SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 25, 2024
ಶಿವಮೊಗ್ಗ | ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿಯವರ ಬಂಧನದಲ್ಲಿ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರ ಕೈವಾಡವಿದೆ ಅಂತಾ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ದೂರಿದ್ದಾರೆ. ಈ ಹಿನ್ನಲೆ ಡಿಕೆ ಶಿವಕುಮಾರ್‌ರನ್ನು ಅರೆಸ್ಟ್ ಮಾಡಿದ್ರೆ ಎಲ್ಲಾ ವಿಷಯಗಳು ಹೊರಬರುತ್ತೆ ಎಂದು ಅವರು ಸುದ್ದಿಗೋಷ್ಟಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶ್ರೀಗಂಧ ಸಾಂಸ್ಕ್ರತಿಕ ಸಂಸ್ಥೆಯಿಂದ ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಈಶ್ವರಪ್ಪನವರು ಸಿ ಟಿ ರವಿ ಕೇಸ್‌ನ್ನು ಸಿ ಐ ಡಿ ಗೆ ವಹಿಸಿದ್ದರ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಅವರು ಈ ರೀತಿಯಾಗಿ ಉತ್ತರಿಸಿದರು.
ಪೊಲೀಸರು ಸಿ.ಟಿ ರವಿಯವರನ್ನು ಅರೆಸ್ಟ್ ಮಾಡಿರುವ ವಿಷಯ ನನಗೆ ತಿಳಿದಿರಲಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳುತ್ತಾರೆ. ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಇದೇರೀತಿ ಹೇಳುತ್ತಾರೆ. ನನ್ನ ಪ್ರಕಾರ ಈ ಬಂಧನದ ಹಿಂದೆ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರ ಕೈವಾಡವಿದೆ ಎಂಬ ಸಂಶಯವಿದೆ. ಮೊದಲು ಡಿಕೆ ಶಿವಕುಮಾರ್‌ರನ್ನು ಅರೆಸ್ಟ್ ಮಾಡಿದ್ರೆ ಎಲ್ಲಾ ವಿಷಯಗಳು ಹೊರಬರುತ್ತೆ, ಸಿಐಡಿಯವರು ಡಿಕೆ ಶಿವಕುಮಾರ್‌ರವರನ್ನು ಬಂಧಿಸಿ ಈ ವಿಷಯದ ಬಗ್ಗೆ ತನಿಖೆ ಮಾಡ್ತಾರಾ ಎಂದು ಪ್ರಶ್ನಿಸಿದರು.
ರಕ್ಷಣೆ ಕೊಡುವ ಸಲುವಾಗಿ ಎಲ್ಲರನ್ನೂ ಪೊಲೀಸರು ಕಾಡಿನಲ್ಲಿ ಕೂರಿಸ್ತಾರ
ಸಿ. ಟಿ ರವಿಯವರ ಕೇಸ್ ಅನ್ನು ಸಿ ಐ ಡಿ ಗೆ ಕೊಟ್ಟಿದ್ದು ಸರಿಯಲ್ಲ. ಇದರಲ್ಲಿ ಪೋಲೀಸರ ವೈಫಲ್ಯ ಎದ್ದು ಕಾಣುತ್ತದೆ. ಸಚಿವರ ವಿರುದ್ಧ ಆವಾಚ್ಯ ಶಬ್ದ ಬಳಸಿದ್ದರು ಎಂಬ ಕಾರಣಕ್ಕೆ ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ಅವರನ್ನ ಪೊಲೀಸರು ಬಂಧಿಸಿ ಐದು ಜಿಲ್ಲೆಗಳಲ್ಲಿ ಸುತ್ತಿಸಿದ್ದಾರೆ. ಅಷ್ಟೇ ಅಲ್ಲದೆ ಅವರನ್ನು ಕಾಡಿನಲ್ಲಿ ಕೂರಿಸಿದ್ದಾರೆ. ಇದನ್ನು ಕೇಳಿದಾಗ ಅವರಿಗೆ ರಕ್ಷಣೆ ನೀಡುವ ಸಲುವಾಗಿ ಊರನ್ನೆಲ್ಲ ಸುತ್ತಿಸಿ ಕಾಡಿನಲ್ಲಿ ಕೂರಿಸಿದ್ದೆವು ಎಂದು ಹೇಳಿದ್ದಾರೆ. ಇನ್ಮುಂದೆ ಯಾರಿಗಾದರೂ ರಕ್ಷಣೆ ಕೊಡುವುದಾದಾರೆ ಪೊಲೀಸರು ಅವರನ್ನು ಕರೆದುಕೊಂಡು ಹೋಗಿ ಕಾಡಿನಲ್ಲಿ ಕೂರಿಸುತ್ತಾರಾ ಎಂದು ಪೊಲೀಸರ ವಿರುದ್ಧ ಕೆಎಸ್ ಈಶ್ವರಪ್ಪ ವ್ಯಂಗ್ಯವಾಡಿದರು. ಸಿ.ಟಿ ರವಿಯವರು ಹೇಳುತ್ತಾರೆ ನನ್ನನ್ನು ಪೊಲೀಸರು ಬಂಧಿಸಿ ಕರೆದೊಯ್ಯುತ್ತಿರುವಾಗ ಪೊಲೀಸರಿಗೆ ಯಾರೋ ಸೂಚನೆ ನೀಡುತ್ತಿದ್ದರೆಂದು. ಆ ಸಂದರ್ಭದಲ್ಲಿ ಪೊಲೀಸರಿಗೆ ಸೂಚನೆ ನೀಡುತ್ತಿದ್ದ ಪ್ರಭಾವಿ ವ್ಯಕ್ತಿ ಯಾರೆಂಬ ರಿಪೋರ್ಟ್‌ನ್ನು ಸಿ.ಐ.ಡಿ ಅಧಿಕಾರಿಗಳು ಬಿಡುಗಡೆ ಮಾಡುತ್ತಾರೆಯೇ ಎಂದು ಪ್ರಶ್ನಿಸಿದರು.
SUMMARY | Deputy Chief Minister DK Shivakumar is involved in the arrest of MLC CT Ravi. Former Deputy CM Eshwarappa said that if DK Shivakumar is arrested, all things will come out.
KEYWORDS | police, KS Eshwarappa, C T Ravi, politics,