ತುಂಗಾ ನದಿಯಲ್ಲಿ ದನಗಳ ಮೈ ತೊಳೆಯಲು ಹೋದ ಅಶ್ರಫ್‌ ನಾಪತ್ತೆ ! ಹುಡುಕಾಟ

13

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 18, 2024

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಭದ್ರಾಪುರದಲ್ಲಿ ದನದ ಮೈತೊಳೆಯಲು ನದಿಗೆ ಇಳಿದ ವ್ಯಕ್ತಿಯೊಬ್ಬರು ನೀರುಪಾಲಾಗಿರುವ ಬಗ್ಗೆ ವರದಿಯಾಗಿದೆ. ನಾಪತ್ತೆಯಾದ ಅವರಿಗಗಾಗಿ ಇದೀಗ ಹುಡುಕಾಟ ನಡೆಯುತ್ತಿದೆ. 

ಭದ್ರಾವತಿ ತಾಲ್ಲೂಕು ಭದ್ರಾಪುರ ಗ್ರಾಮದ ಸಮೀಪ ಹರಿಯುವ ತುಂಗಾನದಿಯಲ್ಲಿ ಕಾಣೆಯಾಗಿರುವ ಅ‍ಶ್ರಫ್‌ ಎಂಬವರಿಗಾಗಿ ಹುಡುಕಾಟ ನಡೆದಿದೆ. ಇವರು ಹಸುಗಳ ಮೈ ತೊಳೆಯುವ ಸಲುವಾಗಿ ನದಿಗೆ ಇಳಿದಿದ್ದರು ಎನ್ನಲಾಗಿದೆ. ಆ ಬಳಿಕ ನಾಪತ್ತೆಯಾಗಿದ್ದಾರೆ. 

ವಿಚಾರ ತಿಳಿದು ಸ್ಥಳಕ್ಕೆ ಬಂದಿರುವ ಅಗ್ನಿಶಾಮಕ ಸಿಬ್ಬಂದಿ ತೆಪ್ಪ ಹಾಗೂ ರಕ್ಷಣಾ ಸಾಮಾಗ್ರಿಗಳ ಜೊತೆಯಲ್ಲಿ ನದಿಯಲ್ಲಿ ಕಾರ್ಯಾಚರಣೆ ನಡೆಸ್ತಿದ್ದಾರೆ. ಹೊಳೆಹೊನ್ನೂರು ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 

SUMMARY |  shivamogga fast news  shivamogga fast news man has gone missing from tunga river at Bhadrapur in Bhadravathi taluk 

KEY WORDS | shivamogga fast news , shivamogga fast news ,man missing from tunga river , Bhadrapur, Bhadravathi taluk 

Share This Article