SHIVAMOGGA | MALENADUTODAY NEWS | ಮಲೆನಾಡು ಟುಡೆ Feb 3, 2025
ಕೇಂದ್ರ ಸರ್ಕಾರ ತನ್ನ ಬಜೆಟ್‌ನಲ್ಲಿ ಟ್ಯಾಕ್ಸ್ ಡಿಬೇಟ್ ಅಮೌಂಟ್ ಜಾಸ್ತಿ ಮಾಡಿ, 12 ಲಕ್ಷ ರೂಪಾಯಿವರೆಗೂ ವಾರ್ಷಿಕ ವರಮಾನಕ್ಕೆ ಟ್ಯಾಕ್ಸ್ ಇಲ್ಲದಂತೆ ವಿನಾಯಿತಿ ಘೋಷಿಸಿದೆ. ಆದರೆ ನೌಕರರು ಇದನ್ನ ಹೇಗೆ ಪಡೆದುಕೊಳ್ಳುತ್ತಾರೆ ಎಂಬ ಕುತೂಹಲಕ್ಕೆ ಇಲ್ಲೊಂದು ಉತ್ತರವಿದೆ
ಇದನ್ನು ಸಹ ಓದಿ | ಹೊಸ ಟ್ಯಾಕ್ಸ್ ಪ್ರಕಾರ, ₹12 ಲಕ್ಷ TAX ಫ್ರೀ ಹೆಂಗಾಗುತ್ತೆ? ಲೆಕ್ಕಾಚಾರ ಮಾಡೋದೇಗೇ? ಇಲ್ಲ ಅಂದ್ಮೇಲೆ ಕಟ್ಟೋದೇನು? ಪೂರ್ತಿ ವಿವರ
ಸ್ಟ್ಯಾಂಡರ್ಡ್ ಡಿಡಕ್ಷನ್, ಎನ್‌ಪಿಎಸ್ ಬಳಕೆ ಮಾಡಿಕೊಂಡು ತೆರಿಗೆ ಉಳಿಕೆ
ಮೊದಲನೇಯದ್ದಾಗಿ ನೌಕರರ ಸಂಬಳದ ಲೆಕ್ಕಾಚಾರದ ಅನ್ವಯ ಅವರ ಐಟಿಆರ್‌ನಲ್ಲಿ ಸ್ಟಾಂಡರ್ಡ್ ಡಿಡಕ್ಷನ್ ಎಂಬ ನಿಯಮ ಅನ್ವಯಿಸಲಾಗುತ್ತದೆ. ಇದರ ಅನ್ವಯ ಯಾವುದೇ ವೇತನದಾರ ₹75000 ವಿನಾಯ್ತಿ ಪಡೆಯಲು ಅರ್ಹನಾಗಿರುತ್ತಾನೆ. ಇದನ್ನು ನೌಕರನೊಬ್ಬ ಬಳಸಿಕೊಂಡರೆ, ವಾರ್ಷಿಕ ಆದಾಯ 12 7500ಕ್ಕೆ ತಲುಪಿದರೂ ಸಹ ತೆರಿಗೆ ಪಾವತಿಯಿಂದ ಪಾರಾಗಬಹುದು.
ಎನ್‌ಪಿಎಸ್ ಹೊಂದಿರುವ ನೌಕರರು ಸಹ ಟ್ಯಾಕ್ಸ್‌ನಿಂದ ಇನ್ನಷ್ಟು ವಿನಾಯಿತಿ ಪಡೆಯಬಹುದು, ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ಒಂದು ವೇಳೆ ವೇತನದಾರರು ತಮ್ಮ ವೇತನದಿಂದ ಪಿಂಚಣಿ ಯೋಜನೆಗೆ ಹಣ ಪಾವತಿ ಮಾಡುತ್ತಿದ್ದರೆ ಆ ಹಣವನ್ನು ಆದಾಯದಿಂದ ಕಡಿತ ಮಾಡಬಹುದು. ಆದರೆ ಇಲ್ಲಿ ಗ್ರಾಹಕರು ವಾರ್ಷಿಕ ಪಾವತಿ ಮಾಡುವ ಮೊತ್ತಕ್ಕೆ ಮಿತಿ ಇದೆ. ಆ ಮಿತಿಯೊಳಗಿನ ಪೂರ್ಣ ಮೊತ್ತವನ್ನೂ ಆದಾಯದಲ್ಲಿ ಕಡಿತ ಮಾಡುವ ಅವಕಾಶವಿದೆ.
SUMMARY | How employees can get exemption from income tax from tax rebate, standard deduction, new pension scheme
KEY WORDS | employees can get exemption from income tax , tax rebate, standard deduction, new pension scheme