ್‌ರವರ ಪ್ರಕರಣ ಜಾರಿ ನಿರ್ದೇಶನಾಲಯಕ್ಕೆ ವರ್ಗಾವಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ 

ರನ್ಯಾರಾವ್‌ ತಂದೆ ಯಾರು?

ರನ್ಯಾರಾವ್‌ ಹೇಳಿಕೊಂಡಿರುವ ಪ್ರಕಾರ, ಇವರು ಡಿಜಿಪಿ ಕೆ ರಾಮಚಂದ್ರ ರಾವ್‌ರವರ ಮಲಮಗಳು. ಚಿಕ್ಕಮಗಳೂರುನಲ್ಲಿ ಕಾಪಿ ಎಸ್ಟೇಟ್‌ ಹೊಂದಿರುವ ಮಹಿಳೆಯನ್ನು ಕೆ ರಾಮಚಂದ್ರ ರಾವ್‌ ಮದುವೆಯಾಗಿದ್ದರು. ಕಾಫಿ ಎಸ್ಟೇಟ್‌ನ ಮಾಲಕಿಯ ಮೊದಲ ಮಗಳು ರನ್ಯಾರಾವ್‌ 

ರಾಮಚಂದ್ರ ರಾವ್‌ ಕರ್ನಾಟಕ ಕೇಡರ್​​​ನ ಅಧಿಕಾರಿ. 2023ರಲ್ಲಿ ಇವರಿಗೆ ಬಡ್ತಿ ನೀಡಿ ಪೊಲೀಸ್ ವಸತಿ, ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ ವರ್ಗಾವಣೆ ಮಾಡಲಾಗಿತ್ತು ಎಂದು ಹೇಳಲಾಗಿದೆ. 2014 ರಲ್ಲಿ ಇವರ ವಿರುದ್ಧವೂ ಹಣ ದುರ್ಬಳಕೆ ಆರೋಪ ಕೇಳಿಬಂದಿತ್ತು. ಕೋರ್ಟ್‌ನಲ್ಲಿ ಪ್ರಕರಣ ಇತ್ಯರ್ಥ ಕಂಡಿತ್ತು.

 

Share This Article