SHIVAMOGGA| MALENADUTODAY NEWS | ಮಲೆನಾಡು ಟುಡೆ Mar 16, 2025
ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರು ಭಾಗದಲ್ಲಿ ನಿನ್ನೆ ದಿನದ ಕಾರೊಂದು ಟೈರ್ ಸ್ಫೋಟಗೊಂಡು ಬೈಕ್‌ಗೆ ಡಿಕ್ಕಿಯಾಗಿ ಅಪ್‌ಸೆಟ್ ಆಗಿದೆ. ಘಟನೆಯಲ್ಲಿ 40 ವರ್ಷದ ಮಲ್ಲಿಕಾರ್ಜುನ್ ಎಂಬವರು ಸಾವನ್ನಪ್ಪಿದ್ದಾರೆ.
ಹೊಳೆಹೊನ್ನೂರು | ಪಂಪ್‌ಸೆಟ್ ಆನ್ ಮಾಡುವಾಗ ಕರೆಂಟ್ ಶಾಕ್ | 18 ಹರೆಯದ ಯುವತಿ ಸಾವು
ಇಲ್ಲಿನ ಚನ್ನಗಿರಿ ರಸ್ತೆಯಲ್ಲಿ ಘಟನೆ ಸಂಭವಿಸಿದೆ, ಟೈರ್ ಸ್ಫೋಟಗೊಂಡ ಪರಿಣಾಮ ಕಾರೊಂದು ಇನ್ನೊಂದು ಕಾರಿಗೆ ಡಿಕ್ಕಿಯಾಗಿದೆ. ಆ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ ಹರಮಘಟ್ಟದ ನಿವಾಸಿ ಮಲ್ಲಿಕಾರ್ಜುನ ಮೃತಪಟ್ಟಿದ್ದಾರೆ.
ಇನ್ನೂ ಘಟನೆಯಲ್ಲಿ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೆ ಈಗಾಗಲೇ ಚಿಕಿತ್ಸೆ ಒದಗಿಸಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಒಂದು ಗಂಟೆಗೂ ಹೆಚ್ಚಿನ ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು.