SHIVAMOGGA | MALENADUTODAY NEWS | ಮಲೆನಾಡು ಟುಡೆ Jan 3, 2025
ಡಾ.ಧನಂಜಯ್ ಸರ್ಜಿಯವರ ಹೆಸರಿನಲ್ಲಿ ಬಂದ ಸ್ವೀಟ್ ಪಾರ್ಸಲ್ ಕೇವಲ NES ಸಂಸ್ಥೆಯ ಕಾರ್ಯದರ್ಶಿ ನಾಗರಾಜ್ ರವರಿಗಷ್ಟೆ ಅಲ್ಲದೆ ವೈದ್ಯರಾದ ಡಾ. ಅರವಿಂದ್ ಹಾಗೂ ಡಾ. ಪವಿತ್ರ ಅವರಿಗೆ ಸ್ವೀಟ್ಸ್ ಬಾಕ್ಸ್ ರವಾನೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ಮಲೆನಾಡು ಟುಡೆ ವಿಚಾರವನ್ನು ಕೆದಕಿದಾಗ ಕೆಲವೊಂದು ಇಂಪಾರ್ಟ್‌ಟೆಂಟ್ ಮಾಹಿತಿ ಲಭ್ಯವಾಗಿದೆ. ಅದರ ಬಗ್ಗೆ JP ಬರೆಯುತ್ತಾರೆ.
ಪ್ರಕರಣ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಕೇಸ್ ಆಗಿದೆ. ಕೇಸ್ ಆಗುವ ಹೊತ್ತಿಗಾಗಲೇ ಕೆಲವೊಂದು ಸುಳಿವು ಪೊಲೀಸ್ ಇಲಾಖೆಗೂ ಸಿಕ್ಕಾಗಿದೆ. ಮೊದಲನೇದಾಗಿ ಇಡೀ ಪ್ರಕರಣ ಒಂದು ಸಂಸ್ಥೆಯನ್ನು ಟಾರ್ಗೆಟ್ ಮಾಡಿದಂತೆ ಮೇಲ್ನೋಟಕ್ಕೆ ಸಹಜವಾಗಿ ಎನ್ನಿಸುತ್ತಿದೆ. ಆ ಶಂಕೆ ಪೊಲೀಸ್ ಇಲಾಖೆಗೂ ಇದೆ. ಎಂಎಲ್‌ಸಿ ಸರ್ಜಿಯವರ ಹೆಸರಿನಲ್ಲಿ ಸ್ವೀಟ್ ಬಾಕ್ಸ್ ಕಳುಹಿಸಿರುವುದರಿಂದ ಇದೊಂದು ಗಂಭೀರ ಪ್ರಕರಣ ಎನಿಸಿದೆ. ಆ ಕಾರಣಕ್ಕೆ ಶಿವಮೊಗ್ಗದ ಬುದ್ದಿವಂತ ಅಧಿಕಾರಿಗಳು ಪ್ರಕರಣದ ಬೇರೆ ಬೇರೆ ಆಂಗಲ್‌ಗಳನ್ನು ತಡಕಾಡುತ್ತಿದ್ದಾರೆ.
ಸದ್ಯ ಕೊರಿಯರ್‌ನ ಮೂಲ ಪತ್ತೆಯಾಗಿದೆ. ಭದ್ರಾವತಿಯಿಂದ ಕೊರಿಯರ್ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿದೆ. ಈ ವಿಚಾರವಾಗಿ ಸದ್ಯಕ್ಕೆ ಇದಕ್ಕಿಂತ ಹೆಚ್ಚು ಹೇಳಲಾಗದು. ಇನ್ನೂ ಪ್ರಖ್ಯಾತ ವೈದ್ಯರು ಹಾಗೂ ಜನಪ್ರತಿನಿಧಿಯ ಹೆಸರಲ್ಲಿಯೇ ಯಾಕೆ ಕೊರಿಯರ್ ಕಳುಹಿಸಲಾಗಿದೆ ಎಂಬುದು ಪ್ರಶ್ನೆ. ಟಾರ್ಗೆಟೆಡ್ ವ್ಯಕ್ತಿಗಳಲ್ಲಿ ನಂಬಿಕೆ ಮೂಡಿಸುವ ಸಲುವಾಗಿ ಸರ್ಜಿಯವರ ಹೆಸರು ಬಳಸಲಾಗಿದೆಯೇ? ಅಥವಾ ಪ್ರಕರಣದ ಮೂಲಕ ಸರ್ಜಿಯವರ ತೇಜೋವದೆಗೆ ಹುನ್ನಾರ ನಡೆದಿತ್ತಾ?
ಪ್ರಸ್ತುತ, ಜೆಪಿ ಮೂಲಗಳ ಪ್ರಕಾರ, ಸರ್ಜಿಯವರನ್ನ ಹೆಸರನ್ನು ಕೇವಲ ತಮ್ಮ ಟಾರ್ಗೆಟ್‌ನ್ನ ರೀಚ್ ಆಗಲು ಬಳಸಲಾಗಿತ್ತು ಎನ್ನುವ ವಿಚಾರವಿದೆ. ಮತ್ತೊಂದೆಡೆ ಪಾರ್ಸಲ್‌ನಲ್ಲಿ ಬಂದ ಸ್ವೀಟ್ ತಿಂದವರು ಅವರಿಗೆ ಕಹಿ ಅನುಭವ ಆದ್ದರಿಂದ ಅದನ್ನು ಬಿಸಾಡಿದ್ದಾರೆ. ಹೊರತಾಗಿ ತಿಂದವರ ಆರೋಗ್ಯದಲ್ಲಿ ವ್ಯತ್ಯಾಸವಾಗಿಲ್ಲ. ಅಷ್ಟರಮಟ್ಟಿಗೆ ಸ್ವೀಟ್ ವಿಷಕಾರಿಯಾಗಿರಲಿಲ್ಲ ಎಂದನಿಸುತ್ತದೆ.
ಇದನ್ನ ಗಮನಿಸಿದರೆ, ಪ್ರಕರಣ ಬೆದರಿಸುವ ಕಾರಣಕ್ಕಾಗಿ ನಡೆದಿರಬಹುದು? ಶುಭಾಶಯವನ್ನು ಮುಂದೆ ಕೆಟ್ಟದಾಗಲಿದೆ ಎಂದು ತೋರಿಸುವುದಕ್ಕಾಗಿ ಬಳಸಿಕೊಂಡಿರಬಹುದಾದ ಸಾಧ್ಯತೆಗಳಿವೆ.ಪ್ರಕರಣ ಮೇಲ್ನೋಟಕ್ಕೆ ಸರಳವಾಗಿ ಹಾಗೂ ಅಷ್ಟೆ ಗಂಭೀರವಾಗಿ ಕಾಣಿಸಿದರೂ ಸಹ ಒಳಗೊಳಗೆ ಸಿಹಿಕಹಿಯ ಹೂರಣಗಳನ್ನು ಹೊಂದಿದೆ ಎಂಬುದಂತೂ ನಿಕ್ಕಿ. ತನಿಖೆಯ ನಂತರವಷ್ಟೆ ಅವೆಲ್ಲವೂ ಆಚೆಗೆ ಬರಲಿದೆ.
ಡಾ.ಸರ್ಜಿ ಹೆಸರಲ್ಲಿ ಕೊರಿಯರ್ ಮೂಲಕ ಬಂತು ಪಾಯ್ಸನ್ ಸ್ವೀಟ್ ಬಾಕ್ಸ್ ? ಕೋಟೆ ಠಾಣೆಯಲ್ಲಿ FIR |
SUMMARY | Sweet box sent by anonymous person, Dr Dhananjay Sarji, FIR filed at Kote Police Station
KEY WORDS | Sweet box sent by anonymous person, Dr Dhananjay Sarji, FIR filed at Kote Police Station