SHIVAMOGGA | MALENADUTODAY NEWS | ಮಲೆನಾಡು ಟುಡೆ Jan 23, 2025
ಶಿವಮೊಗ್ಗ ಜಿಲ್ಲೆಯಲ್ಲಿ ದುಬಾರಿ ಟ್ರಾಪಿಕ್ ದಂಡಗಳ ನಡುವೆಯು ಅಪ್ರಾಪ್ತರಿಗೆ ವಾಹನಗಳನ್ನು ಓಡಾಡಲು ಕೊಡುವ ಪ್ರವೃತ್ತಿ ನಡೆಯುತ್ತಲೇ ಇದೆ. ಇದಕ್ಕೆ ಪೂರಕ ಎಂಬಂತೆ ತೀರ್ಥಹಳ್ಳಿಯಲ್ಲಿ ಅಪ್ರಾಪ್ತನಿಗೆ ವಾಹನ ಚಲಾಯಿಸಲು ಕೊಟ್ಟ ಪ್ರಕರಣ ಸಂಬಂಧ ಕೋರ್ಟ್ ಅಪ್ರಾಪ್ತನ ಪೋಷಕರಿಗೆ ₹25 ಸಾವಿರ ರೂಪಾಯಿ ಫೈನ್ ಹಾಕಿದೆ
ಏನಿದು ಪ್ರಕರಣ
ತೀರ್ಥಹಳ್ಳಿ ಪೇಟೆಯಲ್ಲಿ ಇಂದಿರಾ ನಗರ ಶಾಲೆ ಅಪ್ರಾಪ್ತನೊಬ್ಬ ಬೈಕ್ ಓಡಿಸುತ್ತಿದ್ದ ವೇಳೆ, ಅದನ್ನು ಅಲ್ಲಿನ ಪೊಲೀಸರು ಗಮನಿಸಿದ್ದಾರೆ. ವಿಸಿನಲ್ ಅಫೆನ್ಸ್ ಹಿನ್ನೆಲೆಯಲ್ಲಿ ವಾಹನ ತಡೆದು ಪರಿಶೀಲನೆ ನಡೆಸಿದ್ದಾರೆ. ಬಳಿಕ ಈ ಸಂಬಂಧ ತೀರ್ಥಹಳ್ಳಿ JMFC ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ತೀರ್ಥಹಳ್ಳಿ JMFC ಕೋರ್ಟ್ ಅಪ್ರಾಪ್ತನಿಗೆ ಬೈಕ್ ಚಲಾಯಿಸಲು ನೀಡಿದ ಪೋಷಕರಿಗೆ 25 ಸಾವಿರ ರೂಪಾಯಿ ದಂಡ ವಿಧಿಸಿದೆ.

SUMMARY | Tirthahalli JMFC court fined ₹25,000 to the minor’s parents in connection with the case of giving the vehicle to a minor
KEY WORDS | Thirthahalli JMFC court, traffic fine for minors parents, case of giving the vehicle to a minor