SHIVAMOGGA | MALENADUTODAY NEWS | ಮಲೆನಾಡು ಟುಡೆ Jan 3, 2025
ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಲ್ಲೊಂದು ವಿಚಿತ್ರ ಪ್ರಕರಣ ದಾಖಲಾಗಿದೆ. ವಿಧಾನಪರಿಷತ್ ಸದಸ್ಯ ಡಾ. ಧನಂಜಯ್ ಸರ್ಜಿಯವರ ಹೆಸರಲ್ಲಿ ವ್ಯಕ್ತಿಯೊಬ್ಬರಿಗೆ ಕಳುಹಿಸಿದ ಸ್ವೀಟ್ ಬಾಕ್ಸ್ ಬಗ್ಗೆ ಇದೀಗ ಅನುಮಾನ ಮೂಡಿದ್ದು, ಈ ಸಂಬಂಧ ಕೇಸ್ ಸಹ ದಾಖಲಾಗಿದೆ.
ನಗರದ ಕೋಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಪ್ರಕಾರ, ಹೊಸ ವರುಷದ ಮೊದಲನೇ ದಿನ ಕೋರಿಯರ್ ಮುಖಾಂತರ ಹೊಸ ವರ್ಷದ ಶುಭಾಷಯ ಕೋರಿದ ಪತ್ರ ಹಾಗೂ ಸಿಹಿ ತಿಂಡಿಯ ಬಾಕ್ಸ್ ಒಂದನ್ನ ಎನ್.ಇ.ಎಸ್ ಕಾಲೇಜ್ನ ಸೆಕ್ರೆಟರಿ ಎಸ್.ಎನ್ ನಾಗರಾಜರವರಿಗೆ ಕಳುಹಿಸಲಾಗಿತ್ತು. ಡಾ. ಧನಂಜಯ್ ಸರ್ಜಿ ಹೆಸರಲ್ಲಿ ಈ ಕೊರಿಯರ್ನ್ನ ಕಳುಹಿಸಲಾಗಿತ್ತು. ಆದರೆ ಬಾಕ್ಸ್ನಲ್ಲಿದ್ದ ಸ್ವೀಟ್ಸ್ ಬಹಳಷ್ಟು ಕಹಿಯಾಗಿದ್ದರಿಂದ ಅದರ ಬಗ್ಗೆ ಅನುಮಾನಗೊಂಡು ಸೆಕ್ರೆಟ್ರಿ ನಾಗರಾಜ್ರವರು ನೇರವಾಗಿ ಧನಂಜಯ್ ಸರ್ಜಿಯವರಿಗೆ ಫೋನಾಯಿಸಿ ವಿಚಾರಿಸಿದ್ದಾರೆ. ಈ ವೇಳೆ ಧನಂಜಯ್ ಸರ್ಜಿಯವರು ತಾವು ಸ್ವೀಟ್ ಕಳಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಅನುಮಾನ ಹೆಚ್ಚಾದ ಹಿನ್ನೆಲೆಯಲ್ಲಿ ಢಾ.ಧನಂಜಯ್ ಸರ್ಜಿಯವರ ಆಪ್ತ ಸಚಿನ್ ಎಂಬವರು ಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರ ಅನ್ವಯ ಕೇಸ್ ದಾಖಲಾಗಿದೆ.
SUMMARY | Sweet box sent by anonymous person in the name of Dr. Dhananjay Sarji. FIR filed at Kote Police Station

KEY WORDS | Sweet box sent by anonymous person, Dr Dhananjay Sarji, FIR filed at Kote Police Station