SHIVAMOGGA| MALENADUTODAY NEWS | ಮಲೆನಾಡು ಟುಡೆ Apr 12, 2025
ರಾಜಧಾನಿ ಬೆಂಗಳೂರಿನಲ್ಲಿ ಗುಪ್ತವಾಗಿ ನಡೆಯುತ್ತಿರುವ ಅಶ್ಲೀಲ ವಿಡಿಯೋ ದಂಧೇ ಇದೀಗ ಮೈಸೂರಿನಲ್ಲಿ ಬಯಲಿಗೆ ಬಂದಿದೆ. ಇದು ಫೋಷಕರು ತಮ್ಮ ಮಕ್ಕಳ ಬಗ್ಗೆ ಜಾಗ್ರತೆವಹಿಸುವ ಅಗತ್ಯವನ್ನು ತಿಳಿಸುತ್ತಿದೆ.
ಏನಿದು ಪ್ರಕರಣ : ಮೈಸೂರು ಜಿಲ್ಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳನ್ನು ಪುಸಲಾಯಿಸಿ ಆಕೆಗೆ ಹಣದ ಆಮೀಷವೊಡ್ಡಿ ಅಶ್ಲೀಲ ವಿಡಿಯೋಗಳನ್ನು ಶೂಟ್ ಮಾಡಿ, ಅದನ್ನು ಯುವಕರಿಗೆ ಸೇಲ್ ಮಾಡುತ್ತಿದ್ದ ಆರೋಪದ ಅಡಿಯಲ್ಲಿ ಪೊಲೀಸರು ಒಬ್ಬಾಕೆಯನ್ನು ಬಂಧಿಸಿದ್ದಾರೆ. ಒಟ್ಟು ಆರು ಮಂದಿ ವಿರುದ್ಧ ಈ ಬಗ್ಗೆ ಕೇಸ್ ದಾಖಲಿಸಲಾಗಿದೆ.
ತಮ್ಮ ಮಗಳ ಮೊಬೈಲ್ನಲ್ಲಿದ್ದ ಅಶ್ಲೀಲ ವಿಡಿಯೋಗಳನ್ನು ನೋಡಿದ ಪೋಷಕರೊಬ್ಬರು ಏನಿದು ಎಂದು ವಿಚಾರಿಸಿದಾಗ, ಯುವತಿ ನಡೆದ ಘಟನೆಯನ್ನು ವಿವರಿಸಿದ್ದಾಳೆ. 15 ಸಾವಿರ ರೂಪಾಯಿ ಕೊಟ್ಟು , ಅಶ್ಲೀಲ ವಿಡಿಯೋ ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದರು ಎಂದು ಯುವತಿ ವಿವರಿಸಿದ ಬಳಿಕ, ಪೋಷಕರು ಪೊಲೀಸರಿಗೆ ಈ ಬಗ್ಗೆ ದೂರು ಕೊಟ್ಟಿದ್ದಾರೆ. ಸದ್ಯ ಜಿಲ್ಲೆಯ ಠಾಣೆಯೊಂದರಲ್ಲಿ ಕೇಸ್ ದಾಖಲಾಗಿದೆ.
ರಾಜಧಾನಿಯಲ್ಲಿ ಇಂತಹದ್ದೊಂದು ದಂಧೆ ದೊಡ್ಡಮಟ್ಟದಲ್ಲಿ ನಡೆಯುತ್ತಿತ್ತು.ಈಗೀಗ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಈ ವಗ್ಗೆ ವರದಿಯಾಗುತ್ತಿದೆ. ಇಂತಹ ಪ್ರಕರಣಗಳಲ್ಲಿ ಕಾಲೇಜು ವಿದ್ಯಾರ್ಥಿನಿಯರನ್ನೆ ಟಾರ್ಗೆಟ್ ಮಾಡುವ ಗ್ಯಾಂಗ್ ಅವರನ್ನು ದುಡ್ಡಿನ ಆಮಿಷಕ್ಕೆ ಒಳಪಡಿಸಿ, ಅವರಿಂದಲೇ ಅಶ್ಲೀಲ ವಿಡಿಯೋಗಳನ್ನು ಶೂಟ್ ಮಾಡಿಸಿಕೊಂಡು ಮಾರಾಟ ಮಾಡುತ್ತವೆ.
ಅಲ್ಲದೆ ವಿದ್ಯಾರ್ಥಿನಿಯರನ್ನು ಹೆದರಿಸಿ ಅಶ್ಲೀಲ ಕೃತ್ಯಗಳಿಗೆ ಬಳಸಿಕೊಳ್ಳುತ್ತಾರೆ. ಹೀಗೆ ದುರ್ಬಳಕೆ ಮಾಡಿಕೊಂಡು ವೇಶ್ಯಾವಾಟಿಕೆಗೆ ಯುವತಿಯರನ್ನು ದೂಡಲಾಗುತ್ತದೆ. ಒಂದರೆಡು ಸಲ ಯುವತಿಯರನ್ನು ದುಷ್ಕೃತ್ಯಕ್ಕೆ ದೂಡಿ ಆನಂತರ ಅವರುಗಳ ಸಂಪರ್ಕದಿಂದ ಗ್ಯಾಂಗ್ ದೂರವಾಗುತ್ತದೆ. ಮರ್ಯಾದೆಗೆ ಅಥವಾ ದುಡ್ಡಿನ ಲಾಭಕ್ಕೆ ಸಂತ್ರಸ್ತ ಯುವತಿಯರು ನಡೆದ ಕೃತ್ಯವನ್ನು ತಮ್ಮಲ್ಲೇ ಅಡಗಿಸಿಡುತ್ತಿದ್ದಾರೆ.
ಹೈಟೆಕ್ ಸಂಪರ್ಕ ವ್ಯವಸ್ಥೆಯಲ್ಲಿ ನಡೆಯುವ ಈ ದಂಧೆಯಿಂದ ದುಷ್ಕರ್ಮಿಗಳು ಭಾರೀ ಲಾಭ ಪಡೆಯುತ್ತಿದ್ದಾರೆ. ಸದ್ಯ ಮೈಸೂರಿನ ಪ್ರಕರಣ ಪೋಷಕರಿಂದ ಬೆಳಕಿಗೆ ಬಂದಿದ್ದು, ಈ ಸಂಬಂಧ ಪೊಲೀಸರು ಸಹ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.