SHIVAMOGGA | MALENADUTODAY NEWS | ಮಲೆನಾಡು ಟುಡೆ Dec 16, 2024
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಪುಟ್ಟ ಗ್ರಾಮವೊಂದರ ಬಚ್ಚಲು ಮನೆಯಲ್ಲಿ ಅಡಗಿದ್ದ ಕಾಳಿಂಗ ಸರ್ಪವೊಂದನ್ನ ಕಾಳಿಂಗ ಮನೆಯ ಗೌರಿಶಂಕರ್ ಹಿಡಿದಿರುವ ವಿಡಿಯೋವೊಂದು ಇದೀಗ ಯೂಟ್ಯೂಬ್‌ನಲ್ಲಿ ಸಖತ್ ವೈರಲ್ ಆಗುತ್ತಿದೆ.
ಗೌರಿಶಂಕರ್ ಕಾಳಿಂಗ ಸರ್ಪದ ಮೇಲೆ ವಿಶೇಷ ಅಧ್ಯಯನ ಮಾಡಿರುವ ವ್ಯಕ್ತಿ. ಅವರದ್ದೆ ಆದ ಯೂಟ್ಯೂಬ್ ಚಾನಲ್‌ನಲ್ಲಿ ಕಾಳಿಂಗ ಸರ್ಪದ ಬಗ್ಗೆ ಜಾಗೃತಿ ಮೂಡಿಸುವ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿದ್ದಾರೆ. ಕಳೆದ 11 ದಿನಗಳ ಹಿಂದೆ ಅಪ್‌ಲೋಡ್ ಮಾಡಿರುವ ತೀರ್ಥಹಳ್ಳಿಯ ಮನೆಯೊಂದರ ಮಲ್ನಾಡ್ ಶೈಲಿಯ ಬಚ್ಚಲು ಮನೆಯಲ್ಲಿ ಅಡಗಿದ್ದ ಕಾಳಿಂಗದ ಸಂರಕ್ಷಣೆಯ ವಿಡಿಯೋ ವೈರಲ್ ಆಗುತ್ತಿದೆ.
ಏಳು ಕೇಜಿ ತೂಗುವ ಕಾಳಿಂಗ ಸರ್ಪ ಇಲ್ಲಿನ ಮನೆಯ ಬಚ್ಚಲಲ್ಲಿ ಅಡಗಿಕೊಂಡು ಠಿಕಾಣಿ ಹೂಡಿತ್ತು. ಅದನ್ನ ಹಿಡಿದು ಸಂರಕ್ಷಿಸುವ ಗೌರಿಶಂಕರ್ ಮತ್ತವರ ತಂಡ ಆ ಬಳಿಕ ಕಾಳಿಂಗಸರ್ಪವನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಈ ವೇಳೆ ಅಲ್ಲಿದ್ದವರಿಗೆ ಕಾಳಿಂಗದ ಬಗ್ಗೆ ಮಾಹಿತಿ ನೀಡಿದ ಗೌರಿಶಂಕರ್‌ರವರು ಸ್ಥಳಿಯರ ಜೊತೆಗೆ ಮಾತನಾಡುವ ತಮಾಷೆಯ ಮಾತುಗಳು ವಿಡಿಯೋದಲ್ಲಿದೆ. ವಿಡಿಯೋ 21 ಸಾವಿರಕ್ಕೂ ಅಧಿಕ ವೀವ್ಸ್ ಪಡೆದುಕೊಂಡಿದೆ.
SUMMARY | Gowrishankar caught a Kalinga snake in a village in Thirthahalli and safely released it into the forest.
KEY WORDS | Gowrishankar caught a Kalinga snake ,Thirthahalli