ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಇದೆ ಎಂಬುದಕ್ಕೆ ಸಿ.ಟಿ ರವಿ ಬಂಧನವೇ ಸಾಕ್ಷಿ
Education Minister Madhu Bangarappa said that the arrest of MLC C T Ravi is proof of the way the law and order situation in the state.
SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 21, 2024
ಸೊರಬ | ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಯಾವ ರೀತಿ ಇದೆ ಎಂಬುದಕ್ಕೆ ವಿಧಾನಪರಿಷತ್ ಸದಸ್ಯ ಸಿ ಟಿ ರವಿಯವರ ಬಂಧನವೇ ಸಾಕ್ಷಿ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ಸಿ.ಟಿ ರವಿಯವರ ವಿರುದ್ದ ವಾಗ್ಧಾಳಿ ನಡೆಸಿದರು.
ಇಂದು ಸೊರಬದ ಕುಬಟೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿರವರು ಅವಾಚ್ಯ ಶಬ್ದ ಬಳಸಿ ಮಾತನಾಡಿದರ ಬಗ್ಗೆ ಸಚಿವರು ಪ್ರತಿಕ್ರಿಯಿಸಿದರು.
ಮೊದಲಿನಿಂದಲೂ ಈ ರೀತಿ ಹೇಳಿಕೆ ನೀಡುವ ಕೆಟ್ಟ ಚಾಳಿ ಸಿ.ಟಿ ರವಿಯವರಿಗಿದೆ. ಅಮಿತ್ ಶಾರವರು ಅಂಬೇಡ್ಕರ್ ವಿರುದ್ದ ಮಾತನಾಡಿದ ವಿಷಯ ಚರ್ಚೆ ಆಗಬಾರದು ಎಂಬ ಕಾರಣಕ್ಕೆ ಸಿ.ಟಿ ರವಿ ಆ ರೀತಿ ವರ್ತನೆ ಮಾಡಿದ್ದಾರೆ. ಸಂವಿಧಾನ ಮತ್ತು ಮಹಿಳೆಯ ಮೇಲೆ ಅಸಹ್ಯ ಪದಬಳಕೆ ಬಿಜೆಪಿ ನಾಯಕರು ಬಳಸಿದ್ದಾರೆ. ಈ ಹಿನ್ನಲೆ ಸಿ.ಟಿ.ರವಿಯವರಿಗೆ ಕಠಿಣ ಶಿಕ್ಷೆ ಕೂಡಬೇಕು. ಈ ರಾಜ್ಯದಲ್ಲಿ ಕಾನೂನು ಇದೆ ಎಂದರೆ ಅದಕ್ಕೆ ಸಿ.ಟಿ ರವಿ ಬಂಧನ ಸಾಕ್ಷಿ ಎಂದರು
ಕ್ರಿಮಿನಲ್ ನಂಬರ್ ಒನ್ ಅಮಿತ್ ಶಾ | ಶಿಕ್ಷಣ ಸಚಿವ ಮಧು ಬಂಗಾರಪ್ಪ
ಅಂಬೇಡ್ಕರ್‌ರವರ ಬಗ್ಗೆ ಅಮಿತ್ ಶಾ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿ ಮಾತನಾಡಿದ ಮಧು ಬಂಗಾರಪ್ಪ ಸಂವಿಧಾನದ ಹೆಸರಿನಲ್ಲಿ ಪ್ರಮಾಣ ಮಾಡಿ ಇವರು ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ನಾವೆಲ್ಲಾ ಇಂದು ಪ್ರಜಾಪ್ರಭುತ್ವದಲ್ಲಿ ಇದ್ದೇವೆ, ನಮಗೆಲ್ಲ ದೇವರು ಬಾಬಾಸಾಹೇಬ ಅಂಬೇಡ್ಕರ್,ಮಹಾತ್ಮ ಗಾಂದಿ, ಅಂಬೇಡ್ಕರ್ ದೇಶದ ಎರಡು ಕಣ್ಣುಗಳು. ಈ ರೀತಿಯ ಹೇಳಿಕೆ ಕೊಡುವ ಅಮಿತ್ ಶಾ ಕ್ರಿಮಿನಲ್ ನಂಬರ್ ಒನ್ ಎಂದರು . ಹಾಗೆಯೇ ಅಂದು ಬಂಗಾರಪ್ಪ ಬಿಜೆಪಿ ಹೋಗಲಿಲ್ಲ ಅಂದಿದ್ರೆ ಬಿಜೆಪಿಯವರು ಗೆಲ್ಲುತ್ತಿರಲಿಲ್ಲ.ಬಿಜೆಪಿಯವರು ಕ್ರಿಮಿನಲ್ ಚಿಂತನೆವುಳ್ಳವರು ಇವರದ್ದು ಒಡೆದಾಳುವ ನೀತಿ. ಗಾಂಧಿಯವರನ್ನು ಕೊಂದವರನ್ನು ಅವರು ದೇವರಿಗೆ ಸಮಾ ಎನ್ನುತ್ತಾರೆ ಬಿಜೆಪಿ ಬ್ರಿಟಿಷ್ ಜನತಾ ಪಾರ್ಟಿ ಎಂದು ಬಿಜೆಪಿ ವಿರುದ್ದ ಕಿಡಿಕಾರಿದರು.
SUMMARY | Education Minister Madhu Bangarappa said that the arrest of MLC C T Ravi is proof of the way the law and order situation in the state.
KEYWORDS | Education Minister, Madhu Bangarappa, C T Ravi, politics,