SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 13, 2024
ಶಿವಮೊಗ್ಗ | ದೀವರ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಇದೇ ಡಿಸೆಂಬರ್15 ರಂದು ಶಿವಮೊಗ್ಗದ ಈಡಿಗರ ಭವನದಲ್ಲಿ ಆಯೋಜಿಸಲಾಗಿದೆ ಎಂದು ಧೀರ ದೀವರ ಬಳಗದ ಸಂಚಾಲಕರಾದ ಸುರೇಶ್ ಕೆ ಬಾಳೆಗುಂಡಿ ರವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಜನಾಂಗ ಎಂದರೆ ಅದು ದೀವರ ಜನಾಂಗ. ನಮ್ಮ ಜನಾಂಗ ಹಿಂದಿನಿಂದಲೂ ಕಲೆ ಹಾಗೂ ಸಂಸ್ಕೃತಿಗೆ ಹೆಚ್ಚಿನ ಆದ್ಯತೆಯನ್ನು ಕೊಡುತ್ತಾ ಬಂದಿದೆ. ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ ಹಾಗೂ ಕಲೆಯನ್ನು ತಿಳಿಸುವ ಉದ್ದೇಶದಿಂದ ಹಮ್ಮಿಕೊಂಡಿದ್ದೇವೆ ಎಂದರು. ಹಾಗೆಯೇ ಈ ಕಾರ್ಯಕ್ರದಲ್ಲಿ ಬೂಮಣ್ಣಿ ಬುಟ್ಟಿ, ಹಾಗೂ ಹಸೆ ಚಿತ್ತಾರ ಸ್ಫರ್ಧೆ ಮತ್ತು ಚಿತ್ರ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳಿಗ್ಗೆ 10 ಗಂಟೆಗೆ ಶ್ರೀ ರೇಣುಕಾನಂದ ಸ್ವಾಮೀಜಿ, ಶ್ರೀ ಯೋಗೇಂದ್ರ ಅವಧೂತರು ಹಾಗೂ ಡಾಕ್ಟರ್ ಎಚ್ ರಾಮಪ್ಪ ಉದ್ಘಾಟಿಸಲಿದ್ದಾರೆ. ಹಾಗೆಯೇ ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪನವರು, ಹಾಗೆ ಮಾಜಿ ಸಚಿವ ಕುಮಾರ್ ಬಂಗಾರಪ್ಪನವರು, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕಲಗೋಡು ರತ್ನಾಕರವರು ಹಾಗೆಯೇ ಮಾಜಿ ಸಚಿವರಾದ ಹರತಾಳು ಹಾಲಪ್ಪನವರು ಭಾಗವಹಿಸಲಿದ್ದಾರೆ.
ಮಧ್ಯಾಹ್ನ 2 ಗಂಟೆಗೆ ದೀರ ದೀವರ ಪುರಸ್ಕಾರ ಮತ್ತು ರಾಜ್ಯಮಟ್ಟದ ಚಿತ್ತಾರಗಿತ್ತಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧೀರ ದೀವರ ಬಳಗದ ಸಂಚಾಲಕರಾದ ನಾಗರಾಜ್ ನೇರಿಗೆ ವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ರಾಧಮ್ಮ ಈಡೂರು ಪರಶುರಾಮಪ್ಪ ಸಮಾಜ ಹೋರಾಟಗಾರರು. ಬಿಎಸ್ ಪುರುಷೋತ್ತಮ ಸಮಾಜವಾದಿ ಹೋರಾಟಗಾರರು. ಲಕ್ಷ್ಮಣ್ ಕೊಡಸೆ ಪತ್ರಕರ್ತರು ಹಿರಿಯ ಸಾಹಿತಿಗಳು. ರಾಜಪ್ಪ ಮಾಸ್ಟರ್ ಸಾಮಾಜಿಕ ಹೋರಾಟಗಾರರು ಸೊರಬ. ಈಶ್ವರ್ ನಾಯ್ಕ ಖ್ಯಾತ ನಾಟಿ ವೈದ್ಯರು ಮುಡುಬ ಇವರುಗಳಿಗೆ ಇವರ ಸಾಧನೆಯನ್ನು ಗುರುತಿಸಿ ಧೀರ ದೀವರ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ ಎಂದು ತಿಳಿಸಿದರು
SUMMARY | Suresh K Balegundi, convener of Dheera Devara Balaga, said that the cultural extravaganza will be held on December 15 at Edigara Bhavan in Shivamogga.
KEYWORDS | Suresh K Balegundi, Dheera Devara Balaga, Edigara Bhavan, Shivamogga,