SHIVAMOGGA | MALENADUTODAY NEWS | ಮಲೆನಾಡು ಟುಡೆ Jan 31, 2025
ಶಿವಮೊಗ್ಗ ಪೊಲೀಸ್ ಶಿವಮೊಗ್ಗದಲ್ಲಿ ವಿಶಿಷ್ಟ ರೀತಿಯ ಜಾಗೃತಿ ಪ್ರದರ್ಶನವೊಂದನ್ನು ಆಯೋಜಿಸಿದೆ. ಸಾಮಾನ್ಯ ವಿವಿಧ ರೀತಿಯ ಎಕ್ಸ್‌ಫೋಗಳನ್ನು ಜನರು ಗಮನಿಸಿಯೇ ಇರುತ್ತಾರೆ. ಆದರೆ ಪೊಲೀಸ್ ಇಲಾಖೆ ಟ್ರಾಫಿಕ್ ವಿಚಾರದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಎಕ್ಸ್‌ಫೋವೊಂದನ್ನು ಶಿವಮೊಗ್ಗ ಕೋಟೆ ಪೊಲೀಸ್ ಠಾಣೆ ಗೆಸ್ಟ್ ಹೌಸ್ ಆವರಣದಲ್ಲಿ ಆಯೋಜಿಸಿದೆ. ಇದಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ರಸ್ತೆ ಸಂಚಾರ ನಿಯಮಗಳ ಜಾಗೃತಿ ಪ್ರದರ್ಶನ 2025 ಎಂದು ಹೆಸರಿಟ್ಟಿದೆ.
ಶಿವಮೊಗ್ಗ ಸಂಚಾರಿ ಪೊಲೀಸ್
ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಸಂಚಾರ ನಿಯಮಗಳ ಅರಿವು ಮೂಡಿಸುವ ಸಲುವಾಗಿ ಹಾಗೂ ಶಿವಮೊಗ್ಗ ನಗರ ರಸ್ತೆ ಸುರಕತಾ ಮಾಸಾಚರಣೆ ಅಂಗವಾಗಿ ಈ ಅಭಿಯಾನವನ್ನು ಕೈಗೊಳ್ಳಲಾಗಿದೆ.
ಈ ಅಭಿಯಾನದಲ್ಲಿ ಪಾಲ್ಗೊಂಡ ಎಸ್‌ಪಿ ಮಿಥುನ್ ಕುಮಾರ್, ಶಿವಮೊಗ್ಗ ಜಿಲ್ಲೆಯಲ್ಲಿ ಅಪಘಾತದಲ್ಲಿ 2024-25ನೇ ಸಾಲಿನಲ್ಲಿ 363 ಜನ ಪ್ರಾಣ ತೆತ್ತಿದ್ದಾರೆ ಎಂಬ ಅಂಶವನ್ನು ಹಂಚಿಕೊಳ್ಳುವ ಟ್ರಾಫಿಕ್ ಅವರೆನೆಸ್ ಅಗತ್ಯತೆಯನ್ನು ಸೂಚಿಸಿದರು.
ಟ್ರಾಫಿಕ್ ಪೊಲೀಸ್ ಎಕ್ಸ್‌ಫೋದಲ್ಲಿ ವಾಹನಗಳ ತರಬೇತಿ, ಸಂಚಾರಿ ನಿಯಮಗಳ ಪಾಲನೆ ಅಗತ್ಯತೆ ಮತ್ತು ಅದರ ಕ್ರಮಗಳು ಹಾಗೂ ವಿವಿಧ ಟ್ರಾಫಿಕ್ ಸಿಗ್ನಲ್, ಚಿಹ್ನೆಗಳ ಬಗೆಗಿನ ಮಾಹಿತಿಯನ್ನು ನೀಡುವ ಸ್ಟಾಲ್‌ಗಳನ್ನು ಹಾಕಲಾಗಿತ್ತು.
ಇಷ್ಟೆ ಅಲ್ಲದೆ ಮೊಬೈಲ್ ನಲ್ಲಿ ಮಾತನಾಡುತ್ತಾ ಡ್ರೈವ್ ಮಾಡಿದರೆ ಏನಾಗುತ್ತದೆ ಎಂಬುದಕ್ಕೆ ಸಾಕ್ಷಿ ತೋರಿಸುವ ತೀರಿಯಲ್ಲಿ ಅಪಘಾತಕ್ಕೀಡಾದ ಬೈಕ್‌ಗಳನ್ನ ಇಡಲಾಗಿದೆ. ಜೊತೆಯಲ್ಲಿ ಅಪಘಾತದ ಚಿತ್ರಣವನ್ನು ಇಲ್ಲಿ ಪ್ರದರ್ಶಿಸಲಾಗಿದೆ.
ಮೇಲಾಗಿ ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಅಪಘಾತ ತಡೆಗಟ್ಟಲು ವಹಿಸಬೇಕಾದ ಎಚ್ಚರಿಕೆಯ ಬಗ್ಗೆಯು ಪ್ರದರ್ಶನದಲ್ಲಿ ಮಾಹಿತಿ ನೀಡಲಾಗಿದೆ. ಜೊತೆಯಲ್ಲಿ good samaritan ಎಂಬ ಸ್ಟ್ಯಾಂಡ್ ಹೊಂದಿರುವ ಸೆಲ್ಫಿ ಪಾಯಿಂಟ್ ಕೂಡ ಜನರಿಗೆ ಇಡಲಾಗಿದೆ. ಇದು ಹೆಚ್ಚು ಖುಷಿಕೊಡಲಿದೆ
ಇವೆಲ್ಲದರ ಜೊತೆಯಲ್ಲಿ ಸೈಬರ್ ವಂಚನೆಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಶಿವಮೊಗ್ಗ ಪೊಲೀಸರು ಮಾಡುತ್ತಿದ್ದಾರೆ. ಹಾಗೂ ಇವತ್ತು ಆರಂಭಗೊಂಡಿರುವ ಎಕ್ಸ್‌ಪೊ ನಾಳೆಯು ಸಹ ಜನರ ವೀಕ್ಷಣೆಗೆ ಸಿಗಲಿದೆ.
ಇನ್ನೂ ವಿಶೇಷವಾಗಿ ಎಕ್ಸ್‌ಪೋದಲ್ಲಿ ವಿದ್ಯಾರ್ಥಿಗಳಿಗೆ ಟ್ರಾಫಿಕ್ ಅವರೆನೆಸ್ ಮೂಡಿಸಲಾಗಿದೆ. ಸಂಚಾರಿ ನಿಯಮಗಳ ಬಗ್ಗೆ ಹಾಗೂ ಸಂಚಾರದ ವೇಲೆ ತಿಳಿದುಕೊಳ್ಳಬೇಕಾದ ಅಂಶಗಳನ್ನು ತಿಳಿದ ವಿದ್ಯಾರ್ಥಿಗಳು ಬಳಿಕ ಎಸ್‌ಪಿ ಮಿಥುನ್ ಕುಮಾರ್‌ರವರ ಬಳಿ ಸೆಲ್ಫಿಗಾಗಿ ಮುಗಿಬಿದ್ದರು. ಸಮವಸ್ತ್ರದ ಅಧಿಕಾರಿಗಳ ಜೊತೆಗೆ ಶೇಕ್ ಹ್ಯಾಂಡ್ ಕೊಟ್ಟು ತಮ್ಮನ್ನು ರಕ್ಷಿಸುವ ಪೊಲೀಸ್ ಇಲಾಖೆ ಸೆಲ್ಯೂಟ್ ಹೊಡೆದರು. ಫೈನಲಿ ಹೇಳುವುದಾದರೆ, ಶಿವಮೊಗ್ಗದಲ್ಲಿ ಟ್ರಾಫಿಕ್ ಪೊಲೀಸರು ದುಬಾರಿ ಫೈನ್‌ಗಷ್ಟೆ ಫೇಮಸ್ ಅಲ್ಲ ಎಂಬುದಕ್ಕೆ ಇವತ್ತಿನ ಎಕ್ಸ್‌ಪೋ ವಿಶೇಷವಾಗಿ ಸಾಕ್ಷಿಯಾಗಿತ್ತು.
SUMMARY | The District Police Department organized a Road Traffic Rules Awareness Exhibition 2025 at the Shivamogga Kote Police Station Guest House premises.
KEY WORDS | District Police Department , Road Traffic Rules Awareness Exhibition 2025 , Shivamogga Kote Police Station ,