ತಾಯಿ, ಮಗು ಮೇಲೆ ಹಸು ಅಟ್ಯಾಕ್‌ | UP ಶಂಕಿತರ ಮೇಲೆ ನ್ಯಾಮತಿಯಲ್ಲಿ ಫೈರಿಂಗ್‌ | ಶಾಲೆ ಬಿಟ್ಟು ಕೆಲಸಕ್ಕೆ ಹೋದ ಮಕ್ಕಳು

13

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 16, 2025 ‌‌ ‌‌

ಸುದ್ದಿ 1 | ತಮಿಳುನಾಡಿನ ಕೊಳತ್ತೂರಿನ ಬಾಲಾಜಿ ನಗರದಲ್ಲಿ ಬೀದಿ ಹಸುವೊಂದು ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆ ಹಾಗೂ ಆಕೆಯ ಮಗುವಿನ ಮೇಲೆ ದಾಳಿ ಮಾಡಿದ ದೃಶ್ಯವೊಂದು ಹೊರಬಿದ್ದಿದೆ. ಘಟನೆಯಲ್ಲಿ  ತಾಯಿಯು ಮಗುವಿಗೆ ಹಸುವಿನಿಂದ ಏನಾಗದೇ ಇರಲಿ ಎಂದು ಹರಸಾಹಸ ಪಡುತ್ತಿರುವುದು ಕಾಣುತ್ತದೆ. ಇನ್ನೂ ಘಟನೆ ನೋಡುತ್ತಲೇ ಸ್ಥಳೀಯರು ಕೋಲು ಹಿಡಿದು ದನವನ್ನು ಬೆರೆಸಿ ತಾಯಿ ಹಾಗೂ ಮಗುವನ್ನ ಬಚಾವ್‌ ಮಾಡಿದ್ದಾರೆ.  

ಸುದ್ದಿ 2 | ದಾವಣಗೆರೆಯ ನ್ಯಾಮತಿಯಲ್ಲಿ ದರೋಡೆಗೆ ಯತ್ನಿಸುತ್ತಿದ್ದ ಯುಪಿ ಮೂಲದ ಆರೋಪಿಗಳ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಚೇಸಿಂಗ್‌ ವೇಳೆ ಪೊಲೀಸರಿಂದ ತಪ್ಪಿಸಿಕೊಂಡು ಕಾರಿನಲ್ಲಿ ಎಸ್ಕೇಪ್‌ ಆಗುತ್ತಿದ್ದ ಆರೋಪಿಗಳ ಮೇಲೆ ಪೊಲೀಸರು ಫೈರಿಂಗ್‌ ನಡೆಸಿದ್ದು, ಓರ್ವ ಕಾಲಿಗೆ ಗುಂಡೇಟು ಬಿದ್ದಿದೆ. ಇನ್ನೂ ಘಟನೆಯಲ್ಲಿ ನಾಲ್ವರು ಸಿಕ್ಕಿಬಿದ್ದಿದ್ದು ಮೂವರು ಎಸ್ಕೇಪ್‌ ಆಗಿದ್ದಾರೆ. ಈ ಸಂಬಂಧ ದಾವಣಗೆರೆ ಎಸ್ಪಿ ಸ್ಥಳ ಪರಿಶೀಲನೆ ನಡೆಸಿ ಮಾಹಿತಿ ಪಡೆದಿದ್ದಾರೆ.  

ಸುದ್ದಿ 3 | ಚಿಕ್ಕಮಗಳೂರು ಜಿಲ್ಲೆ ವಸತಿಶಾಲೆಯೊಂದರಲ್ಲಿ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳು ಮಂಗಳೂರು ಹೋಟೆಲ್‌ವೊಂದರಲ್ಲಿ ಪತ್ತೆಯಾಗಿದ್ದಾರೆ. ಓದಿನಲ್ಲಿ ಆಸಕ್ತಿ ಇಲ್ಲದ ಹಿನ್ನೆಲೆಯಲ್ಲಿ ಬೆಂಗಳೂರು ಹಾಗೂ ಚಿಕ್ಕಮಗಳೂರು ಮೂಲದ ವಿದ್ಯಾರ್ಥಿಗಳು ವಸತಿ ಶಾಲೆಯ ಕಾಂಪೌಂಡ್‌ ಹಾರಿ ಎಸ್ಕೇಪ್‌ ಆಗಿದ್ದರು. ಬಸ್‌ ಹಿಡಿದು ಮಂಗಳೂರು ತೆರಳಿದ್ದರು. ಅಲ್ಲಿ ಹೋಟೆಲ್‌ವೊಂದರಲ್ಲಿ ಕೆಲಸ ಕೇಳಲು ಮುಂದಾಗಿದ್ದರು. ಅಷ್ಟರಲ್ಲಿ ಚಿಕ್ಕಮಗಳೂರು ಪೊಲೀಸರು ವಿದ್ಯಾರ್ಥಿಗಳ ಇರುವಿಕೆಯನ್ನು ಪತ್ತೆ ಹಚ್ಚಿದ್ದಾರೆ.

Share This Article