SHIVAMOGGA| MALENADUTODAY NEWS | ಮಲೆನಾಡು ಟುಡೆ Mar 21, 2025
ತಾಳಗುಪ್ಪ ಮೈಸೂರು ಡೈಲಿ ಎಕ್ಸ್‌ಪ್ರೆಸ್ ರೈಲು ಸೇರಿದಂತೆ ಎರಡು ಪ್ರಮುಖ ರೈಲುಗಳ ನಿಲುಗುಡೆ ವಿಚಾರಕ್ಕೆ ಸಂಬಂಧಿಸಿದಂತೆ ನೈರುತ್ಯ ರೈಲ್ವೆ ವಿಭಾಗ ಮಹತ್ವದ ಅಪ್‌ಡೇಟ್ ನೀಡಿದೆ. ಈ ರೈಲುಗಳು ಸಂಪಿಗೆ ರಸ್ತೆ ಮತ್ತು ಮಲ್ಲೇಶ್ವರಂ ನಿಲ್ದಾಣಗಳಲ್ಲಿ ನಿಲುಗಡೆಯನ್ನು ಮುಂದುವರಿಸಲಿವೆ.
ನೈರುತ್ಯ ರೈಲ್ವೆ ಪ್ರಕಟಣೆ
ಪ್ರಯಾಣಿಕರ ಅನುಕೂಲಕ್ಕಾಗಿ ಸಂಪಿಗೆ ರಸ್ತೆ ಮತ್ತು ಮಲ್ಲೇಶ್ವರಂ ನಿಲ್ದಾಣಗಳಲ್ಲಿ ಈ ಕೆಳಗಿನ ರೈಲುಗಳಿಗೆ ತಾತ್ಕಾಲಿಕ ನಿಲುಗಡೆಗಳನ್ನು ಮುಂದುವರಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ.
ಈ ನಿಲುಗಡೆಗಳು ಏಪ್ರಿಲ್ 1, 2025 ರಿಂದ ಜೂನ್ 30, 2025 ರವರೆಗೆ ಮೂರು ತಿಂಗಳ ಅವಧಿಗೆ ಮುಂದುವರಿಯಲಿವೆ.
ರೈಲು ಸಂಖ್ಯೆ 16239/16240 ಚಿಕ್ಕಮಗಳೂರು – ಯಶವಂತಪುರ – ಚಿಕ್ಕಮಗಳೂರು ಡೈಲಿ ಎಕ್ಸ್‌ಪ್ರೆಸ್ ಏಪ್ರಿಲ್ 1, 2025 ರಿಂದ ಜೂನ್ 30, 2025 ರವರೆಗೆ ಸಂಪಿಗೆ ರಸ್ತೆ ನಿಲ್ದಾಣದಲ್ಲಿ ನಿಲ್ಲುತ್ತದೆ.
ರೈಲು ಸಂಖ್ಯೆ 16228 ತಾಳಗುಪ್ಪ – ಮೈಸೂರು ಡೈಲಿ ಎಕ್ಸ್‌ಪ್ರೆಸ್ ಏಪ್ರಿಲ್ 1, 2025 ರಿಂದ ಜೂನ್ 30, 2025 ರವರೆಗೆ ಮಲ್ಲೇಶ್ವರಂ ನಿಲ್ದಾಣದಲ್ಲಿ ನಿಲ್ಲುತ್ತದೆ ಎಂದು ಹುಬ್ಬಳ್ಳಿಯ ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮಡಿ ತಿಳಿಸಿದ್ದಾರೆ.